Tuesday, January 14, 2025
Homeರಾಜ್ಯಅಂಬೇಡ್ಕರ್ ಅವರಿಗೆ ಅವಮಾನ : ಬಿಜೆಪಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯ

ಅಂಬೇಡ್ಕರ್ ಅವರಿಗೆ ಅವಮಾನ : ಬಿಜೆಪಿ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಅಧಿವೇಶನದಲ್ಲಿ ನಿರ್ಣಯ

Insult to Ambedkar: Resolution in Congress session to fight against BJP

ಬೆಳಗಾವಿ,ಡಿ.23- ಸಂವಿಧಾನವನ್ನು ಕಡೆಗಣಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅಪಮಾನಿಸುತ್ತಿರುವ ಬಿಜೆಪಿ ವಿರುದ್ಧ ನಡೆಸಬೇಕಾಗಿರುವ ಹೋರಾಟಗಳ ಬಗ್ಗೆ ಬೆಳಗಾವಿಯ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು.

ಬೆಳಗಾವಿಯಲ್ಲಿ ನಡೆಯುವ ಪಕ್ಷದ ಮಹಾಧಿವೇಶನ ಪ್ರಯುಕ್ತ ಸ್ಥಳ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಮತ್ತೊಮೆ ಬೂತ, ವರ್ತಮಾನ ಮತ್ತು ಭವಿಷ್ಯದ ವಿಚಾರಗಳನ್ನು ಸಮಿಶ್ರಗೊಳಿಸಿ ದೇಶದ ರಾಜಕೀಯದ ಚರ್ಚೆ ನಡೆಯಲಿದೆ. ದೇಶದ ಇತಿಹಾಸದಲ್ಲಿ ಬೆಳಗಾವಿ ಮಹತ್ವದ ಪಾತ್ರ ವಹಿಸಿದೆ. ಮಹಾತಗಾಂಧೀಜಿಯವರು ಇಲ್ಲಿ ನಡೆದ ಮಹಾಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಸ್ವರೂಪ ಮತ್ತು ದಿಕ್ಕನ್ನು ನೀಡಿದರು ಎಂದರು.

ಸ್ವಾತಂತ್ರ್ಯ ಹೋರಾಟದಿಂದ ಗಾಂಧೀಜಿ ಹೊಸ ಸಂಚಲನ ಮೂಡಿಸಿ ಅಹಿಂಸಾ ಮಾರ್ಗದ ಲ್ಲಿಯೇ ಬ್ರಿಟಿಷರನ್ನು ಓಡಿಸಿದ್ದರು. ಜಾತಿ, ಧರ್ಮ, ಭೇದವಿಲ್ಲದೆ ದೇಶದ ಎಲ್ಲರೂ ಒಂದು ಸೂತ್ರದಡಿ ಸತ್ಯಾಗ್ರಹಕ್ಕೆ ಬೆಂಬಲ ನೀಡಿದರು. ಅದು ಸಾಧ್ಯವಾಗಿದ್ದು ಬೆಳಗಾವಿಯ ಅಧಿವೇಶನದ ಚರ್ಚೆಗಳಿಂದ ಎಂದು ಹೇಳಿದರು. ನೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಮಹಾ ಅಧಿವೇಶನದ ಶತಮಾನೋತ್ಸವ ನಡೆಯುತ್ತಿದ್ದು, ಗಾಂಧೀಜಿ ಪಥದಲ್ಲಿ ನಡೆಯಲು ಬೃಹತ್ ಜಾಥಾ ಆಯೋಜನೆಗೊಳಿಸಲಾಗಿದೆ. ಸಮಾಜದ ಪ್ರತಿಯೊಬ್ಬರನ್ನೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಹ್ವಾನಿಸಲಾಗುತ್ತಿದೆ ಎಂದರು.

ಮತ್ತೊಮೆ ಸತ್ಯಾಗ್ರಹದ ಅಗತ್ಯವಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ಗಾಂಧಿ ನೇತೃತ್ವದಲ್ಲಿ ಐತಿಹಾಸಿಕ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗಾಂಧಿ ಪ್ರತಿಮೆ ಅನಾವರಣ, ಬೃಹತ್ ಜನ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಸಂವಿಧಾನ ಸವೋಚ್ಛವಾಗಿದೆ.

ಅದು ನಮಗೆ ಪವಿತ್ರ ಗ್ರಂಥವಾಗಿದೆ. ಬಿಜೆಪಿ ಅಂಬೇಡ್ಕರ್ ಅವರಿಗೆ ಅಪಮಾನ ಮಾಡುತ್ತಿದೆ. ಈ ಸಮಾವೇಶದಲ್ಲಿ ಪ್ರಸ್ತುತ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಿ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಅಮಿತ್ ಶಾ ಅವರು ಅಂಬೇಡ್ಕರ್ ಅವರ ವಿಚಾರವಾಗಿ ವಿರುದ್ಧವಾದ ಮಾತುಗಳನ್ನಾಡಿದ್ದಾರೆ. ಬಿಜೆಪಿ ಅದನ್ನು ಸಮರ್ಥಿಸಿಕೊಳ್ಳುತ್ತಿದೆ. ಇಲ್ಲಿ ನಡೆಯುವ ಚರ್ಚೆಗಳ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಗಳಿಲ್ಲ. ಪಕ್ಷದ ಎಲ್ಲಾ ಪದಾಧಿಕಾರಿಗಳು ಒಟ್ಟಾಗಿ ಚರ್ಚಿಸಿ ದೇಶ ಹಾಗೂ ರಾಜ್ಯಕ್ಕೆ ಪೂರಕವಾದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ ಎಂದರು.

RELATED ARTICLES

Latest News