Monday, December 23, 2024
Homeರಾಜ್ಯಸಿ.ಟಿ. ರವಿಗೆ ಸ್ವಾಗತ ಕೋರಿದ 7 ಆಂಬುಲೆನ್ಸ್ ವಿರುದ್ಧ ಪ್ರಕರಣ

ಸಿ.ಟಿ. ರವಿಗೆ ಸ್ವಾಗತ ಕೋರಿದ 7 ಆಂಬುಲೆನ್ಸ್ ವಿರುದ್ಧ ಪ್ರಕರಣ

Case registered against 7 ambulances that welcomed C.T. Ravi

ಚಿಕ್ಕಮಗಳೂರು, ಡಿ.23- ವಿಧಾನ ಪರಿಷತ್‌ ಸದಸ್ಯ ಸಿಟಿ ರವಿ ಅವರಿಗೆ ಸ್ವಾಗತ ಕೋರಲು ಆಗಮಿಸಿದ್ದ 7 ಆಂಬುಲೆನ್ಸ್ ಗಳ ಮೇಲೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ . ಬಿಎನ್‌ಎಸ್‌‍ 177, 285 ಹಾಗೂ 292ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ.

ಮಾಗಡಿ ಕೈಮರದಿಂದ ಸೈರನ್‌ ಹಾಕಿಕೊಂಡು ಬಂದಿದ್ದ ಆಂಬುಲೆನ್ಸ್ ಗಳು ರೋಗಿಗಳು ಇಲ್ಲದೆ ಸೈರನ್‌, ಟಾಪ್‌ ಲೈಟ್‌ ಹಾಕಿದ್ದಕ್ಕೆ ಪ್ರಕರಣ ದಾಖಲಾಗಿದೆ. ಸೈರನ್‌ ಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಎಂದು ಪ್ರಕರಣ ದಾಖಲು ಮಾಡಲಾಗಿದ್ದು, ನಗರ ಠಾಣೆಯಲ್ಲಿ 7 ಆಂಬುಲೆನ್ಸ್ ಗಳ ಮೇಲೆ ಎಫ್‌ಐಆರ್‌ ಆಗಿದೆ.ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ನಗರದ ಬಂದ್‌ ಸೇರಿದಂತೆ ಹಲವು ಕಾರಣಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್‌.ದೇವರಾಜಶೆಟ್ಟಿ, ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ಕೋಟ್ಯನ್‌ ಸೇರಿದಂತೆ 200ಕ್ಕೂ ಹೆಚ್ಚು ಜನರ ವಿರುದ್ಧ ನಗರಠಾಣೆ ಮತ್ತು ಬಸವನಹಳ್ಳಿ ಠಾಣೆಯಲ್ಲಿ 7 ಪ್ರಕರಣಗಳು ದಾಖಲಾಗಿದೆ.

ಪತ್ನಿಯೊಂದಿಗೆ ವಿವಿಧ ದೇವಾಲಯಗಳ ಭೇಟಿ
ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಅವರು ಪತ್ನಿಯೊಂದಿಗೆ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಹಲವು ಕಾರ್ಯಕರ್ತರು ಹರಕೆ ಹೊತ್ತಿದ್ದ ಮಾಹಿತಿ ತಿಳಿದು ಪತ್ನಿ ಪಲ್ಲವಿ ಹಾಗೂ ಹರಕೆ ಹೊತ್ತಿದ್ದ ಕಾರ್ಯಕರ್ತರೊಂದಿಗೆ ತೆರಳಿ ಪೂಜೆ ಸಲ್ಲಿಸಿದರು.

ನಂತರ ಸುದ್ದಿಗರರೊಂದಿಗೆ ಮಾತನಾಡಿದ ರವಿ, ಕರ್ನಾಟಕದಲ್ಲಿ ಕಾಂಗ್ರೆಸ್‌‍ನವರಿಗೆ ಒಂದು ಕಾನೂನು, ಬಿಜೆಪಿಯವರಿಗೆ ಇನ್ನೊಂದು ಕಾನೂನಾ ಎಂದು ಪ್ರಶ್ನಿಸಿದ ಅವರು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.

ಇವರುಗಳ ದೃಷಿಯಲ್ಲಿ ಗೂಂಡಗಳನ್ನು ಕಳುಹಿಸಿ ನ್ಯಾಯ ಪಡೆಯಬೇಕಾ? ನಾನು ನ್ಯಾಯಂಗ ತನಿಖೆ ಕೇಳಿರುವುದು ನನ್ನ ಪ್ರಕರಣದಲ್ಲಿ ಸತ್ಯಾಸತ್ಯತೇ ಹೊರಬರಲಿ ಎನ್ನುವ ಕಾರಣಕ್ಕೆ ನಿಗೂಢ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದು ಅಪರಿಚಿತರಲ್ಲ, ಕರ್ನಾಟಕದ ಪೊಲೀಸರು ಅವರಿಗೆ ಆಗಾಗ ನಿರ್ದೇಶನ ಬರುತ್ತಿದ್ದುದು ಬರ್ತಾ ಇದ್ದಿದ್ದು ನಿಗೂಡ ಸ್ಥಳದಿಂದ ಅದಕ್ಕೆ ಹೇಳಿದ್ದು ಅವ್ರ ಕಾಲ್‌ ರೇಕಾರ್ಡ್‌ ಚೆಕ್‌ ಮಾಡಲಿ ಎಂದು ಹೇಳಿದರು.

RELATED ARTICLES

Latest News