ಕಥುವಾ/ಜಮು, ಡಿ 18 (ಪಿಟಿಐ) ಜಮು ಮತ್ತು ಕಾಶೀರದ ಕಥುವಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಬಾಡಿಗೆ ವಸತಿಗಹಕ್ಕೆ ಬೆಂಕಿ ಹೊತ್ತಿಕೊಂಡಾಗ ಉಸಿರುಗಟ್ಟಿ ಸಾವನ್ನಪ್ಪಿದ ಆರು ಜನರ ಪೈಕಿ ಮಾಜಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಮೂರು ವರ್ಷದ ಮೊಮಗ ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ಗಾಯಗೊಂಡಿರುವ ಇತರ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಳಗಿನ ಜಾವ 2:30 ರ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಸ್ಥಳೀಯರು ರಕ್ಷಿಸಲು ಧಾವಿಸಿದರು. ಮನೆಯಲ್ಲಿ ದಟ್ಟ ಹೊಗೆ ತುಂಬಿದ್ದು, ನ್ದೆಿಯಲ್ಲಿದ್ದವರು ಉಸಿರುಗಟ್ಟುತ್ತಿರುವುದನ್ನು ಗಮನಿಸಿ ಅವರನ್ನು ರಕ್ಷಿಸಿದರು.
ಸಂತ್ರಸ್ತರನ್ನು ಕಥುವಾದಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಅಲ್ಲಿ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಆರು ಮಂದಿಯನ್ನು ಸತ್ತಿದ್ದಾರೆ ಎಂದು ಘೋಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತರನ್ನು 81 ವರ್ಷದ ಮಾಜಿ ಉಪ ಎಸ್ಪಿ ಅವತಾರ್ ಕಷ್ಣ ರೈನಾ, ಅವರ ಮಗಳು ಬರ್ಖಾ ರೈನಾ (25), ಮಗ ತಕಾಶ್ (3), 17 ವರ್ಷದ ಗಂಗಾ ಭಗತ್, 15 ವರ್ಷದ ಡ್ಯಾನಿಶ್ ಭಗತ್ ಮತ್ತು 6- ವರ್ಷದ ಅದ್ವಿಕ್ ಎಂದು ಗುರುತಿಸಲಾಗಿದೆ.
ಗಾಯಗೊಂಡವರು ಮತ್ತು ಚಿಕಿತ್ಸೆ ಪಡೆಯುತ್ತಿರುವವರು 61 ವರ್ಷದ ಸ್ವರ್ಣ (ಅವತಾರ್ ಕಷ್ಣ ರೈನಾ ಅವರ ಪತ್ನಿ), ನೀತು ದೇವಿ (40), ಅರುಣ್ ಕುಮಾರ್ (15), ಮತ್ತು 69 ವರ್ಷದ ಮಹಿಳೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯ ಪ್ರಾಂಶುಪಾಲರಾದ ಡಾ.ಸುರೀಂದರ್ ಅತ್ರಿ, ಹತ್ತು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಆರು ಮಂದಿ ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಿದರು.
ಪ್ರಾಥಮಿಕ ತನಿಖೆಯ ಪ್ರಕಾರ ಸಂತ್ರಸ್ತರು ಹೊಗೆ ಉಸಿರಾಡುವಿಕೆ ಮತ್ತು ಉಸಿರುಗಟ್ಟುವಿಕೆಯಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು, ಯಾವುದೇ ಸುಟ್ಟ ಗಾಯಗಳು ವರದಿಯಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.