Monday, December 23, 2024
Homeರಾಷ್ಟ್ರೀಯ | Nationalಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಲಿದೆ : ನಾರಾಯಣ ಮೂರ್ತಿ

ಮುಂದಿನ ದಿನಗಳಲ್ಲಿ ಬೆಂಗಳೂರಿಗೆ ವಲಸೆ ಬರುವವರ ಸಂಖ್ಯೆ ಹೆಚ್ಚಾಗಲಿದೆ : ನಾರಾಯಣ ಮೂರ್ತಿ

Narayana Murthy Says Climate Change May Trigger Mass Migration To Bengaluru, Pune

ಪುಣೆ,ಡಿ.23- ಹವಾಮಾನ ಬದಲಾವಣೆಯನ್ನು ಪರಿಹರಿಸುವಲ್ಲಿ ವಿಫಲವಾದರೆ ಮುಂಬರುವ ದಿನಗಳಲ್ಲಿ ಬೆಂಗಳೂರಿಗೆ ದೊಡ್ಡ ಪ್ರಮಾಣದ ವಲಸೆ ಇರಲಿದೆ ಎಂದು ಇನ್ಫೋಸಿಸ್‌‍ ಸಂಸ್ಥಾಪಕ ನಾರಾಯಣಮೂರ್ತಿ ಆತಂಕವನ್ನು ಹೊರಹಾಕಿದ್ದಾರೆ.ಪುಣೆಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈ ವಲಸೆಗಳನ್ನು ತಪ್ಪಿಸಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಎಲ್ಲಾ ಪ್ರಮುಖ ಭಾರತೀಯ ನಗರಗಳು ತೀವ್ರತೆಯ ವಿವಿಧ ಹಂತಗಳಲ್ಲಿ ಒಂದೇ ರೀತಿಯ ಸವಾಲುಗಳನ್ನು ಎದುರಿಸುತ್ತಿವೆ. ಹೀಗಾಗಿ ತಪ್ಪಿಸಿಕೊಳ್ಳಲು ಬೇರೆ ಸ್ಥಳವಿಲ್ಲದೇ, ನಾವು ಅವರ ಸ್ವಂತ ನಗರಗಳಲ್ಲಿ ಈ ಸಮಸ್ಯೆಗಳನ್ನು ನಿಭಾಯಿಸಬೇಕು. ಹವಾಮಾನ ಬದಲಾವಣೆಯ ಪರಿಣಾಮವನ್ನು ಪರಿಹರಿಸಲು ಎರಡು ವಿಧಾನದ ಅಗತ್ಯವಿದೆ, ಜನರು ತಮ ಸ್ಥಳೀಯ ಭೂಪ್ರದೇಶಗಳಲ್ಲಿ ಆರಾಮವಾಗಿ ಬದುಕುವುದನ್ನು ರೂಡಿಸಿಕೊಳ್ಳಬೇಕು ಎಂದು ಕನ್ಸಲ್‌್ಟ್ಸ ಇನ್ಕ್ಲೂಸಿವ್‌ನ ಬ್ರ್ಯಾಂಡ್‌ ಗುರು ಮತ್ತು ಹರೀಶ್‌ ಬಿಜೂರ್‌ ಹೇಳಿದ್ದಾರೆ.

ಇದರರ್ಥ ಸಣ್ಣ ಪಟ್ಟಣಗಳು, ಹಳ್ಳಿಗಳು ಮತ್ತು ಹವಾಮಾನ-ದುರ್ಬಲ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡುವುದು. ಕಠಿಣ ಹವಾಮಾನ ಪರಿಸ್ಥಿತಿಗಳನ್ನು ಎದುರಿಸುತ್ತಿರುವ ಒಳನಾಡುಗಳು ಮತ್ತು ಅವುಗಳ ಪ್ರದೇಶಗಳನ್ನು ಗುರುತಿಸಬೇಕು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಲು ಅಗತ್ಯವಾದ ಸಂಪನೂಲ ಸಜ್ಜುಗೊಳಿಸಬೇಕು. ಸಾಮೂಹಿಕ ವಲಸೆಯನ್ನು ತಡೆಯಲು ಈ ಪ್ರದೇಶಗಳಲ್ಲಿ ಯೋಜನೆ ಮತ್ತು ಹೂಡಿಕೆ ನಿರ್ಣಾಯಕವಾಗಿದೆ ಎಂದು ಬಿಜೂರ್‌ ಹೇಳಿದರು.

