Sunday, December 22, 2024
Homeಬೆಂಗಳೂರುಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಬಂತು ಹೊಸ ರೂಲ್ಸ್

ಬೆಂಗಳೂರಲ್ಲಿ ಹೊಸ ವರ್ಷಾಚರಣೆಗೆ ಬಂತು ಹೊಸ ರೂಲ್ಸ್

New Rules for New Year celebrations in Bengaluru

ಬೆಂಗಳೂರು,ಡಿ.22- ಹೊಸ ವರ್ಷಾಚರಣೆಗೆ ಬಿಬಿಎಂಪಿ-ಪೊಲೀಸ್‌‍ ಇಲಾಖೆಯಿಂದ ಹೊಸ ರೂಲ್ಸ್‌‍ ಜಾರಿ ಮಾಡಲಾಗಿದೆ.ಹೊಸ ವರ್ಷಾಚರಣೆಗೆ ಪೊಲೀಸ್‌‍ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳು ಈಗಾಗಲೆ ಸಭೆ ಮಾಡಿದ್ದು, ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದ್ದಾರೆ.

ಹೊಸ ವರ್ಷಾಚರಣೆಯ ಕೇಂದ್ರ ಬಿಂದುವಾಗಿರುವ ಬೆಂಗಳೂರಿನ ಎಂ.ಜಿ ರೋಡ್‌‍, ಬ್ರಿಗೇಡ್‌ ರೋಡ್‌ ಗಳಲ್ಲಿ ಸಿಸಿಟಿವಿ ಕ್ಯಾಮರೆಗಳ ಸಂಖ್ಯೆಯನ್ನು ಹೆಚ್ಚಿಸಲು ಪೊಲೀಸ್‌‍ ಇಲಾಖೆ ಪಾಲಿಕೆಗೆ ಸೂಚನೆ ನೀಡಿದೆ.

ಈ ಹಿಂದೆ ಕೇವಲ 200 ರಿಂದ 300 ಸಿಸಿಟಿವಿ ಕ್ಯಾಮೆರಾಗಳನ್ನು ಮಾತ್ರ ಅಳವಡಿಸಲಾಗಿತ್ತು. ಆದರೆ, ಈ ಬಾರೀ ಹೆಚ್ಚಿನ ಜನ ಸೇರುವ ನಿರೀಕ್ಷೆ ಇರುವುದರಿಂದ ಸುಮಾರು 800 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವಂತೆ ಪೊಲೀಸ್‌‍ ಇಲಾಖೆ ಬಿಬಿಎಂಪಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಇದರ ಜೊತೆಗೆ ಇನ್ನಿತರ ಹಲವಾರು ನಿಯಮಗಳನ್ನು ಜಾರಿಗೊಳಿಸಲಾಗಿದೆ. ಹೊಸ ವರ್ಷಾಚರಣೆಗೆ ಏನೆಲ್ಲ ನಿಯಮ ಎನ್ನುವುದನ್ನು ನೋಡುವುದಾದರೆ. ರಾತ್ರಿ 1 ಗಂಟೆಯೊಳಗೆ ಹೊಸ ವರ್ಷಾಚರಣೆ ಮುಗಿಸಬೇಕು. ರಾತ್ರಿ 10 ಗಂಟೆ ಬಳಿಕ ಪ್ರಮುಖ ಫ್ಲೈ ಓವರ್‌ಗಳು ಬಂದ್‌, ರಾತ್ರಿ 8 ಗಂಟೆ ಬಳಿಕ ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆಯಲ್ಲಿ ವಾಹನ ಸಂಚಾರ ಬಂದ್‌. ಆಚರಣೆಗೆ ಬರುವವರಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಪೊಲೀಸರ ನಿಯೋಜನೆ. ಬಾರ್‌, ಪಬ್‌‍ಗಳಿಗೂ ರಾತ್ರಿ 1 ಗಂಟೆ ಬಳಿಕ ಬಂದ್‌‍ಗೆ ಸೂಚನೆ ನೀಡಲಾಗಿದೆ.

ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಹೊಸ ವರ್ಷಾಚರಣೆಗೆ ಪೊಲೀಸರ ಅನುಮತಿ ಕಡ್ಡಾಯಗೊಳಿಸಲಾಗಿದೆ. ಲೌಡ್‌ ಸ್ಪೀಕರ್‌ ಹಾಗೂ ಪಟಾಕಿ ಸಿಡಿತಕ್ಕೆ ನಿರ್ಬಂಧ ಹಾಕಲಾಗಿದೆ.

ನಗರದಲ್ಲಿನ ಕಸ ವಿಲೇವಾರಿ ಮಾಡುವುದು. ಬ್ಯಾರಿಕೇಟ್‌ ಅಳವಡಿಕೆಗೆ ಪೊಲೀಸ್‌‍ ಇಲಾಖೆ ಸೂಚಿಸಿದ ಜಾಗದಲ್ಲಿ ಲೈಟಿಂಗ್‌ ವ್ಯವಸ್ಥೆ ಮಾಡುವುದು. ಇನ್ನು, ಹೊಸ ವರ್ಷಾಚರಣೆಗೆ ಬಂದ ಜನರಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದರೇ, ಆರೋಗ್ಯ ತಪಾಸಣೆಗೆ ನಮ ಸಿಬ್ಬಂದಿಗಳನ್ನು ನಿಯೋಜನೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಬಾರಿ ಹೊಸವರ್ಷ ಅಚರಣೆಗೆ ಯಾವುದೇ ಅಡೆತಡೆ ಅಗದಂತೆ ಪೊಲೀಸ್‌‍ ಇಲಾಖೆ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

RELATED ARTICLES

Latest News