Thursday, December 19, 2024
Homeರಾಜ್ಯನಾಳೆಯಿಂದ 3 ದಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಮುನ್ನ ಇಲ್ಲಿ ಗಮನಿಸಿ

ನಾಳೆಯಿಂದ 3 ದಿನ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇನಲ್ಲಿ ಸಂಚರಿಸುವ ಮುನ್ನ ಇಲ್ಲಿ ಗಮನಿಸಿ

Bengaluru-Mysuru Expressway route change for 3 days

ಮಂಡ್ಯ, ಡಿ.19: ನಗರದಲ್ಲಿ ನಾಳೆಯಿಂದ ಮೂರುದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಂಗವಾಗಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಸಂಚಾರಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.ಸಮೇಳನಕ್ಕೆ ಆಗಮಿಸುವವರನ್ನು ಗಮನದಲ್ಲಿಟ್ಟುಕೊಂಡು ನಾಳೆ ಬೆಳಗ್ಗೆ 5 ಗಂಟೆಯಿಂದ 23ರ ಬೆಳಗ್ಗೆ 6 ಗಂಟೆಯವರೆಗೆ ಮಾರ್ಗ ಬದಲಾವಣೆಯಾಗಲಿದೆ.

ಬೆಂಗಳೂರು, ರಾಮನಗರ, ತುಮಕೂರು, ಮದ್ದೂರು, ಮಳವಳ್ಳಿಯಿಂದ ಎಕ್‌್ಸಪ್ರೆಸ್ ವೇನಲ್ಲಿ ಬರುವವರಿಗೆ ಹೊಸಬೂದನೂರು ಬಳಿ ಎಕ್ಸಿಟ್ ಆಗಿ ಸರ್ವಿಸ್ ರಸ್ತೆ, ಸಮೇಳನದ ಮುಖ್ಯ ದ್ವಾರದ ಮೂಲಕ ಬ್ಯಾಂಕರ್ಸ್ ಕಾಲೋನಿ ರಸ್ತೆ ಮೂಲಕ ಸಮೇಳನ ಸ್ಥಳ ತಲುಪಬಹುದು.

ಮೈಸೂರು, ಶ್ರೀರಂಗಪಟ್ಟಣ, ಪಾಂಡವಪುರದಿಂದ ಎಕ್‌್ಸ ಪ್ರೆಸ್ ವೇನಲ್ಲಿ ಬರುವವರಿಗೆ ಶಶಿಕಿರಣ ಕನ್ವೆನ್ ಷನ್ ಹಾಲ್ ಎದುರಿನಲ್ಲಿ ಎಕ್ಸಿಟ್ ಆಗಬೇಕು. ಸರ್ವಿಸ್ ರಸ್ತೆ ಮೂಲಕ ಹೊಸಬೂದನೂರು ಅಂಡರ್ ಪಾಸ್ನಲ್ಲಿ ಯೂಟರ್ನ್ ಪಡೆದು ಸರ್ವಿಸ್ ರಸ್ತೆಯಿಂದ ಬ್ಯಾಂಕರ್ಸ್ ಕಾಲೋನಿ ಮೂಲಕ ಸಮೇಳನ ಸ್ಥಳ ತಲುಪಬಹುದಾಗಿದೆ.

ಉಚಿತ ಬಸ್ ವ್ಯವಸ್ಥೆ: ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಸಮೇಳನಕ್ಕೆ ಉಚಿತ ಬಸ್ ಸೇವೆ ವ್ಯವಸ್ಥೆ ಮಾಡಲಾಗಿದೆ. ಸರ್ವಿಸ್ ರಸ್ತೆಗಳಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ. ಚಿಕ್ಕಮಂಡ್ಯದಿಂದ ಹನಕೆರೆವರೆಗಿನ ಎರಡೂ ಬದಿಯ ಸರ್ವಿಸ್ ರಸ್ತೆಯಲ್ಲಿ ದ್ವಿಮುಖ ಸಂಚಾರ ನಿರ್ಬಂಧಿಸಲಾಗಿದೆ.

ಮದ್ದೂರು ಮತ್ತು ಶ್ರೀರಂಗಪಟ್ಟಣ ಕಡೆಯಿಂದ ಸರ್ವಿಸ್ ರಸ್ತೆಯಲ್ಲಿ ಬರುವ ವಾಹನಗಳು ಎಕ್‌್ಸಪ್ರೆಸ್ ವೇನಲ್ಲಿ ಚಲಿಸುವುದು. ನಿರ್ಬಂಧಿತ ವಾಹನಗಳನ್ನು ಹೊರತುಪಡಿಸಿ ಎಲ್ಲಾ ವಾಹನಗಳಿಗೆ ಎಕ್‌್ಸಪ್ರೆಸ್ ವೇನಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ.

ಶಾಲಾ-ಕಾಲೇಜಿಗೆ ರಜೆ: ನಾಡು-ನುಡಿ ಬಗ್ಗೆ ಅಭಿಮಾನ ಮೂಡಿಸುವ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಉಪನ್ಯಾಸಕರು ಭಾಗಿಯಾಗಬೇಕೆಂಬ ನಿಟ್ಟಿನಲ್ಲಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿಗೆ ಡಿ.20, 21 ಎರಡು ದಿನ ರಜೆ ಘೋಷಣೆ ಮಾಡಲಾಗಿದೆ.

RELATED ARTICLES

Latest News