Saturday, January 4, 2025
Homeರಾಷ್ಟ್ರೀಯ | Nationalಪ್ರಧಾನಿ ಮೋದಿ ಮನ್‌ ಕಿ ಬಾತ್‌ 117ನೇ ಸಂಚಿಕೆಯ ಹೈಲೈಟ್ಸ್

ಪ್ರಧಾನಿ ಮೋದಿ ಮನ್‌ ಕಿ ಬಾತ್‌ 117ನೇ ಸಂಚಿಕೆಯ ಹೈಲೈಟ್ಸ್

Mann Ki Baat : PM Narendra Modi highlights importance of Mahakumbh

ನವದೆಹಲಿ,ಡಿ.29- ಸಂವಿಧಾನವೇ ನಮ ಮಾರ್ಗದರ್ಶಕ ಬೆಳಕು. ಇಂದು ಭಾರತದ ಸಂವಿಧಾನವು ಕಾಲದ ಪರೀಕ್ಷೆಯಲ್ಲಿ ನಿಂತಿದೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದರು. ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 117ನೇ ಸಂಚಿಕೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2025ರ ಜನವರಿ 26ರಂದು ನಮ ಸಂವಿಧಾನವು 75 ವರ್ಷಗಳನ್ನು ಪೂರೈಸುತ್ತಿದೆ. ಇದು ನಮಗೆಲ್ಲರಿಗೂ ಹೆಮೆಯ ವಿಷಯ ಎಂದರು.

ಸಂವಿಧಾನ ತಯಾರಕರು ನಮಗೆ ಹಸ್ತಾಂತರಿಸಿದ ಸಂವಿಧಾನವು ನಮಗೆ ಮಾರ್ಗದರ್ಶಕ ಬೆಳಕು ಮತ್ತು ನಮಗೆ ಮಾರ್ಗದರ್ಶನ ಮಾಡುತ್ತಿದೆ ಎಂದು ಹೇಳಿದರು.ಇದರ ಗೌರವಾರ್ಥವಾಗಿ ಸಂವಿಧಾನ ಪೀಠಿಕೆಯನ್ನು ಓದಲು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ನಾಗರಿಕರಿಗೆ ಅವಕಾಶ ಕಲ್ಪಿಸಲಾಗಿದೆ.

ದೇಶದ ನಾಗರಿಕರನ್ನು ಸಂವಿಧಾನದ ಪರಂಪರೆಯೊಂದಿಗೆ ಸಂಪರ್ಕಿಸಲು ವಿಶೇಷ ವೆಬ್‌ಸೈಟ್‌ http://Constitution75.com ಅನ್ನು ರಚಿಸಲಾಗಿದೆ. ಇದರಲ್ಲಿ, ನೀವು ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ನಿಮ ವೀಡಿಯೊವನ್ನು ಅಪ್‌ಲೋಡ್‌ ಮಾಡಬಹುದು. ನೀವು ವಿವಿಧ ಭಾಷೆಗಳಲ್ಲಿ ಸಂವಿಧಾನವನ್ನು ಓದಬಹುದು ಮತ್ತು ಸಂವಿಧಾನದ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು ಎಂದರು.

ಶಾಲಾ-ಕಾಲೇಜಿಗೆ ಹೋಗುವ ಮಕ್ಕಳು, ಕಾಲೇಜಿಗೆ ಹೋಗುವ ಯುವಕರು, ಮನ್‌ಕೀ ಬಾತ್‌ ಕೇಳುಗರು, ದೇಶದ ನಾಗರಿಕರು ಈ ವೆಬ್‌ಸೈಟ್‌ಗೆ ಭೇಟಿ ನೀಡಿ ಅದರ ಭಾಗವಾಗಬೇಕು ಎಂದು ಪ್ರಧಾನಿ ಮನವಿ ಮಾಡಿದರು.

ಜನವರಿ 13ರಿಂದ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಮಹಾಕುಂಭದ ಮಹತ್ವವನ್ನು ಎತ್ತಿ ಹಿಡಿದ ಮೋದಿ, ಈ ಬೃಹತ್‌ ಧಾರ್ಮಿಕ ಕಾರ್ಯಕ್ರಮವು ಏಕತೆಯ ಸಂದೇಶವನ್ನು ನೀಡುತ್ತದೆ ಮತ್ತು ಈ ಬಾರಿ ದೇಶ ಮತ್ತು ಪ್ರಪಂಚದಾದ್ಯಂತದ ಭಕ್ತರು ಪ್ರಯಾಗರಾಜ್‌ನಲ್ಲಿ ಡಿಜಿಟಲ್‌ ಮಹಾಕುಂಭಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಹೇಳಿದರು.

