Saturday, December 21, 2024
Homeರಾಷ್ಟ್ರೀಯ | Nationalಗ್ಯಾಸ್ ಟ್ಯಾಂಕರ್‌ಗೆ ಬೆಂಕಿ ತಗುಲಿ ಐವರ ಸಜೀವ ದಹನ

ಗ್ಯಾಸ್ ಟ್ಯಾಂಕರ್‌ಗೆ ಬೆಂಕಿ ತಗುಲಿ ಐವರ ಸಜೀವ ದಹನ

Deadly truck collision turns Jaipur-Ajmer highway into an inferno

ಜೈಪುರ, ಡಿ 20 (ಪಿಟಿಐ) : ಇಲ್ಲಿನ ಜೈಪುರ-ಅಜೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ರಾಸಾಯನಿಕ ತುಂಬಿದ್ದ ಟ್ರಕ್ ಇತರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸಜೀವ ದಹನವಾಗಿದ್ದು, 37 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಮಾರು 30 ಟ್ರಕ್ಗಳು ಮತ್ತು ಇತರ ವಾಹನಗಳು ಬೆಂಕಿಯಲ್ಲಿ ಸುಟ್ಟುಹೋಗಿವೆ ಎಂದು ಅವರು ಹೇಳಿದರು. ಐವರು ಸಾವನ್ನಪ್ಪಿದ್ದಾರೆ ಮತ್ತು 37 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ಪಿಟಿಐಗೆ ತಿಳಿಸಿದ್ದಾರೆ.

ಗಾಯಾಳುಗಳು ದಾಖಲಾಗಿರುವ ಎಸ್ಎಂಎಸ್ ಆಸ್ಪತ್ರೆಗೆ ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಭೇಟಿ ನೀಡಿ ಅಲ್ಲಿನ ವೈದ್ಯರೊಂದಿಗೆ ಮಾತನಾಡಿದರು. ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಶರ್ಮಾ ಕೂಡ ಅಪಘಾತ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಜೈಪುರ-ಅಜೀರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಬೆಂಕಿಯ ಘಟನೆಯಲ್ಲಿ ಸಾವು ನೋವುಗಳ ಸುದ್ದಿ ಕೇಳಿ ತೀವ್ರ ದುಃಖವಾಯಿತು. ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ನಾನು ಹೋದೆ. ಎಸ್ಎಂಎಸ್ ಆಸ್ಪತ್ರೆ ಮತ್ತು ಅಲ್ಲಿನ ವೈದ್ಯರಿಗೆ ತಕ್ಷಣದ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಮತ್ತು ಗಾಯಾಳುಗಳಿಗೆ ಸೂಕ್ತ ಕಾಳಜಿ ವಹಿಸುವಂತೆ ಸೂಚಿಸಿದೆ. ಆಡಳಿತದಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ ಎಂದು ಅವರು ಎಕ್‌್ಸ ಮಾಡಿದ್ದಾರೆ.

ಭಂಕ್ರೋಟಾದ ಎಸ್ಎಚ್ಒ ಮನೀಷ್ ಗುಪ್ತಾ, ಬೆಂಕಿಯನ್ನು ನಿಯಂತ್ರಿಸಲು ತುಂಬಾ ಕಷ್ಟವಾಯಿತು. ಅಗ್ನಿಶಾಮಕ ದಳದ ತಂಡಗಳು ಬೆಂಕಿ ಹೊತ್ತಿಕೊಂಡ ವಾಹನಗಳನ್ನು ತಲುಪಲು ಸಾಧ್ಯವಾಗಲಿಲ್ಲ. ಪೀಡಿತ ಪ್ರದೇಶದಲ್ಲಿ ಮೂರು ಪೆಟ್ರೋಲ್ ಪಂಪ್ಗಳಿದ್ದವು ಆದರೆ ಅದಷ್ಟವಶಾತ್ ಅವು ಸುರಕ್ಷಿತವಾಗಿವೆ ಎಂದು ಹೇಳಿದರು. 25ಕ್ಕೂ ಹೆಚ್ಚು ಆಂಬ್ಯುಲೆನ್‌್ಸಗಳು ಸ್ಥಳಕ್ಕೆ ಆಗಮಿಸಿ ಸಂತ್ರಸ್ತರನ್ನು ಆಸ್ಪತ್ರೆಗೆ ರವಾನಿಸಿವೆ.

ಅಪಘಾತದಿಂದ ಸುಮಾರು 300 ಮೀಟರ್ ಉದ್ದದ ಹೆದ್ದಾರಿ ಹಾನಿಗೀಡಾಗಿದೆ. ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತ್ತು.

RELATED ARTICLES

Latest News