Wednesday, December 25, 2024
Homeರಾಷ್ಟ್ರೀಯ | Nationalವಂದೇ ಭಾರತ್ ಸ್ಲೀಪರ್ ಕೋಚ್ ಸೇವೆ ಆರಂಭ

ವಂದೇ ಭಾರತ್ ಸ್ಲೀಪರ್ ಕೋಚ್ ಸೇವೆ ಆರಂಭ

200 Vande Bharat sleeper trains in line

ಗ್ವಾಲಿಯರ್( ಮಧ್ಯ ಪ್ರದೇಶ), ಡಿ.24– ಬಹುನಿರೀಕ್ಷಿತ ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರ ಬಹುನಿರೀಕ್ಷಿತ ರೈಲು ಮಧ್ಯಪ್ರದೇಶದ ಖಜುರಾಹೊ ರೈಲು ವಿಭಾಗ ಮತ್ತು ಉತ್ತರ ಪ್ರದೇಶದ ಮಹೋಬಾ ರೈಲು ವಿಭಾಗಗಳ ನಡುವೆ ಶನಿವಾರ -ಭಾನುವಾರ ಎರಡು ದಿನಗಳ ಕಾಲ ಪರೀಕ್ಷಾರ್ಥವಾಗಿ ಯಶಸ್ವಿ ಸಂಚಾರ ನಡೆಸಿತು. ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಪ್ರಯಾಣವನ್ನು ಎಸ್ಆರ್ಡಿಒ ಫೀಲ್‌್ಡ ಟ್ರಯಲ್ ರನ್ ಆಗಿ ಪೂರ್ಣಗೊಳಿಸಿದೆ.

ಕಾರ್ಯಕ್ಷಮತೆ ಟೆಸ್ಟ್: ಶುಕ್ರವಾರ ಸ್ಲೀಪರ್ ವಂದೇ ಭಾರತ್ ಎಕ್‌್ಸಪ್ರೆಸ್ನ ಮೊದಲ ರೇಖ್ಮಹೋಬಾವನ್ನು ತಲುಪಿತು. ಶನಿವಾರ ಮೊದಲ ಬಾರಿಗೆ ಟ್ರಯಲ್ ರನ್ ನಡೆಸಿ, ಕಾರ್ಯಕ್ಷಮತೆಯ ಪರೀಕ್ಷೆ ನಡೆಸಲಾಯಿತು. ಮಹೋಬಾ ಮತ್ತು ಖಜುರಾಹೊ ರೈಲು ವಿಭಾಗದ ನಡುವೆ ಈ ಪರೀಕ್ಷಾರ್ಥ ಸಂಚಾರ ಕೈಗೊಳ್ಳಲಾಗಿತ್ತು. ಸ್ಲೀಪರ್ ಕೋಚ್ ರೈಲಿನ ಯಶಸ್ವಿ ಪ್ರಯೋಗವನ್ನು ಭಾನುವಾರ ಮತ್ತೊಮೆ ನಡೆಸಲಾಯಿತು.

ಗಂಟೆಗೆ 160-200 ಕಿಮೀ ವೇಗ:
ಟ್ರಯಲ್ ರನ್ ಸಮಯದಲ್ಲಿ ಎಸ್ಆರ್ಡಿಒ ಜೊತೆಗೆ, ರೈಲ್ವೇಸ್ ಮತ್ತು ಐಸಿಎಫ್ ಚೆನ್ನೈನ ತಾಂತ್ರಿಕ ತಂಡವೂ ಉಪಸ್ಥಿತವಿತ್ತು. ಸ್ಲೀಪರ್ ವಂದೇ ಭಾರತ್ ಎಕ್‌್ಸಪ್ರೆಸ್ನ ತಾಂತ್ರಿಕ ಅಂಶಗಳ ಜತೆ ಜತೆಗೆ, ಅದರ ವೇಗ, ಉಪಕರಣಗಳ ತಾಂತ್ರಿಕ ಕಾರ್ಯಕ್ಷಮತೆಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲಾಯಿತು. ಇದೇ ವೇಳೆ, ರಕ್ಷಾಕವಚ ರಕ್ಷಣಾ ವ್ಯವಸ್ಥೆಯ ಪ್ರಾತ್ಯಕ್ಷಿಕೆಯೂ ನಡೆಯಿತು.

ಶನಿವಾರದ ಟ್ರಯಲ್ ರನ್ ವೇಳೆ ವಂದೇ ಭಾರತ ಸ್ಲೀಪರ್ ಕೋಚ್ ಗಂಟೆಗೆ 115 ಕಿಲೋಮೀಟರ್ ವೇಗದಲ್ಲಿ ಹಳಿ ಮೇಲೆ ಓಡಿದರೆ, ಭಾನುವಾರದ ಪ್ರಯೋಗದ ವೇಳೆ, ಗಂಟೆಗೆ 130 ಕಿಲೋಮೀಟರ್ ವೇಗದಲ್ಲಿ ಪರೀಕ್ಷೆ ಕೈಗೊಳ್ಳಲಾಗಿದೆ. ಸಾಮಾನ್ಯವಾಗಿ ಸ್ಲೀಪರ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಗಂಟೆಗೆ 160 ರಿಂದ 200 ಕಿಮೀ ವೇಗದಲ್ಲಿ ಸಂಚರಿಸಲಿದೆ ಎಂದು ನಂಬಲಾಗಿದೆ.

ಪ್ರಸ್ತುತ ರೈಲ್ವೆಯಿಂದ 10 ವಂದೇ ಭಾರತ್ ಸ್ಲೀಪರ್ ರೈಲುಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ರೈಲ್ವೆ ಇಲಾಖೆ ಮುಂಬರುವ ಸಮಯದಲ್ಲಿ ಭಾರತದಲ್ಲಿ 200 ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಪ್ರಾರಂಭಿಸಲು ಯೋಜಿಸಿದೆ. ಈ ರೈಲುಗಳು ದೀರ್ಘ ಮತ್ತು ಮಧ್ಯಮ ದೂರದ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡುತ್ತದೆ.

RELATED ARTICLES

Latest News