ಸಂಗಮ್‌ ದಂಡೆಯಲ್ಲಿ ಭವ್ಯ ಸಿದ್ಧತೆಗಳು ನಡೆಯುತ್ತಿವೆ. ಕುಂಭದಲ್ಲಿ ಭಾಗವಹಿಸುವ ಮೂಲಕ ಒಡಕು, ದ್ವೇಷದ ಭಾವನೆ ಹೋಗಲಾಡಿಸುವ ಸಂಕಲ್ಪ ಮಾಡೋಣ ಎಂದು ಕರೆ ನೀಡಿದರು.
ಸಮಾಜದಲ್ಲಿ ಮೊದಲ ಬಾರಿಗೆ, ಕುಂಭ್‌ ಈವೆಂಟ್‌ನಲ್ಲಿ ಎಐ ಚಾಟ್‌ಬಾಟ್‌ಅನ್ನು ಬಳಸಲಾಗುತ್ತಿದ್ದು, ಕುಂಭಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಮಾಹಿತಿಯು ಎಐ ಚಾಟ್‌ಬಾತ್‌ ಮೂಲಕ 11 ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತದೆ ಎಂದು ತಿಳಿಸಿದರು.

ಬಾಲಿವುಡ್‌ ನಟ ರಾಜ್‌ಕಪೂರ್‌ ಅವರು ಚಲನಚಿತ್ರಗಳಲ್ಲಿ ನೀಡಿದ ಕೊಡುಗೆಗಾಗಿ ಶ್ಲಾಘಿಸಿದ ಅವರು, ರಾಜ್‌ ಕಪೂರ್‌ ಜಿ ಭಾರತದ ಮೃದು ಶಕ್ತಿಯನ್ನು ಚಲನಚಿತ್ರಗಳ ಮೂಲಕ ಜಗತ್ತಿಗೆ ಪರಿಚಯಿಸಿದವರು ಎಂದರು.

ರಫಿ ಸಾಹಬ್‌ ಅವರ ಧ್ವನಿ ಪ್ರತಿ ಹೃದಯವನ್ನು ಸ್ಪರ್ಶಿಸುವ ಮಾಂತ್ರಿಕತೆಯನ್ನು ಹೊಂದಿತ್ತು. ಭಕ್ತಿಗೀತೆ, ಪ್ರಣಯ ಗೀತೆ, ದುಃಖದ ಹಾಡುಗಳೇ ಆಗಿರಲಿ ಅವರು ತಮ ಧ್ವನಿಯಿಂದ ಪ್ರತಿಯೊಂದು ಭಾವನೆಯನ್ನು ಜೀವಂತಗೊಳಿಸಿದರು. ಅಕ್ಕಿನೇನಿ ನಾಗೇಶ್ವರ ರಾವ್‌ ಗರು ಅವರು ತೆಲುಗು ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ, ತಪನ್‌ ಸಿನ್ಹಾ ಅವರ ಚಲನಚಿತ್ರಗಳು ಸಮಾಜಕ್ಕೆ ಹೊಸ ದೃಷ್ಟಿಕೋನವನ್ನು ನೀಡಿವೆ ಎಂದು ಇದೇ ವೇಳೆ ಮೋದಿ ಸರಿಸಿಕೊಂಡರು.

ಇದಕ್ಕೂ ಮುನ್ನ ಮಾಸಿಕ ರೇಡಿಯೊ ಪ್ರಸಾರ ಮನ್‌ ಕೀ ಬಾತ್‌ ಬಗ್ಗೆ ಮಾತನಾಡಿದ ಅವರು, ಜನರು ಸಕಾರಾತಕ ಕಥೆಗಳು ಮತ್ತು ಸ್ಪೂರ್ತಿದಾಯಕ ಉದಾಹರಣೆಗಳನ್ನು ಇಷ್ಟಪಡುತ್ತಾರೆ ಎಂಬುದನ್ನು ಸಾಬೀತುಪಡಿಸಿದೆ ಎಂದು ಶ್ಲಾಘಿಸಿದರು.

ಸಾಮಾಜಿಕ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಮತ್ತು ದೇಶದ ವಿವಿಧ ಭಾಗಗಳಲ್ಲಿ ಜನರ ಪ್ರಯತ್ನಗಳನ್ನು ಎತ್ತಿ ತೋರಿಸಿದರು, ಇದನ್ನು ಭಾವನಾತಕ ಸಂಚಿಕೆ ಎಂದು ಬಣ್ಣಿಸಿದರು ಮತ್ತು ಕಾರ್ಯಕ್ರಮವು ವಿಶಿಷ್ಟವಾಗಿದೆ. ಭಾರತದ ಆತವನ್ನು ಆಚರಿಸುವ ವೇದಿಕೆ ಎಂದು ಬಣ್ಣಿಸಿದರು.

RELATED ARTICLES

Latest News