Thursday, December 26, 2024
Homeಬೆಂಗಳೂರುಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್

ಹೊಸ ವರ್ಷಾಚರಣೆ ವೇಳೆ ಮಹಿಳೆಯರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್

Police alert for Women's Safety during New Year celebrations

ಬೆಂಗಳೂರು,ಡಿ.25- ನಗರದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನಗರ ಪೊಲೀಸರು ವುಮೆನ್ಸ್ ಹೈಲ್ಯಾಂಡ್, ಪಿಕಪ್-ಡ್ರಾಪ್ಗೆ ಕ್ಯಾಬ್ ಸೌಲಭ್ಯ, ಚಿನ್ನಮ ಪಡೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಪ್ರಮುಖವಾಗಿ ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್, ಎಂ.ಜಿ.ರಸ್ತೆಯಲ್ಲಿ ಹೆಚ್ಚಾಗಿ ಹೊಸ ವರ್ಷಾಚರಣೆಗೆ ಜನಸಂದಣಿ ಸೇರುವುದರಿಂದ 15ಕ್ಕೂ ಹೆಚ್ಚು ವುಮೆನ್ಸ್ ಹೈಲ್ಯಾಂಡ್ ಸ್ಥಾಪಿಸಲಾಗಿದೆ.ಅದೇ ರೀತಿ ಇಂದಿರಾನಗರ, ಕೋರಮಂಗಲದಲ್ಲೂ ವುಮೆನ್ಸ್ ಹೈಲ್ಯಾಂಡ್ ತೆರೆಯಲಾಗಿದೆ. ನೈಟ್ ಪಾರ್ಟಿ ನಡೆಯುವ ಪಬ್, ಬಾರ್ ಅಂಡ್ ರೆಸ್ಟೋರೆಂಟ್, ಕ್ಲಬ್, ಹೋಟೆಲ್ಗಳಲ್ಲಿ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮಹಿಳೆಯರಿಗಾಗಿ ಕ್ಯಾಬ್ ಸೌಲಭ್ಯಗಳನ್ನು ಆಯೋಜಕರೇ ಒದಗಿಸಲಿದ್ದಾರೆ.

ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮಹಿಳೆಯರು ಮದ್ಯ ಸೇವಿಸಿ ಅಸ್ವಸ್ಥರಾದರೆ ಅವರನ್ನು ಮನೆಗೆ ಕಳುಹಿಸಲು ಕ್ಯಾಬ್ ಸೌಲಭ್ಯವನ್ನು ಮಾಲೀಕರು ನೀಡಲಿದ್ದಾರೆ. ಅಲ್ಲದೆ ಅಂತಹ ಪರಿಸ್ಥಿತಿಯಲ್ಲಿ ತಮ ವಾಹನಗಳನ್ನು ಚಲಾಯಿಸಲು ಸಾಧ್ಯವಾಗದಿದ್ದರೆ ಅವರುಗಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಜವಾಬ್ದಾರಿಯನ್ನು ಆಯೋಜಕರೇ ವಹಿಸಿಕೊಂಡು ಕ್ಯಾಬ್ ವ್ಯವಸ್ಥೆ ಮಾಡುವಂತೆ ನಗರ ಪೊಲೀಸ್ ಪೊಲೀಸರು ಸೂಚಿಸಿದ್ದಾರೆ.

ಅಂದು ಕೇಂದ್ರ ವಿಭಾಗದ ಎಂ.ಜಿ.ರಸ್ತೆ, ಚರ್ಚ್ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ, ಇಂದಿರಾನಗರ ಸೇರಿದಂತೆ ಜನಸಂದಣಿ ಸೇರುವ ಪ್ರದೇಶಗಳಲ್ಲಿ ನಗರದ ಎಲ್ಲಾ ಪೊಲೀಸ್ ಠಾಣೆಗಳ ಮಹಿಳಾ ಅಧಿಕಾರಿ ಮತ್ತು ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಜೊತೆಗೆ ಡ್ರೋನ್ ಕಣ್ಗಾವಲಿರುತ್ತದೆ.

ಹೆಚ್ಚಿನ ಸಂಖ್ಯೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ಒಟ್ಟಾರೆ ಹೊಸ ವರ್ಷಾಚರಣೆಯಂದು ಮಹಿಳೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅದರಲ್ಲೂ ಹಿಂದಿನ ವರ್ಷ ಆದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ನಗರ ಪೊಲೀಸರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

RELATED ARTICLES

Latest News