ಬೆಂಗಳೂರು,ಡಿ.25-ಆಂಧ್ರಪ್ರದೇಶದ ವೆಂಕಟೇಶ್ವರ ದೇವಸ್ಥಾನದಲ್ಲಿ ಹಲವಾರು ದಶಕಗಳಿಂದ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ನಾಹೀ ಬ್ರಾಹ್ಮಣ ಸಮುದಾಯಕ್ಕೆ ಆರ್ಥಿಕ ನೆರವು ನೀಡಲು ವೈಜ್ಞಾನಿಕ ಉಪಸಮಿತಿ ರಚಿಸಬೇಕೆಂದು ಟಿಟಿಡಿ ಸದಸ್ಯ ಎಸ್.ನರೇಶ್‍ಕುಮಾರ್ ಮನವಿ ಮಾಡಿದ್ದಾರೆ.
ಈ ಸಂಬಂಧ ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಹಾಗೂ ಟಿಟಿಡಿ ಜಂಟಿ ಕಾರ್ಯಕಾರಿ ಅಧಿಕಾರಿ ವೆಂಕಯ್ಯ ಚೌಧರಿ ಅವರಿಗೆ ಪತ್ರ ಬರೆದಿರುವ ನರೇಶ್‍ಕುಮಾರ್, ನಾಹೀ ಬ್ರಾಹ್ಮಣ ಸಮುದಾಯ ಹಲವಾರು ವರ್ಷಗಳಿಂದ ಆರ್ಥಿಕ, ಸಾಮಾಜಿಕ ಮತ್ತು ಆರೋಗ್ಯ ಸಂಬಂಧಿತ ಸಾಲಗಳನ್ನು ನಡೆಸುತ್ತದೆ. ಇದರ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಒದಗಿಸಲು ಸೂಕ್ತ ವೈಜ್ಞಾನಿಕ ಸಮಿತಿಯನ್ನು ರಚಿಸುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ವೆಂಕಟೇಶ್ವರನ ಸನ್ನಿಧಿಯಲ್ಲಿ ಹಲವಾರು ದಶಕಗಳಿಂದ ಪೂಜೆ, ಮಂಗಳವಾದ್ಯ, ಕೇಶ ಮುಂಡನ ಸೇರಿದಂತೆ ಇತ್ಯಾದಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇವರ ಜೀವನ ಭದ್ರತೆಗೆ ಪರದಾಡಬೇಕಾದ ಸ್ಥಿತಿ ಇದೆ ಎಂದು ಮನವರಿಕೆ ಮಾಡಿದ್ದಾರೆ.
ಶ್ರೀ ವೆಂಕಟೇಶ್ವರನ ಸನ್ನಿಧಿಗೆ ಪ್ರತಿ ವರ್ಷ 400 ಕೋಟಿಗೂ ಹೆಚ್ಚು ಆದಾಯ ಬರುತ್ತದೆ. ಕೇಶ ಮುಂಡನ, ವಿಶೇಷ ಪೂಜೆಗಳು, ಇವುಗಳಲ್ಲದೆ ಕೋಟಿ ಗಟ್ಟಲೇ ಅಆದಾಯ ಗಳಿಕೆಯಾಗುತ್ತದೆ.
ದೇವಸ್ಥಾನದ ಒಟ್ಟು ಆದಾಯದ ಒಂದು ಭಾಗವನ್ನು ನಾಹೀ ಬ್ರಾಹ್ಮಣದ ಸಮುದಾಯದ ಕಲ್ಯಾಣಭಿವೃದ್ಧಿಗೆ ಟಿಟಿಡಿ ಮೀಸಲಿಡಬೇಕೆಂದು ಆಗ್ರಹಿಸಿದ್ದಾರೆ.
ಸಮುದಾಯದ ಕಲ್ಯಾಣಭಿವೃದ್ಧಿಗಾಗಿ ಕಾರ್ಪಸ್ ನಿಧಿಯನ್ನು ಸ್ಥಾಪಿಸಬೇಕು. ಇದರಿಂದ ಈ ಸಮುದಾಯದ ಆರ್ಥಿಕ, ಶೈಕ್ಷಣಿಕ, ಆರೋಗ್ಯ, ಸ್ಥಿತಿಗತಿಗಳನ್ನು ಪೂರೈಕೆ ಮಾಡಲು ಅನುಕೂಲವಾಗುತ್ತದೆ ಎಂದು ಮನವರಿಕೆ ಮಾಡಿದ್ದಾರೆ.