Wednesday, December 25, 2024
Homeಬೆಂಗಳೂರುಮನೆಗಳ್ಳತನ ಮಾಡಿದ್ದ ಆರೋಪಿ ಸೆರೆ, 39.62 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

ಮನೆಗಳ್ಳತನ ಮಾಡಿದ್ದ ಆರೋಪಿ ಸೆರೆ, 39.62 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

House burglary arrested, gold ornaments worth Rs 39.62 lakh seized

ಬೆಂಗಳೂರು,ಡಿ.24- ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದ, ಆರೋಪಿಯೊಬ್ಬನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿ 39.62 ಲಕ್ಷ ಮೌಲ್ಯದ 556 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದ ಚಳ್ಳಕೆರೆಯಲ್ಲಿ ವಾಸವಿರುವ ವ್ಯಕ್ತಿಯೊಬ್ಬರು ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿದ್ದಾಗ ಕಳ್ಳರು ಮನೆಯ ಮುಂಬಾಗಿಲಿನ ಬೀಗವನ್ನು ಮುರಿದು, ಒಳ ನುಗ್ಗಿ ಕೊಠಡಿಯ ಬೀರುವಿನಲ್ಲಿಟ್ಟಿದ್ದ 20 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ, ಹಾಗೂ 30 ಸಾವಿರ ಹಣ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.

ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ವಾಪಾಸ್ ಆದಾಗ ಮನೆಯಲ್ಲಿ ಕಳವು ಆಗಿರುವುದು ಕಂಡು ಬಂದಿದೆ. ತಕ್ಷಣ ಅವರು ಹೆಣ್ಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆಹಾಕಿ ಹೆಚ್ಬಿಆರ್ ಲೇಔಟ್ನ 4ನೇ ಬ್ಲಾಕ್ ಬಳಿ ಆರೋಪಿಯನ್ನು ವಶಕ್ಕೆ ಪಡೆದು ಆತನ ಬಳಿ ಇದ್ದ ಬ್ಯಾಗ್ನ್ನು ಪರೀಶಿಲಿಸಿದಾಗ, ಅದರಲ್ಲಿ ಒಂದು ಸ್ಕೂ ಡ್ರೈವ್, ಚಿಕ್ಕದಾದ ಕಬ್ಬಿಣದ ರಾಡ್ ಹಾಗೂ ಕಟ್ಟಿಂಗ್ ಪ್ಲೇಯರ್ ಇರುವುದು ಕಂಡು ಬಂದಿದೆ.
ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ಮನೆಗಳ್ಳತನ ಮಾಡಿರುವುದಾಗಿ ತಿಳಿಸಿರುತ್ತಾನೆ.

ಕಳವು ಮಾಡಿದ ಚಿನ್ನಾಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ಕುಣಿಗಲ್ನಲ್ಲಿರುವ ಆತನ ಸ್ನೇಹಿತನಿಗೆ ನೀಡಿರುವುದಾಗಿ ಆರೋಪಿ ತಿಳಿಸಿರುತ್ತಾನೆ. ತನಿಖೆಯನ್ನು ಮುಂದುವರೆಸಿದ ಪೊಲೀಸರು, ಕುಣಿಗಲ್ನಲ್ಲಿರುವ ಸ್ನೇಹಿತನನ್ನು ವಿಚಾರಣೆ ಮಾಡಿದಾಗ, ಆತನು ಚಿನ್ನಾಭರಣಗಳನ್ನು ಚಿಕ್ಕಪೇಟೆಯ ಜ್ಯೂವೆಲರಿ ಅಂಗಡಿಯ ಆತನ ಸ್ನೇಹಿತನಿಗೆ ಮಾರಾಟ ಮಾಡುವ ಸಲುವಾಗಿ ನೀಡಿರುವುದಾಗಿ ತಿಳಿಸಿರುತ್ತಾನೆ.

ಈ ಕುರಿತು ಚಿಕ್ಕಪೇಟೆಯ ಜ್ಯೂವೆಲರಿ ಶಾಪ್ನ ಮಾಲೀಕನಿಗೆ ನೋಟಿಸ್ನ್ನು ಜಾರಿ ಮಾಡಿದಾಗ, ಅವರು 556 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ 200 ಗ್ರಾಂ ಬೆಳ್ಳಿ ವಸ್ತುಗಳನ್ನು ಠಾಣೆಗೆ ತಂದು ಒಪ್ಪಿಸಿದ್ದಾರೆ. ಆರೋಪಿಯ ಬಂಧನದಿಂದ ಹೆಣ್ಣೂರು ಪೊಲೀಸ್ ಠಾಣೆಯ ಒಟ್ಟು 11 ಮನೆ ಕಳವು ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ. ಇನ್ಸ್ ಪೆಕ್ಟರ್ ದೀಪಕ್ ಮತ್ತು ಸಿಬ್ಬಂದಿ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

RELATED ARTICLES

Latest News