ಜೈಪುರ, ಡಿ.24- ಮತ್ತೊಂದು ಬಾಲಕಿ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ರಾಜಸ್ತಾನದಲ್ಲಿ ನಡೆದಿದೆ.ರಾಜಸ್ಥಾನದ ಕೊಟ್‌ಪುಟ್ಲಿ-ಬೆಹ್ರೋರ್ ಜಿಲ್ಲೆಯಲ್ಲಿ ಮೂರು ವರ್ಷದ ಬಾಲಕಿ ಬೋರ್‌ವೆಲ್‌ಗೆ ಬಿದ್ದಿದ್ದು, 150 ಅಡಿ ಆಳದ ಬೋರ್‌ವೆಲ್‌ನಿಂದ ರಕ್ಷಿಸಲು ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ನಿಯೋಜಿಸಲಾಗಿದೆ.
ಬಾಲಕಿ ಚೇತನಾ, ಸರುಂಡ್ ಪ್ರದೇಶದ ತನ್ನ ತಂದೆಯ ಜಮೀನಿನಲ್ಲಿ ಆಟವಾಡುತ್ತಿದ್ದಾಗ ಆಕಸಿಕವಾಗಿ ಬೋರ್‌ವೆಲ್‌ಗೆ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿದ್ದು ರಾಡ್‌ಗೆ ಜೋಡಿಸಲಾದ ಕೊಕ್ಕೆಯ ಸಹಾಯದಿಂದ ಬಾಲಕಿಯನ್ನು ಹೊರತೆಗೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಸರಂಡ್ ಎಸ್‌ಎಚ್‌ಒ ಮೊಹಮದ್ ಇವ್ರಾನ್ ಹೇಳಿದ್ದಾರೆ.
ಬಾಲಕಿಯ ಚಲನವಲನಗಳನ್ನು ಕ್ಯಾಮರಾ ಮೂಲಕ ಸೆರೆಹಿಡಿಯಲಾಗಿದ್ದು, ಆಮ್ಲಜನಕದ ಪೈಪ್ ಅನ್ನು ಬೋರ್‌ವೆಲ್‌ಗೆ ಇಳಿಸಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ.ಮೊದಲು ಬಾಲಕಿ ಸುಮಾರು 150 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದಳು ನಂತರ ಮತ್ತಷ್ಟು ಆಳಕ್ಕೆ ಜಾರಿದ್ದು ಆಕೆಯ ಚಲನವಲನಗಳ ಮೇಲೆ ನಿಗಾ ಇಡಲಾಗಿದೆ .
ಇದಕ್ಕೂ ಮುನ್ನ ಕೈಗಾರಿಕಾ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು ಅಧಿಕಾರಿಗಳೊಂದಿಗೆ ಮಾತನಾಡಿ ಬಾಲಕಿಯನ್ನು ಶೀಘ್ರ ರಕ್ಷಿಸುವಂತೆ ಸೂಚನೆ ನೀಡಿದರು. ಎರಡು ವಾರಗಳ ಹಿಂದೆ ದೌಸಾ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನೊಬ್ಬ ಬೋರ್‌ವೆಲ್‌ಗೆ ಬಿದ್ದಿದ್ದ. ರಕ್ಷಣಾ ಕಾರ್ಯಾಚರಣೆ 55 ಗಂಟೆಗಳ ಕಾಲ ನಡೆಯಿತು ಆದರೆ ಬಾಲಕನನ್ನು ಉಳಿಸಲು ಸಾಧ್ಯವಾಗಿರಲಿಲ್ಲ.