ಅಹಮದಾಬಾದ್,ಡಿ. 29- ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಇಂದು ಬೆಳಗ್ಗೆ 3.2 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ಭೂಕಂಪನ ಸಂಶೋಧನಾ ಸಂಸ್ಥೆ ತಿಳಿಸಿದೆ. ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.
ಬೆಳಿಗ್ಗೆ 10.06 ಗಂಟೆಗೆ ಭೂಕಂಪನವು ದಾಖಲಾಗಿದ್ದು, ಅದರ ಕೇಂದ್ರಬಿಂದು ಭಚೌದಿಂದ ಈಶಾನ್ಯಕ್ಕೆ 18 ಕಿಲೋಮೀಟರ್ ದೂರದಲ್ಲಿದೆ.ಜಿಲ್ಲೆಯಲ್ಲಿ ಈ ತಿಂಗಳಿನಲ್ಲಿ 3 ಕ್ಕಿಂತ ಹೆಚ್ಚು ತೀವ್ರತೆಯ ಮೂರನೇ ಭೂಕಂಪನ ಚಟುವಟಿಕೆ ಇದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಡಿ.23 ರಂದು ಕಚ್‌ನಲ್ಲಿ 3.7 ತೀವ್ರತೆಯ ಕಂಪನ ಸಂಭವಿಸಿತ್ತು ಮತ್ತು ಡಿ.7 ರಂದು 3.2 ತೀವ್ರತೆಯ ಕಂಪನ ದಾಖಲಾಗಿತ್ತುಎಂದು ಗುಜರಾತ್ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ತಿಳಿಸಿದ್ದು ಗುಜರಾತ್‌ನ ಕೆಲ ಭಾಗ ಹೆಚ್ಚು ಭೂಕಂಪದ ಅಪಾಯದ ಪ್ರದೇಶವಾಗಿದೆ ಎಂದಿದೆ.