Thursday, December 19, 2024
Homeರಾಜ್ಯಸಿದ್ದಗಂಗಾ ಮಠಕ್ಕೆ ಕರೆಂಟ್ ಬಿಲ್ ನೀಡಿದ ಬೆಸ್ಕಾಂ, ಸರ್ಕಾರದ ನಡೆಗೆ ವ್ಯಾಪಕ ಆಕೋಶ್ರ

ಸಿದ್ದಗಂಗಾ ಮಠಕ್ಕೆ ಕರೆಂಟ್ ಬಿಲ್ ನೀಡಿದ ಬೆಸ್ಕಾಂ, ಸರ್ಕಾರದ ನಡೆಗೆ ವ್ಯಾಪಕ ಆಕೋಶ್ರ

BESCOM issues electricity bill to Siddaganga Mutt

ತುಮಕೂರು,ಡಿ.19– ನೀರು ಸರಬರಾಜಿಗೆ ತಗಲುವ ವೆಚ್ಚವನ್ನು ಭರಿಸುವಂತೆ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿಯಿಂದ ಪತ್ರ ಬರೆದಿರುವುದು ತೀವ್ರ ವಿವಾದಕ್ಕೆ ಗುರಿಯಾಗಿದ್ದು, ಸರ್ಕಾರದ ನಡವಳಿಕೆಗೆ ವ್ಯಾಪಕ ಆಕೋಶ್ರ ಕೇಳಿಬಂದಿದೆ.

ಕೆಐಎಡಿಬಿಯ ಕಾರ್ಯಪಾಲಕ ಅಭಿಯಂತರರು, ಸಿದ್ದಗಂಗಾ ಮಠಕ್ಕೆ ಪತ್ರ ಬರೆದಿದ್ದಾರೆ. ತುಮಕೂರು ತಾಲೂಕು ಹೊನ್ನಹಳ್ಳಿಕೆರೆಯಿಂದ ದೇವರಾಯಪಟ್ಟಣ ಕೆರೆಗೆ ನೀರು ಸರಬರಾಜು ಮಾಡಿರುವ ಸಂಬಂಧಪಟ್ಟಂತೆ 2023-24 ನೇ ಸಾಲಿನ ವಿದ್ಯುತ್‌ ಬಿಲ್‌, 70, 31, 408 ರೂಪಾಯಿಗಳನ್ನು ಬೆಸ್ಕಾಂ ತುಮಕೂರ ಶಾಖೆಗೆ ಪಾವತಿಸುವಂತೆ ಸೂಚಿಸಿದ್ದಾರೆ.

ಈ ವಿದ್ಯುತ್‌ ಬಿಲ್‌ನ್ನು ಪಾವತಿಸುವಂತೆ ಕೆಐಎಡಿಬಿಯ ಕೇಂದ್ರ ಕಚೇರಿಗೆ ಮಾರ್ಚ್‌ 25ರಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ದೇವರಾಯ ಪಟ್ಟಣ ಕೆರೆಗೆ ನೀರು ಸರಬರಾಜು ಮಾಡಲು ಕಾಮಗಾರಿ ಕೈಗೊಳ್ಳಲಾಗಿದೆ. ಕೆರೆಯ ನೀರನ್ನು ಸಿದ್ಧಗಂಗಾ ಮಠ ದೈನಂದಿನ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೆಐಎಡಿಬಿಯ ಆರ್ಥಿಕ ಪರಿಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದೇ ಇರುವುದರಿಂದ ವಿದ್ಯುತ್‌ ಬಿಲ್‌ನ್ನು ಮಠದಿಂದಲೇ ಪಾವತಿಸಬೇಕೆಂದು ಕೇಂದ್ರ ಕಚೇರಿ ನಿರ್ದೇಶನ ನೀಡಿದೆ.

ಕೆಐಎಡಿಬಿಯ ಪತ್ರಕ್ಕೆ ಪ್ರತಿಕ್ರಿಯಿಸಿರುವ ಸಿದ್ದಗಂಗಾ ಮಠ, ದೇವರಾಯ ಪಟ್ಟಣ ಕೆರೆಯಲ್ಲಿ ಸ್ಥಾಪಿಸಲಾಗಿರುವ ನೀರಿನ ಶುದ್ಧಿಕರಣ ಘಟಕದಿಂದ ಇನ್ನು ಪ್ರಾರಂಭವಾಗಿಲ್ಲ ಪ್ರಾಯೋಗಿಕವಾಗಿ ನೀರನ್ನು ಭರ್ತಿ ಮಾಡಲಾಗಿದೆ. ಇದನ್ನು ಸಿದ್ಧಗಂಗಾ ಮಠದ 10 ಸಾವಿರ ವಿದ್ಯಾರ್ಥಿಗಳು ಹಾಗೂ ಶ್ರೀಮಠಕ್ಕೆ ಬರುವ ಭಕ್ತಾಧಿಗಳು ಬಳಕೆ ಮಾಡುತ್ತಾರೆ.

ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಾದ ದೇವರಾಯಪಟ್ಟಣ ಮಾರನಾಯಕನಪಾಳ್ಯ, ಬಸವಪಟ್ಟಣ, ಬಂಡೇಪಾಳ್ಯ ಇತ್ಯಾದಿ ಹಳ್ಳಿಗೆ ಸರಬರಾಜು ಮಾಡಲಾಗುತ್ತಿದೆ. ನೀರು ಪೂರೈಕೆ ಮಾಡುವುದು ಸರ್ಕಾರ ಜವಬ್ದಾರಿ ಹಿಗಾಗಿ ಮಠದಿಂದ ವಿದ್ಯುತ್‌ ಬಿಲ್‌ ಪಾವತಿಸುವುದಿಲ್ಲ ಎಂದು ಉತ್ತರಿಸಲಾಗಿದೆ.

ಚಾಮರಾಜನಗರದಲ್ಲಿಂದ ಸುದ್ದಿಗಾರರೊಂದಿಗೆ ಮಾತನಾಡಿರುವ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಕೆಐಎಡಿಬಿಯ ಪತ್ರ ಶ್ರೀಮಠಕ್ಕೆ ತಲುಪಿದೆ. ಅದಕ್ಕೆ ಪ್ರತಿಕ್ರಿಯೆ ಬರೆಯನ್ನೂ ಬರೆಯಲಾಗಿದೆ. ಈ ವಿಚಾರವನ್ನು ಬಗೆಹರಿಸುವಂತೆ ತಿಳಿಸಿದ್ದೇವೆ ಎಂದಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕ ಸಚಿವ ಎಂ.ಬಿ.ಪಾಟೀಲ್‌, ನೀರು ಸರಬರಾಜಿನ ವಿದ್ಯುತ್‌ ಬಿಲ್‌ ಅನ್ನು ಮನ್ನಾ ಮಾಡಲಾಗುವುದು. ಇದಕ್ಕೆ ಸಂಬಂಧಪಟ್ಟ ಕಡತವನ್ನು ತಮಗೆ ಕಳುಹಿಸುವಂತೆ ಕೆಐಎಡಿಬಿಯ ಸಿಇಒಗೆ ಸೂಚನೆ ನೀಡಲಾಗಿದೆ ಎಂದರು.

ನೀರನ್ನೇ ಬಳಕೆ ಮಾಡದೆ ಇದ್ದಾಗಲೂ ಬಿಲ್‌ ಪಾವತಿಸುವಂತೆ ನೋಟಿಸ್‌‍ ನೀಡಿದ್ದರ, ಅದನ್ನು ಪರಿಶೀಲನೆ ಮಾಡಲಾಗುವುದು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಶ್ರೀಮಠಕ್ಕೆ ನೀರು ಸರಬರಾಜು ಮಾಡಿದ ಬಳಿಕವೂ ಬಿಲ್‌ ಅನ್ನು ಸರ್ಕಾರದಿಂದಲೇ ಪಾವತಿಸಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದರು.

ವಿರೋಧ ಪಕ್ಷಗಳು ಎಲ್ಲದರಲ್ಲೂ ರಾಜಕೀಯ ಮಾಡುತ್ತಿವೆ. ಈ ಮೊದಲು ಭಾವನಾತಕ ರಾಜಕಾರಣ ಮಾಡಲು ಹೋಗಿ ಸಾಕಷ್ಟು ಪಾಠ ಕಲಿತಿವೆ. ತಾವು ಸಿದ್ದಗಂಗಾ ಮಠದ ಭಕ್ತರಾಗಿದ್ದು, ಮಠಕ್ಕೆ ನೋಟಿಸ್‌‍ ನೀಡಿರುವುದನ್ನು ಗಂಭೀರವಾಗಿ ಪರಿಶೀಲಿಸುತ್ತೇನೆ ಎಂದಿದ್ದಾರೆ.

RELATED ARTICLES

Latest News