Thursday, December 26, 2024
Homeರಾಷ್ಟ್ರೀಯ | Nationalಮಣಿಪುರ : ಸೇತುವೆಯೊಂದರ ಕೆಳಗೆ ಇಟ್ಟಿದ್ದ 3.6 ಕೆಜಿ ಸ್ಫೋಟಕ ವಶ

ಮಣಿಪುರ : ಸೇತುವೆಯೊಂದರ ಕೆಳಗೆ ಇಟ್ಟಿದ್ದ 3.6 ಕೆಜಿ ಸ್ಫೋಟಕ ವಶ

Plan to blow up bridge in Manipur foiled: Army seizes 3.6 kg of explosives under a bridge in Churachandpur

ಇಂಫಾಲ, ಡಿ.25 (ಪಿಟಿಐ) ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಸೇತುವೆಯೊಂದರ ಕೆಳಗೆ ಭದ್ರತಾ ಪಡೆಗಳು 3.6 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಭಾರತೀಯ ಸೇನೆ ಹೇಳಿಕೆ ತಿಳಿಸಿದೆ.

ಜಂಟಿ ಕಾರ್ಯಾಚರಣೆಯಲ್ಲಿ, ಅಸ್ಸಾಂ ರೈಫಲ್ಸ್‌‍ ಮತ್ತು ಮಣಿಪುರ ಪೊಲೀಸರು ಇಂಫಾಲ್‌‍-ಚುರಚಂದಪುರ ಮಾರ್ಗದ ಲೀಸಾಂಗ್‌ ಗ್ರಾಮದಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅದು ಹೇಳಿದೆ.

ಚುರಾಚಂದ್‌ಪುರ ಜಿಲ್ಲೆಯಲ್ಲಿ ಸ್ಪಿಯರ್‌ಕಾರ್ಪ್ಸ್‌ ಅಡಿಯಲ್ಲಿ ಅಸ್ಸಾಂ ರೈಫಲ್ಸ್‌‍ ರಚನೆ ಮತ್ತು ಮಣಿಪುರ_ಪೊಲೀಸ್‌‍ ಜಂಟಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ 3.6 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲು ಬಾಂಬ್‌ ಸ್ಕ್ವಾಡ್‌ ಅನ್ನು ನಿಯೋಜಿಸಲಾಗಿದೆ ಎಂದು ಅದು ಹೇಳಿದೆ.ಭದ್ರತಾ ಪಡೆಗಳು ಚುರಾಚಂದ್‌ಪುರ ಜಿಲ್ಲೆಯ ಮೊಲ್ಜೋಲ್‌ ಗ್ರಾಮದಿಂದ ಒಂದು ಎಂ -16 ವ್ಯಾಗಜೀನ್‌, ನಾಲ್ಕು ಎಸ್‌‍ಬಿಬಿಎಲ್‌ ದೇಶ ನಿರ್ಮಿತ ಬಂದೂಕುಗಳು, ಒಂದು ರಿವಾಲ್ವರ್‌ ಮತ್ತು ಮದ್ದುಗುಂಡುಗಳು ಸೇರಿದಂತೆ ಏಳು ಬಂದೂಕುಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸ್‌‍ ಹೇಳಿಕೆ ತಿಳಿಸಿದೆ.

RELATED ARTICLES

Latest News