ಬೆಂಗಳೂರು,ಡಿ.25– ಕ್ರೈಸ್ತ ಬಾಂಧವರ ಪವಿತ್ರ ಹಬ್ಬವಾದ ಕ್ರಿಸ್‌ಮಸ್ ಅನ್ನು ಇಂದು ನಾಡಿನಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಅತ್ಯಾಕರ್ಷಕ ವಿದ್ಯುತ್ ದೀಪಾಲಂಕಾರ, ಗೋದಲಿಯಲ್ಲಿ ಬಾಲ ಏಸು ಮೂರ್ತಿ, ಕ್ರಿಸ್‌ಮಸ್ ನಕ್ಷತ್ರಗಳು, ಕ್ರಿಸ್‌ಮಸ್ ಟ್ರೀ, ಸಾಂತಾಕ್ಲಾಸ್‌ನ ಪ್ರತಿರೂಪಗಳು, ಕ್ಯಾಲರ್ ಗೀತೆಗಳು ಹಾಗೂ ಶ್ರದ್ಧಾಭಕ್ತಿಯ ಸಾಮೂಹಿಕ ಪ್ರಾರ್ಥನೆ, ಪರಸ್ಪರ ಶುಭಾಶಯ ವಿನಿಮಯ ದೃಶ್ಯಗಳು ಚರ್ಚ್‌ಗಳಲ್ಲಿ ಕಂಡುಬಂದವು. ಮಧ್ಯರಾತ್ರಿಯಿಂದಲೇ ಚರ್ಚ್‌ಗಳಲ್ಲಿ ಪ್ರಾರ್ಥನೆಯೊಂದಿಗೆ ಕ್ರೈಸ್ತ ಬಾಂಧವರು ಒಟ್ಟಾಗಿ ಹಬ್ಬವನ್ನು ಆಚರಿಸಿದರು.
ಚರ್ಚ್‌ಗಳಲ್ಲಿ ಧರ್ಮಗುರುಗಳ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್‌ಮಸ್ ಸಂದೇಶ ಸೇರಿದಂತೆ ಸಾಂಸ್ಕೃತಿ ಕಾರ್ಯಕ್ರಮಗಳು ಜರುಗಿದವು.ಬೆಂಗಳೂರಿನ ಕಾರ್ಪರೇಷನ್ ವೃತ್ತದ ಬಳಿಯಿರುವ ಹಟ್ಸನ್ ಸಾರಕ ಚರ್ಚ್, ಶಿವಾಜಿನಗರದ ಸೇಂಟ್ ಮೇರಿಸ್ ಬೆಸಿಲಿಕಾ ಚರ್ಚ್, ಎಂ.ಜಿ.ರಸ್ತೆಯ ಸೇಂಟ್ ಮಾರ್ಕ್‌್ಸ ಕ್ಯಾಥೆಡ್ರಾಲ್ ಚರ್ಚ್ ಸೇರಿದಂತೆ ನಗರದಲ್ಲಿರುವ ಹಲವಾರು ಚರ್ಚ್‌ಗಳು ಮಧುವಣಗಿತ್ತಿಯಂತೆ ಶೃಂಗಾರಗೊಂಡಿದ್ದು ಎಲ್ಲರ ಗಮನ ಸೆಳೆಯುತ್ತಿವೆ.
ಅದೇ ರೀತಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಚರ್ಚ್‌ಗಳಲ್ಲೂ ಸಹ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಇದರ ಜೊತೆಗೆ ಕ್ರೈಸ್ತಬಾಂಧವರು ತಮ ತಮ ಮನೆಗಳನ್ನು ಶೃಂಗರಿಸಿದ್ದು, ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ.
ಕ್ರಿಸ್‌ಮಸ್ ಎಂಬ ಪದವು ಕ್ರಿಸ್ತನಿಂದ ಹುಟ್ಟಿಕೊಂಡಿದೆ ಎನ್ನುವ ನಂಬಿಕೆ ಇದೆ. ಕ್ರಿ.ಶ.336 ರಲ್ಲಿ ರೋಂನಲ್ಲಿ ವಿಶ್ವದ ಮೊದಲ ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಯಿತು. ಈ ದಿನವನ್ನು ಏಸು ಕ್ರಿಸ್ತನ ಜನದಿನವನ್ನಾಗಿ ಆಚರಿಸಲಾಗುತ್ತದೆ.
ಗಮನ ಸೆಳೆದ ಸಾಂತಾಕ್ಲಾಸ್‌ನ ವೇಷಧಾರಿಗಳು :
ನಗರದ ಮಾಲ್‌ಗಳು ದೀಪಾಲಂಕಾರ ಹಾಗೂ ಕ್ರಿಸ್‌ಮಸ್ ಟ್ರೀಗಳಿಂದ ಕಂಗೊಳಿಸುತ್ತಿದ್ದು, ಸಾಂತಾಕ್ಲಾಸ್ ವೇಷಧಾರಿಗಳು ಮಾಲ್‌ಗಳ ಬಳಿ ನಿಂತು ಮಕ್ಕಳಿಗೆ ಚಾಕ್ಲೆಟ್ ನೀಡಿ ಶುಭ ಕೋರುತ್ತಿದ್ದ ದೃಶ್ಯಗಳು ಕಂಡುಬಂದವು.
ಓರಾಯನ್ ಮಾಲ್, ಫಿನಿಕ್‌್ಸ ಮಾಲ್, ಮಾಲ್ ಏಷ್ಯಾ ಮಾಲ್, ಲುಲ್ಲು ಮಾಲ್, ಮಂತ್ರಿಮಾಲ್, ಜಿ.ಟಿ.ಮಾಲ್, ಗ್ಲೋಬಲ್ ಮಾಲ್, ಆರ್ಕಿಡ್ ಮಾಲ್ ಸೇರಿದಂತೆ ಮತ್ತಿತರ ಮಾಲ್‌ಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಜೋರಾಗಿತ್ತು.ಎಲ್ಲಾ ಮಾಲ್‌ಗಳಲ್ಲಿ ಸಂಗೀತ ಕಾರ್ಯಕ್ರಮ ಹಮಿಕೊಂಡಿದ್ದು, ಮಕ್ಕಳಿಗೆ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಗಮನ ಸೆಳೆದ ಕೇಕೋತ್ಸವ :
ಇನ್ಸ್ಟಿಟ್ಯೂಟ್ ಆಫ್ ಬೇಕಿಂಗ್ ಮತ್ತು ಕೇಕ್ ಆರ್ಟ್‌್ಸ ಹಾಗೂ ಮೈ ಬೇಕ್ ಮಾರ್ಟ್ ಸಂಸ್ಥೆಗಳು ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಆಯೋಜಿಸಿರುವ ಬೃಹತ್ ಕೇಕೋತ್ಸವ ಜನರ ಕಣನ ಸೆಳೆಯುತ್ತಿವೆ.