ಬೆಂಗಳೂರು : ನಕಲಿ ದಾಖಲಿ ಸೃಷ್ಟಿಸಿ ವಿಲಾಸಿ ವಿಲ್ಲಾ ಹಾಗೂ ಆಪಾರ್ಟ್‍ಮೆಂಟ್ ನಿರ್ಮಿಸಿಕೊಡುವುದಾಗಿ ಸಾರ್ವಜನಕರಿಗೆ ವಂಚನೆ ಮಾಡಿದ ‘ನಿರ್ಮಾಣ್ ಶೆಲ್ಪರ್ಸ್’ ವಿರುದ್ದ ಮುಂದಿನ ಆದೇಶದ ವರೆಗೂ ಯಾವುದೇ ಪ್ರಕ್ರಿಯೆ ನಡೆಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಮುಕುಂದ ಕುಲಕರ್ಣಿಅವರು, ‘ನಿರ್ಮಾಣ್ ಶೆಲ್ಪರ್ಸ್’ ಕಂಪನಿಯ ಎಂ.ಡಿ.ರಾದ ಲಕ್ಷ್ಮೀನಾರಾಯಣ ಅವರಿಂದ ಹತ್ತು ವರ್ಷದ ಹಿಂದೆ ಸಿ.ಎ. ನಿವೇಶನ ಖರೀದಿಸಿ
ವಂಚನೆಗೆ ಒಳಗಾಗಿದ್ದರು.
ಹತ್ತು ವರ್ಷದ ಬಳಿಕ ಸರ್ಕಾರಿ ಅಧಿಕಾರಿಗಳು “ಈ ಜಾಗ ಸಿ.ಎ. ನಿವೇಶನ, ಇದು ನಿಮ್ಮದಲ್ಲಾ ಎಂದು ಹೇಳಿದ್ದರು. . ಇದನ ಪ್ರಶ್ನಿಸಿ ಮುಕುಂದ ಕುಲಕರ್ಣಿ ಅವರು ಉಚ್ಚ ನ್ಯಾಯಾಲಯದಲ್ಲಿ ರಿಟ ಪಿಟಿಷನ್ ನಂ. 31924/2024 ಸಲ್ಲಿಸಿದ್ದರು.ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು 28.11.2024ರಂದು ತಡೆಯಾಜ್ಞೆಯನ್ನು ನೀಡಿದ್ದಾರೆ.
ನಿರ್ಮಾಣ ಶೆಲ್ಟರ್‍ನ ವಸ್ಥಾಪಕ ನಿರ್ದೇಶಕರು ಲಕ್ಷ್ಮೀನಾರಾಯಣ ನಿವೃತ್ತಿ ಸೈಟ್ ಮಾರಾಟ ಮಾಡಿಕೊಡುವುದಾಗಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.ಅನೇಕಲ್ ತಾಲೂಕಿನ ಜಿಗಣಿ ಬಳಿಯೂ ಅಕ್ರಮ ಲೇಔಟ್ ನಿರ್ಮಾಣ ಆರೋಪ ಕೇಳಿ ಬಂದಿದೆ.
ಇನ್ನೂ ಕಲ್ಲಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ‘ನಿಸರ್ಗ ಲೇಔಟ್ ನಿರ್ಮಾಣ ಮಾಡಿದ್ದು, ಇಲ್ಲಿ ಬಿ.ಎಂ.ಆರ್.ಡಿ.ಯ ನಿಯಮಗಳನ್ನು ಗಾಳಿಗೆ ತೂರಿದ್ದು, ಇಲ್ಲಿ ಸಿ.ಎ. ನಿವೇಶನಗಳ ಹಾಗೂ ಪಾಕ್ರ್ಗಳ ಜಾಗಗಳಲ್ಲಿ ಐಷಾರಾಮಿ ವಿಲ್ಲಾಗಳನ್ನು ನಿರ್ಮಾಣ ಮಾಡಿದ್ದಾರೆ. ಜೊತೆಗೆ ಹಲವು ನಿವೇಶನಗಳಿಗೆ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ ಎಂದು ಆರೋಪಿಸಲಾಗುತ್ತಿದೆ.
ಇದೇ ರೀತಿ ಆನೇಕಲ್ ಯೋಜನಾ ಪ್ರಾಧಿಕಾರಕ್ಕೆ, ಸಾಲು ಸಾಲು ದೂರು ನೀಡಲಾಗಿದೆ. ಈ ಹಿಂದೆ ಲಕ್ಷ್ಮಿನಾರಾಯಣ ಮತ್ತು ಕಂಪನಿಯ ಕಾನೂನು ಸಲಹೆಗಾರ ಶಶಿಪಾಟೀಲ್ ಇವರ ವಿರುದ್ಧ ನಿವೃತ್ತ ಎಸಿಪಿ ಲವಕುಮಾರ್ ಎಂಬುವವರಿಗೆ ಸೈಟ್ ಮಾರಾಟ ಮಾಡುವುದಾಗಿ ವಂಚಿಸಿದ್ದ ಆರೋಪದಲ್ಲಿ ಬೆಂಗಳೂರಿನ ಅಶೋಕ್ ನಗರ ಠಾಣೆಯಲ್ಲಿ ಎಫ್.ಆರ್.ಐ. ದಾಖಲಾಗಿತ್ತು.