Saturday, December 21, 2024
Homeರಾಷ್ಟ್ರೀಯ | Nationalಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವತ್‌ ಮನೆ ಸಮೀಪ ಅಪರಿಚಿತ ವ್ಯಕ್ತಿಗಳ ಓಡಾಟ

ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವತ್‌ ಮನೆ ಸಮೀಪ ಅಪರಿಚಿತ ವ್ಯಕ್ತಿಗಳ ಓಡಾಟ

Sanjay Raut's family alleges life threat after masked men seen outside Mumbai house

ಮುಂಬೈ,ಡಿ.21- ಶಿವಸೇನಾ (ಯುಬಿಟಿ) ಸಂಸದ ಸಂಜಯ್‌ ರಾವತ್‌ ಅವರ ನಿವಾಸದ ಹೊರಗೆ ಅಪರಿಚಿತ ವ್ಯಕ್ತಿಗಳ ಓಡಾಟ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯಿಂದ ನಮ ಜೀವಕ್ಕೆ ಅಪಾಯವಿದೆ ಎಂದು ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದಾರೆ. ಬಂಗಲೆಯ ಹೊರಗೆ ಬೈಕ್‌ನಲ್ಲಿ ಇಬ್ಬರು ಅಪರಿಚಿತರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದರು ಎಂದು ಸಂಜಯ್‌ ರಾವುತ್‌ ಅವರ ಸಹೋದರ ಸುನೀಲ್‌ ರಾವುತ್‌ ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

ದ್ವಿಚಕ್ರವಾಹನದ ನಂಬರ್‌ ಪ್ಲೇಟ್‌ ಹೊರ ರಾಜ್ಯದಿಂದ ಬಂದದ್ದು ಎಂದು ತೋರುತ್ತದೆ. ಶಂಕಿತನ ಬಳಿ ಹಲವು ಫೋನ್‌ಗಳಿವೆ. ಈ ಆರೋಪಿಗಳ ಬಳಿ ಮಾಧ್ಯಮದವರು ಹಲವು ಮೊಬೈಲ್‌ ಫೋನ್‌ಗಳನ್ನು ನೋಡಿದ್ದು, ಅವರನ್ನು ವಿಚಾರಿಸಿದಾಗ ಅಲ್ಲಿಂದ ಪರಾರಿಯಾಗಿದ್ದಾರೆ. ಬಂಗಲೆಯ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ರಾವತ್‌ ಕುಟುಂಬವು ಭಾಂಡಪ್‌ನ ಮೈತ್ರಿ ಬಂಗಲೆಯಲ್ಲಿ ವಾಸಿಸುತ್ತಿದೆ. ಸಿಸಿಟಿವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಬಾಬಾ ಸಿದ್ದಿಕಿ ಹತ್ಯೆಯ ನಂತರ ಈ ವಿಷಯ ಗಂಭೀರವಾಗಿದೆ ಎಂದು ಸುನೀಲ್‌ ರಾವತ್‌ ಹೇಳಿದ್ದಾರೆ.

ಕಳೆದ ಮೂರು ವರ್ಷಗಳಲ್ಲಿ ಶಿಂಧೆ ಮತ್ತು ಫಡ್ನವಿಸ್‌‍ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರದ ರಾಜಕೀಯ ವಿರೋಧಿಗಳು ಇಂತಹ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಭಯಪಡುವವರಲ್ಲಿ ನಾವು ಇಲ್ಲ. ಇಂತಹ ಬೆದರಿಕೆಗಳಿಗೆ ನಾವು ಮಾತನಾಡುವುದನ್ನು ನಿಲ್ಲಿಸುವುದಿಲ್ಲ. ನಾವು ಭಯಪಡುವಂತಿಲ್ಲ.

ಜನರ ಪರವಾಗಿ ಧ್ವನಿ ಎತ್ತುವುದನ್ನು ಮುಂದುವರಿಸುತ್ತೇವೆ ಎಂದು ಸಂಜಯ್‌ ರಾವತ್‌ ಹೇಳಿದ್ದಾರೆ.ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ. ವಿವರವಾದ ತನಿಖೆಯಲ್ಲಿ ಏನಾದರೂ ಗಂಭೀರವಾದದ್ದು ಕಂಡುಬಂದರೆ, ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ನಂತರ ಮರಾಠಿ ಮಾತನಾಡುವ ಜನರ ಮೇಲೆ ಹಲ್ಲೆಗಳು ಹೆಚ್ಚಿವೆ ಎಂದು ಹೇಳಿದ್ದಾರೆ.

RELATED ARTICLES

Latest News