Thursday, December 26, 2024
Homeಮನರಂಜನೆಮ್ಯಾಕ್ಸ್ ಚಿತ್ರ ರಿಲೀಸ್, ಸುದೀಪ್ ಅಭಿಮಾನಿಗಳ ಸಂಭ್ರಮ

ಮ್ಯಾಕ್ಸ್ ಚಿತ್ರ ರಿಲೀಸ್, ಸುದೀಪ್ ಅಭಿಮಾನಿಗಳ ಸಂಭ್ರಮ

ಈ ವರ್ಷದ ತಿಂಗಳಾಂತ್ಯಕ್ಕೆ ದೊಡ್ಡ ಹೀರೋ ಚಿತ್ರಗಳು ಬಿಡುಗಡೆಯಾಗಿ ಯಶಸ್ವಿ ಕಾಣುತ್ತಿವೆ. ಕಳೆದ ವಾರ ಉಪೇಂದ್ರ ನಿರ್ದೇಶಸಿ ಅಭಿನಯಿಸಿದ್ದ ಯಿಐ ಚಿತ್ರ ಎಲ್ಲಾ ಕಡೆ ಸದ್ದು ಮಾಡುತ್ತಿರುವ ಬೆನ್ನಲ್ಲೇ ಈ ವಾರ ಕೂಡ ಪ್ಯಾನ್‌ ಇಂಡಿಯಾ ನಟ ಕಿಚ್ಚ ಸುದೀಪ್‌ ಅಭಿನಯದ ಮ್ಯಾಕ್ಸ್‌‍ ಎಲ್ಲಾ ಸೆಂಟರ್ಗಳಲ್ಲೂ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಹಿಂದೆ ಸುದೀಪ್‌ ಹೇಳಿದ ಹಾಗೆ ಕಥೆ ತುಂಬಾ ಭಿನ್ನವಾಗಿರುತ್ತದೆ, ಒಂದು ರಾತ್ರಿಯಲ್ಲಿ ನಡೆಯುವ ಕಥೆ ಇದಾಗಿದ್ದು ಪ್ರೇಕ್ಷಕರನ್ನ ಬೇರೆ ಲೋಕಕ್ಕೆ ಕೊಂಡಯುತ್ತದೆ ಎಂದಿದ್ದರು. ಅದು ಸಿನಿಮಾ ನೋಡಿದ ಮಂದಿಗೆ ಅರಿವಾಗುತ್ತದೆ.

ತಮಿಳು ನಿರ್ದೇಶಕ ವಿಜಯ್‌ ಕಾರ್ತಿಕೇಯ ಸುದೀಪ್‌ ಮ್ಯಾನರಿಜಮ್‌ ಗೆ ಹೊಂದಿಕೊಳ್ಳುವಂತೆ ಕಥೆಯನ್ನು ಬರೆದು ಸ್ಕ್ರೀನ್‌ ಪ್ಲೇ ಮಾಡಿದ್ದಾರೆ. ಅಷ್ಟೇ ಅಲ್ಲದೆ ಅವರನ್ನು ಆಕ್ಷನ್‌ ಎಪಿಸೋಡ್‌ ಗಳಲ್ಲಿ ಸುದೀಪ್‌ ಅವರ ಹಿಂದಿನ ಚಿತ್ರ ಗಳಿಗಿಂತ ಬೇರೆ ಶೈಲಿಯಲ್ಲಿ ಸ್ಕ್ರೀನ್‌ ಮೇಲೆ ತೋರಿಸಿರುವುದು ಆಡಿಯ್ಸ್‌‍ರನ್ನು ಅಟ್ರಾಕ್ಟ್ ಮಾಡುತ್ತದೆ. ಸಿನಿಮಾ ನೆನ್ನೆ ಕ್ರಿಸಸ್‌‍ ಹಬ್ಬ ಇದ್ದಿದ್ದರಿಂದ ಅಂದೆ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌‍ಫುಲ್‌ ಪ್ರದರ್ಶನ ಕಾಣುತ್ತಿದೆ.