ಬೆಂಗಳೂರು, ಪುಣೆ ಮತ್ತು ಹೈದರಾಬಾದ್ನಂತಹ ಮೆಗಾಸಿಟಿಗಳು ಉತ್ತಮ ಅವಕಾಶಗಳನ್ನು ಹುಡುಕುವ ವಲಸಿಗರ ಅನಿವಾರ್ಯ ಒಳಹರಿವಿಗೆ ಸಿದ್ಧವಾಗಬೇಕಿದೆ. ಈ ನಗರಗಳು ತಮ ದೊಡ್ಡ ಆವೃತ್ತಿಗಳಾಗುವ ಹಾದಿಯಲ್ಲಿವೆ, ದೂರದ ಪ್ರದೇಶಗಳು ಹೆಚ್ಚು ಹೆಚ್ಚು ಅವಿಭಾಜ್ಯ ಅಂಗಗಳಾಗುತ್ತಿವೆ ಎಂದು ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಭಾರತ ಸೇರಿ ಹಲವು ದೇಶಗಳಲ್ಲಿ ಇತ್ತೀಚಿಗೆ ದೊಡ್ಡ ಪ್ರಮಾಣದಲ್ಲಿ ಹವಾಮಾನ ಬದಲಾಗುತ್ತಿದ್ದು ಉಷ್ಣಾಂಶದಲ್ಲಿ ಸಾಕಷ್ಟು ಏರಿಳಿತ ನೋಡುತ್ತಿದ್ದೇವೆ. ಮುಂದಿನ 2 ದಶಕಗಳಲ್ಲಿ ಕೆಲ ದೇಶಗಳು ಭಾರತದ ಕಡೆ ನೋಡುವ ಸಂಭವ ಇದೆ. ಬೆಂಗಳೂರು, ಹೈದರಾಬಾದ್‌, ಪುಣೆಗೆ ವಲಸೆ ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಟ್ರಾಫಿಕ್‌ ಸಮಸ್ಯೆ, ಮಾಲಿನ್ಯದ ಕಾರಣ ಈ ನಗರಗಳ ಸ್ಥಿತಿ ಹದಗೆಡಬಹುದು. ಹೀಗಾಗಿ ವಲಸೆ ತಡೆಗೆ ಸರ್ಕಾರಗಳು ಅಗತ್ಯ ಕ್ರಮ ತೆಗದುಕೊಳ್ಳಬೇಕು ಎಂದು ಸಲಹೆ ನೀಡಿದರು.
ನಾವು ಭಾರತದಲ್ಲಿ, ವಿಶೇಷವಾಗಿ ಕಾರ್ಪೊರೇಟ್‌ ಜಗತ್ತು, ರಾಜಕಾರಣಿಗಳು ಮತ್ತು ಅಧಿಕಾರಿಗಳು ತಂಡದ ರೀತಿ ಒಟ್ಟಾಗಿ ಕೆಲಸ ಮಾಡಿದ್ದಲ್ಲಿ ಇಂತಹ ಅವಘಡಗಳು ಸಂಭವಿಸುತ್ತವೆ.

ಈ ವಿಸ್ತರಿಸುತ್ತಿರುವ ನಗರ ಪ್ರದೇಶಗಳನ್ನು ಪರಿಣಾಮಕಾರಿಯಾಗಿ ವ್ಯವಸ್ಥಿತಗೊಳಿಸಲು, ಮುನ್ಸಿಪಲ್‌ ಕಾರ್ಪೊರೇಷಮನ್‌ಗಳು ಹೊಂದಿಕೊಳ್ಳಬೇಕು. ಒಂದೇ ಮುನ್ಸಿಪಲ್‌ ಕಾರ್ಪೊರೇಶನ್‌ ಇನ್ನು ಮುಂದೆ ಸಾಕಾಗುವುದಿಲ್ಲ. ನಗರಗಳನ್ನು ಅವುಗಳ ಗಾತ್ರ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಬಹು ಆಡಳಿತ ಮಂಡಳಿಗಳಾಗಿ ವಿಭಜಿಸಬೇಕಾಗಬಹುದು ಎಂದು ಅವರು ಹೇಳಿದರು.

RELATED ARTICLES

Latest News