Wednesday, December 25, 2024
Homeರಾಷ್ಟ್ರೀಯ | Nationalರಜೌರಿ ಜಿಲ್ಲೆಯ ಗಡಿಯಲ್ಲಿ 5.5 ಕೆಜಿ ಹೆರಾಯಿನ್ ವಶ

ರಜೌರಿ ಜಿಲ್ಲೆಯ ಗಡಿಯಲ್ಲಿ 5.5 ಕೆಜಿ ಹೆರಾಯಿನ್ ವಶ

Two held with 5.5 kg heroin near LoC in J-K's Rajouri

ರಜೌರಿ, ಡಿ.16 (ಪಿಟಿಐ)- ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಿ ಅವರಿಂದ 5.50 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೌಶೇರಾ ಸೆಕ್ಟರ್ನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಭಾರೀ ಪ್ರಮಾಣದ ಹೆರಾಯಿನ್ ವಶಪಡಿಸಿಕೊಂಡಿದ್ದು, ಗಡಿಯಾಚೆಯಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡುವ ಡ್ರಗ್ ಪೆಡ್ಲರ್ಗಳ ಪ್ರಯತ್ನವನ್ನು ವಿಫಲಗೊಳಿಸಲಾಗಿದೆ ಎಂದು ಅವರು ಹೇಳಿದರು.

ಆರೋಪಿಗಳಾದ ಸಜನ್ ಕುಮಾರ್ (25) ಮತ್ತು ಸುಭಾಷ್ ಚಂದರ್ (36) ಅವರನ್ನು ಸೇನೆ ಮತ್ತು ಪೊಲೀಸರು ತಡರಾತ್ರಿ ಶೇರ್ ಮತ್ತು ಕನೇಟಿ ಗ್ರಾಮಗಳಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಶನಿವಾರ ಜಮುವಿನ ಅರ್ನಿಯಾ ಸೆಕ್ಟರ್ನ ಅಂತರಾಷ್ಟ್ರೀಯ ಗಡಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ಎಫ್) ಪಾಕಿಸ್ತಾನದ ಡ್ರೋನ್ ಮತ್ತು ಸುಮಾರು ಅರ್ಧ ಕಿಲೋಗ್ರಾಂಗಳಷ್ಟು ಉನ್ನತ ದರ್ಜೆಯ ಮಾದಕ ದ್ರವ್ಯವನ್ನು ವಶಪಡಿಸಿಕೊಳ್ಳಲಾಗಿತ್ತು.

RELATED ARTICLES

Latest News