ಕಲೈಪುಲಿ ಎಸ್‌‍. ತನು ವಿ. ಕ್ರಿಯೇಷ್ಸ್‌‍ ಹಾಗೂ ಕಿಚ್ಚ ಕ್ರಿಯೇಷ್ಸ್‌‍ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರ ತುಂಬಾ ಶ್ರೀಮಂತಿಕೆಯಿಂದ ಕೂಡಿದೆ. ಸುದೀಪ್‌ ಅಭಿಮಾನಿಗಳು ಇಷ್ಟಪಡುವ ಹಾಗೆ ಎಲ್ಲಾ ಕಮರ್ಷಿಯಲ್‌ ಅಂಶಗಳನ್ನು ಪೋಣಿಸಿ ಉತ್ತಮ ಮನರಂಜನಾತಕ ಚಿತ್ರ ಹಾಗುವ ಹಾಗೆ ಎಲ್ಲಾ ಶ್ರಮವಹಿಸಿದ್ದಾರೆ. ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡುವ ಒಬ್ಬ ನಿಷ್ಠಾವಂತ ಪೊಲೀಸ್‌‍ ಅಧಿಕಾರಿಯ ಆರ್ಭಟವನ್ನು ಮ್ಯಾಕ್ಸ್ ಮೂಲಕ ನೋಡಬಹುದು.

ತಮಿಳು ಚಿತ್ರರಂಗದಲ್ಲಿ ಸೂರ್ಯ ಈ ರೀತಿಯ ಪಾತ್ರಗಳಲ್ಲಿ ರಾಷ್ಟ್ರ ಮಟ್ಟದಲ್ಲಿ ಜನ ಮೆಚ್ಚುಗೆಯನ್ನು ಪಡೆದಿದ್ದಾರೆ. ಹಾಗೆಯೇ ಸುದೀಪ್‌ ಕೂಡ ಕೆಂಪೇಗೌಡ ಸೇರಿದಂತೆ ಕೆಲವು ಚಿತ್ರಗಳಲ್ಲಿ ಪೊಲೀಸ್‌‍ ಯಿನಿಫಾರಮ್‌ ಧರಿಸಿ ಕನ್ನಡ ಪ್ರೇಕ್ಷಕರನ್ನ ಮಸ್ತಾಗಿ ರಂಜಿಸಿದ್ದಾರೆ. ಇದರಲ್ಲಿ ಯುನಿಫಾರಂ ಧರಿಸದಿದ್ದರು ಖಡಕ್ಕಾಗಿಯೇ ಮಿಂಚಿದ್ದಾರೆ.

ಸದ್ಯ ಟ್ರೆಂಡ್‌ ನಲ್ಲಿರುವ ಮ್ಯೂಸಿಕ್‌ ಡೈರೆಕ್ಟರ್‌ ಅಜಿನೀಶ್‌ ಲೋಕನಾಥ್‌ ಕಂಪೋಸ್‌‍ ಮಾಡಿರುವ ಎಲ್ಲಾ ಹಾಡುಗಳು ವಿಭಿನ್ನವಾಗಿದ್ದು ಚಿತ್ರದ ರಿಚ್ನೆಸ್‌‍ ಎನ್ನ ಹೆಚ್ಚಿಸಿವೆ.
ಎರಡುವರೆ ವರ್ಷಗಳ ನಂತರ ಮ್ಯ್ಸ್‌ಾ ಚಿತ್ರದ ಮೂಲಕ ನಿಮ ಮುಂದೆ ಬರುತ್ತಿದ್ದೇನೆ. ಸ್ವಲ್ಪ ತಡವಾಗಿದೆ ಕ್ಷಮೆ ಇರಲಿ. ನಾವು ಲೇಟಾಗಿ ಬಂದರೂ ಲೇಟೆಸ್ಟಾಗಿ ಬರುತ್ತೇವೆ.

ನಿಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದು ಚಿತ್ರ ಬಿಡುಗಡೆಗೂ ಮುಂಚೆ ಹೇಳಿಕೊಂಡಿದ್ದರು ನಟ ಸುದೀಪ್‌. ಅದನ್ನು ಈಗ ನಿಜ ಮಾಡಿದ್ದಾರೆ. ಡೈಲಾಗ್‌ ಡೆಲಿವರಿ, ಆಕ್ಷನ್‌, ಮ್ಯಾನರಿಸಮ್‌ ಎಲ್ಲ ವಿಷಯಗಳಲ್ಲೂ ಬೇರೆಯ್ದೆ ವಿಧಾನಗಳನ್ನು ಅಳವಡಿಸಿ ನಟ ಸುದೀಪ್‌ ತನ್ನ ಅಭಿಮಾನಿಗಳಿಗೆ ಮನರಂಜನೆಯ ಗ್ಟಿ್‌ ಕೊಟ್ಟಿದ್ದಾರೆ.

RELATED ARTICLES

Latest News