ಲಂಡನ್, ಡಿ.23- ಇಲ್ಲಿ ನಡೆದ ಚೆಸ್ ಟೂರ್ನಿಯಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೊಮಗ ದೇವಾಂಶ್ ನಾರಾ 175 ಪಜಲ್ ಗಳನ್ನು ಅತಿ ವೇಗವಾಗಿ ಬಗೆಹರಿಸುವ ಮೂಲಕ ವರ್ಲ್ಡ್ ಬುಕ್ ರೆಕಾರ್ಡ್ಸ್ ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾನೆ.
ಚೆಕ್ ಮ್ಯಾಟ್ ಮ್ಯಾರಥಾನ್ ನಲ್ಲಿ ಪಾಲ್ಗೊಂಡಿದ್ದ ದೇವಾಂಶ್ ತನ್ನ ಅಪ್ರತಿಮ ಜ್ಞಾನ ಪ್ರದರ್ಶಿಸಿರುವುದಕ್ಕೆ ತಂದೆ ಲೋಕೇಶ್ ಹಾಗೂ ತಾಯಿ ಬ್ರಹಿಣಿ ಅವರು ದೇವಾಂಶ್ ನ ತರಬೇತುದಾರ ಕೆ. ರಾಜಶೇಖರ್ ರೆಡ್ಡಿ ಅವರನ್ನು ಅಭಿನಂದಿಸಿದ್ದಾರೆ.
ಮಗನ ಸಾಧನೆಗೆ ಶ್ಲಾಘನೆ:
` ಚೆಸ್ ನಲ್ಲಿ ಇತ್ತೀಚೆಗೆ ಭಾರತದ ಆಟಗಾರರು ಅಪ್ರತಿಮ ಸಾಧನೆ ತೋರುತ್ತಿದ್ದು, ಇದರಿಂದ ಸ್ಫೂರ್ತಿ ಪಡೆದಿರುವ ದೇವಾಂಶ್ ಕೂಡ, ಚೆಸ್ ಆಟದ ಕಡೆಗೆ ಹೆಚ್ಚಿನ ಒಲವು ಮೂಡಿಸಿಕೊಂಡಿದ್ದಾನೆ. ರಾಯ್ ಚೆಸ್ ಅಕಾಡೆಮಿಯು ಆತನಲ್ಲಿ ಅಡಗಿರುವ ಪ್ರತಿಭೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕೆಲಸ ಮಾಡುತ್ತಿದ್ದು, ಅಕಾಡೆಮಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ’ ಎಂದು ದೇವಾಂಶ್ ತಂದೆ ಲೋಕೇಶ್ ನಾರಾ ಅವರು ತಿಳಿಸಿದ್ದಾರೆ.
ಮೊಮಗನನ್ನು ಕೊಂಡಾಡಿದ ಚಂದ್ರಬಾಬುನಾಯ್ಡು:
ತನ್ನ ಮೊಮಗನ ಸಾಧನೆಯನ್ನು ತಮ ಅಧಿಕೃತ ಎಕ್ಸ್ ಖಾತೆಯ ಮೂಲಕ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅಭಿನಂದಿಸಿದ್ದಾರೆ. `ದೇವಾಂಶ್ ನಿಜಕ್ಕೂ ನೀನು ಉತ್ತಮ ಸಾಧನೆ ಮಾಡಿದ್ದೀಯಾ, ಅತಿ ವೇಗವಾಗಿ 175 ಚೆಸ್ ಪಜಲ್ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಿ ವಿಶ್ವದಾಖಲೆ ನಿರ್ಮಿಸಿರುವ ನಿನಗೆ ಧನ್ಯವಾದಗಳು. ಇದಕ್ಕೆ ನಿನ್ನ ಶ್ರದ್ಧೆ ಹಾಗೂ ಕಠಿಣ ಪರಿಶ್ರಮವೇ ಕಾರಣ. ಅಲ್ಲದೆ ಈ ಸಾಧನೆ ಹಿಂದೆ ಹಲವಾರು ತಿಂಗಳು ಕಾಲ ನೀನು ಮಾಡಿಕೊಂಡ ಸಿದ್ಧತೆಗಳು ಅಡಗಿವೆ. ನನ್ನ ಪುಟ್ಟ ಗ್ರಾಂಡ್ ಮಾಸ್ಟರ್ ನಿನ್ನ ಬಗ್ಗೆ ನನಗೆ ಅಪಾರ ಹೆಮೆಯ ಭಾವನೆ ಮೂಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಮತ್ತೆರಡು ದಾಖಲೆ ನಿರ್ಮಾಣ:
ಚೆಕ್ಮ್ಯಾಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ದೇವಾಂಶ್ , 7-ಡಿಸ್ಕ್ ಟವರ್ ಆ್ ಹನೋಯಿ ಪಝಲ್ ಅನ್ನು ಕೇವಲ 1 ನಿಮಿಷ ಮತ್ತು 43 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಲ್ಲದೆ, ಕೇವಲ 5 ನಿಮಿಷಗಳಲ್ಲಿ ಎಲ್ಲಾ 32 ತುಣುಕುಗಳೊಂದಿಗೆ ಒಂಭತ್ತು ಚದುರಂಗ ಲಕಗಳನ್ನು ಸರಿಯಾದ ಸ್ಥಾನಗಳಲ್ಲಿ ಜೋಡಿಸಿ ಗಮನ ಸೆಳೆದರು. ದೇವಾಂಶ್ ನ ಈ ಸಾಧನೆ ಭಾರತದ ಹಲವು ಯುವ ಚೆಕ್ ಆಟಗಾರರಿಗೆ ಸ್ಫೂರ್ತಿಯಾಗಿದೆ.