Friday, January 23, 2026
Homeರಾಷ್ಟ್ರೀಯಅಂಡಮಾನ್‌ನಲ್ಲಿ ನೇತಾಜಿ ಪರಂಪರೆ ಕುರಿತ ಪ್ರದರ್ಶನ

ಅಂಡಮಾನ್‌ನಲ್ಲಿ ನೇತಾಜಿ ಪರಂಪರೆ ಕುರಿತ ಪ್ರದರ್ಶನ

Cultural performances, drone show to mark Parakram Diwas at Andaman

ನವದೆಹಲಿ, ಜನವರಿ 23 (ಪಿಟಿಐ) ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್‌ ಚಂದ್ರ ಬೋಸ್‌‍ ಅವರ ಜೀವನ ಮತ್ತು ಪರಂಪರೆಯ ಕುರಿತಾದ ಪ್ರದರ್ಶನ, ಡ್ರೋನ್‌ ಪ್ರದರ್ಶನ ಮತ್ತು ಸಾಂಸ್ಕೃತಿಕ ಪ್ರದರ್ಶನಗಳನ್ನು ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಶ್ರೀ ವಿಜಯ ಪುರಂನಲ್ಲಿ ಆಯೋಜಿಸಲಾಗಿತ್ತು.

ಸಂಸ್ಕೃತಿ ಸಚಿವಾಲಯ ಆಯೋಜಿಸುತ್ತಿರುವ ಪರಾಕ್ರಮ್‌ ದಿವಸ್‌‍ ಜನವರಿ 25 ರಂದು ಮುಕ್ತಾಯಗೊಳ್ಳಲಿದೆ.ಶ್ರೀ ವಿಜಯ ಪುರಂ ಜೊತೆಗೆ, ಬೋಸ್‌‍ ಅವರೊಂದಿಗೆ ಸಂಬಂಧಿಸಿದ ದೇಶಾದ್ಯಂತ 13 ಇತರ ಪ್ರಸಿದ್ಧ ಸ್ಥಳಗಳಲ್ಲಿ ಆಚರಣೆಗಳನ್ನು ನಡೆಸಲಾಗುವುದು.
ಇಂದು ಮುಖ್ಯ ಸಮಾರಂಭವು ಶ್ರೀ ವಿಜಯ ಪುರಂನ ನೇತಾಜಿ ಕ್ರೀಡಾಂಗಣದಲ್ಲಿ ನಡೆಯಿತು. ಅಲ್ಲಿ ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಲೆಫ್ಟಿನೆಂಟ್‌ ಗವರ್ನರ್‌ ಅಡ್ಮಿರಲ್‌ ಡಿ ಕೆ ಜೋಶಿ (ನಿವೃತ್ತ) ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್‌‍ ಅವರ ಕೊಡುಗೆ ಮತ್ತು ಅವರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿಯ ಶಾಶ್ವತ ಪರಂಪರೆಯನ್ನು ಗೌರವಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿತ್ತು ಎಂದು ಸಚಿವಾಲಯ ತಿಳಿಸಿದೆ. ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂದೇಶವನ್ನು ಪ್ರಸಾರ ಮಾಡಲಾಗುವುದು ಎಂದು ಅದು ತಿಳಿಸಿದೆ.

ಉಸ್ತಾದ್‌ ಅಮ್ಜದ್‌ ಅಲಿ ಖಾನ್‌, ಪಾಪನ್‌, ಅಮಾನ್‌ ಅಲಿ ಬಂಗಾಶ್‌, ಅಯಾನ್‌ ಅಲಿ ಬಂಗಾಶ್‌‍, ಮಂಗ್ಲಿ, ರಘು ದೀಕ್ಷಿತ್‌, ಪ್ರತಿಭಾ ಸಿಂಗ್‌ ಬಘೇಲ್‌ ಅವರ ವಾದ್ಯಗೋಷ್ಠಿ ಮತ್ತು ಸೌರೇಂದ್ರೋಸೌಮ್ಯೋಜಿತ್‌ ಅವರ ಡ್ರೋನ್‌ ಪ್ರದರ್ಶನ ಮತ್ತು ಪ್ರದರ್ಶನಗಳು ಮೂರು ದಿನಗಳ ಕಾಲ ನಡೆದಯಲಿದೆ.

ಬೋಸ್‌‍ ಅವರ ಜೀವನದ ಕುರಿತು ಐಟಿಎಫ್‌ ಮೈದಾನದಲ್ಲಿ ಪ್ರದರ್ಶನ ನಡೆಯಲಿದೆ.ನಾಳೆ ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌‍ಡಿ)ಯಿಂದ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.

RELATED ARTICLES

Latest News