Wednesday, December 25, 2024
Homeರಾಷ್ಟ್ರೀಯ | Nationalಬಾಸ್ ಜೊತೆ ಲೈಂಗಿಕ ಸಂಪರ್ಕಕ್ಕೆ ಒಪ್ಪದ ಪತ್ನಿಗೆ ತಲಾಕ್ ನೀಡಿದ ಪತಿರಾಯ..!

ಬಾಸ್ ಜೊತೆ ಲೈಂಗಿಕ ಸಂಪರ್ಕಕ್ಕೆ ಒಪ್ಪದ ಪತ್ನಿಗೆ ತಲಾಕ್ ನೀಡಿದ ಪತಿರಾಯ..!

Maharashtra Man Gives Triple Talaq To Wife After She Refuses To Have Sex With His Boss

ಪುಣೆ,ಡಿ.24-ತನ್ನ ಕಂಪನಿಯ ಬಾಸ್ ಜೊತೆ ಲೈಂಗಿಕ ಕ್ರಿಯೆ ನಡೆಸಲು ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಪತಿ ತನ್ನ ಹೆಂಡತಿಗೆ ತಲಾಕ್ ನೀಡಿರುವ ಪ್ರಕರಣ ಪುಣೆಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಫ್‌್ಟವೇರ್ ಇಂಜಿನಿಯರ್ ಸೋಹೆಲ್ ಶೇಖ್ ಎಂಬಾತನ ವಿರುದ್ಧ ದೂರು ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತ್ನಿಗೆ ತನ್ನ ಕಂಪನಿಯ ಬಾಸ್ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಪ್ರತಿ ತಿಂಗಳು 15 ಸಾವಿರ ರೂ. ಹಣ ನೀಡುತ್ತಾರೆಂದು ಪುಸಲಾಯಿಸಿದ್ದ. ಆದರೆ ಈ ಬಗ್ಗೆ ಹೆಂಡತಿ ಒಪ್ಪದಿದ್ದಾಗ ಹಿಂದೆಮುಂದೆ ನೋಡದೆ ಪತಿರಾಯ ತಲಾಕ್ ತಲಾಕ್ ಎಂದು ಕೂಗಿದ.

ಇದರಿಂದ ರೊಚ್ಚುಗೆದ್ದ ಹೆಂಡತಿ ಆತನ ವಿರುದ್ಧ ದೂರು ನೀಡಿದ್ದಾಳೆ. ಅಂದಹಾಗೆ ಈ ಪತಿರಾಯನಿಗೆ ಇಬ್ಬರು ಹೆಂಡತಿಯರು. ವಿವಾಹ ಸಂದರ್ಭದಲ್ಲಿ ತನಗೆ ಪ್ರತಿ ತಿಂಗಳು 15 ಲಕ್ಷ ಸಂಬಳ ಬರುತ್ತದೆ ಎಂದು ಪುಸಲಾಯಿಸಿದ್ದ ಈತ ನಿಜಬಣ್ಣವೂ ಅಷ್ಟೇ ಬೇಗನೆ ಕಳಚಿಬಿದ್ದಿತ್ತು.

ಅಷ್ಟೇ ಅಲ್ಲದೆ ಎರಡನೇ ಪತ್ನಿ ಬಳಿ ಆಕೆಯ ಪೋಷಕರ ಮನೆಯಿಂದ 15 ಲಕ್ಷ ರೂ. ತರುವಂತೆ ಒತ್ತಡ ಹಾಕಿದ್ದ. ಆಕೆಗೂ ಆತ ತಲಾಖ್ ನೀಡಿದ್ದಾನೆ. ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 115(2), 351(2), 351(3) ಮತ್ತು 352 ಮತ್ತು ಮುಸ್ಲಿಂ ಮಹಿಳೆಯರ (ಮದುವೆಯ ಹಕ್ಕುಗಳ ರಕ್ಷಣೆ) ಕಾಯ್ದೆ, 2019ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸಂತ್ರಸ್ತೆ ಈ ವರ್ಷದ ಜನವರಿಯಲ್ಲಿ ಮದುವೆಯಾಗಿದ್ದರು. ಪತಿ ಹಣಕ್ಕಾಗಿ ಕಿರುಕುಳ ನೀಡಲು ಪ್ರಾರಂಭಿಸುವ ಮೊದಲು ಹೆಂಡತಿ ಮೊದಲ ಕೆಲವು ತಿಂಗಳು ಸಂತೋಷದ ಜೀವನ ಸಾಗಿಸುತ್ತಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡಲು 15 ಲಕ್ಷ ರೂ. ಬೇಕು ಎಂದು ಪತಿ ಹೇಳಿದ್ದು, ಆ ಮೊತ್ತವನ್ನು ಪೋಷಕರಿಂದ ಪಡೆಯಲು ಎರಡನೇ ಪತ್ನಿಗೆ ಪೀಡಿಸಿದ್ದಾನೆ.

ತನ್ನ ಬಾಸ್ ಜೊತೆ ಮಲಗಲು ನಿರಾಕರಿಸಿದ ನಂತರ ಪತಿ ತನ್ನ ಎರಡನೇ ಹೆಂಡತಿಗೆ ದೈಹಿಕವಾಗಿ ಕಿರುಕುಳ ನೀಡಿದ್ದಾನೆ. ತಕ್ಷಣ ತಲಾಖ್ ನೀಡಿದ ಬಳಿಕ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದಾನೆ.

RELATED ARTICLES

Latest News