Thursday, December 19, 2024
Homeರಾಜ್ಯಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ

ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ ನಿಧನ

Malayalam Actress Meena Ganesh passes away at 82

ಪಲಕ್ಕಡ್‌ (ಕೇರಳ), ಡಿ. 19– ಮಲಯಾಳಂ ಚಿತ್ರರಂಗದ ಹಿರಿಯ ನಟಿ ಮೀನಾ ಗಣೇಶ್‌ (81) ಇಂದು ತಮ ಬಣ್ಣದ ಲೋಕದ ಪಯಣ ಮುಗಿಸಿದ್ದಾರೆ. ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಶೋರ್‌ನೂರ್‌ ನ ಪಿ.ಕೆ.ದಾಸ್‌‍ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಮಲಯಾಳಂನ ಖ್ಯಾತ ನಟರುಗಳಾದ ಮೋಹನ್‌ ಲಾಲ್‌, ಮಮುಟಿ,ಸುರೇಶ್‌ ಗೋಪಿ, ದಿಲೀಪ್‌ ಸೇರಿದಂತೆ ಹಲವು ಮೇರು ನಟರುಗಳ ಚಿತ್ರಗಳಲ್ಲಿ ನಟಿಸಿದ್ದ ಮೀನಾ ಗಣೇಶ್‌ ಅವರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.

1976ರಲ್ಲಿ ಮಣಿಮುಳಕಂ ಚಿತ್ರದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ ಮೀನಾ ಗಣೇಶ್‌, ಭಾಗ್ಯವನ್‌, ಮುಕ್ತ ಚಿತ್ರಂ, ವಾಲಾಯಂ, ಭೂಮಿಗೀತಂ ಸೇರಿದಂತೆ ಹಲವು ಚಿತ್ರಗಳಲ್ಲಿ ತಮ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದಾರೆ. 2016ರಲ್ಲಿ ಬಿಡುಗಡೆಗೊಂಡಿದ್ದ ಪತಿರಾಕಟ್ಟು ಮೀನಾ ಅಭಿನಯಿಸಿದ ಅಂತಿಮ ಸಿನಿಮಾ.

ರಂಗಭೂಮಿ ನಂಟು:
ತಮ ಬಾಲ್ಯದಿಂದಲೂ ರಂಗಭೂಮಿಯ ನಂಟು ಹೊಂದಿದ್ದ ಮೀನಾ ಗಣೇಶ್‌ ಪಾಂಚಜನ್ಯಂ, ಸಿಂಹಾಸನಂ, ಆಯರಂ, ನಾವುಲ್ಲ ಮೌನಂ ಸೇರಿದಂತೆ ಹಲವು ನಾಟಗಳಲ್ಲೂ ಅಭಿನಯಿಸಿದ್ದಾರೆ. ಫಸಾ ನಾಟಕದಲ್ಲಿ ಇವರು ನಿರ್ವಹಿಸಿದ್ದ ಕುಲಸುಂಬಿ ಪಾತ್ರವು ಈವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಪಾಂಚಜನ್ಯಂ ನಾಟಕವು ಸತತ ಮೂರು ವರ್ಷಗಳ ಕಾಲ ಸತತ ಮೂರು ವರ್ಷಗಳ ಕಾಲ ಯಶಸ್ವಿ ಪ್ರದರ್ಶನವಾಯಿತು. 1971ರಲ್ಲಿ ರಂಗ ಕಲಾವಿದ ಎ.ಎಸ್‌‍.ಗಣೇಶ್‌ ಅವರನ್ನು ವಿವಾಹವಾದ ಮೀನಾ ಅವರು ತಮ ಪತಿಯೊಂದಿಗೆ 20ಕ್ಕೂ ಹೆಚ್ಚು ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.

ಕಿರುತೆರೆಯಲ್ಲೂ ಮಿಂಚು:
ಸಿನಿಮಾ, ನಾಟಕವಲ್ಲದೆ ಕಿರುತೆರೆಯಲ್ಲೂ ತಮ ಅಭಿನಯದ ಕಂಪನ್ನು ಪಸರಿಸಿದ್ದ ಮೀನಾ ಗಣೇಶ್‌ ಅವರು ಗೀತಾಂಜಲಿ, ದೇವರಾಗಂ, ರಾಮಾಯಣಂ, ಸ್ತ್ರೀ ಸೇರಿದಂತೆ ಹಲವು ಧಾರಾವಾಹಿಗಳ ಅಭಿನಯದ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ ಶ್ರೀಕಂದನ್‌ ನಾಯರ್‌ ಶೋ ಎಂಬ ರಿಯಾಲ್ಟಿ ಶೋನಲ್ಲೂ ಮೀನಾ ಗಣೇಶ್‌ ಅಭಿನಯಿಸಿದ್ದಾರೆ.

ಸಂತಾಪ:
ಮೀನಾ ಗಣೇಶ್‌ ಅವರ ಪುತ್ರ ಮನೋಜ್‌ ಗಣೇಶ್‌ ಕೂಡ ಮಲಯಾಳಂ ಚಿತ್ರರಂಗದ ಪ್ರಸಿದ್ಧ ನಿರ್ದೇಶಕರಾಗಿದ್ದು ಇಂದು ಸಂಜೆ ಪಲ್ಲಾಕ್ಕಡ್‌ ನಲ್ಲಿರುವ ಶಾಂತಿತೇರಾಂನಲ್ಲಿ ಅಂತ್ಯಕ್ರಿಯೆ ನೆರವೇರಿಸಲಿದ್ದು, ಮೀನಾಗೆ ಸಂಗೀತಾ ಎಂಬ ಪುತ್ರಿಯೂ ಇದ್ದಾರೆ. ಇವರ ನಿಧನಕ್ಕೆ ಮಾಲಿವುಡ್‌ ನ ಖ್ಯಾತ ನಟರುಗಳಾದ ಮೋಹನ್‌ ಲಾಲ್‌, ಮಮುಟಿ ಸೇರಿದಂತೆ ಹಲವರು ಹಿರಿ- ಕಿರೆತೆರೆ ಕಲಾವಿದರು ಹಾಗೂ ತಂತ್ರಜ್ಞರು ಸಂತಾಪ ಸೂಚಿಸಿದ್ದಾರೆ.

RELATED ARTICLES

Latest News