Saturday, January 4, 2025
Homeಬೆಂಗಳೂರುಬೆಂಗಳೂರು : ಮಧ್ಯರಾತ್ರಿ ಬೈಕ್‌ ಕದಿಯಲು ಬಂದವನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು

ಬೆಂಗಳೂರು : ಮಧ್ಯರಾತ್ರಿ ಬೈಕ್‌ ಕದಿಯಲು ಬಂದವನನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು

Bengaluru: Public chases Bike Thief in the middle of the night and catches him

ಬೆಂಗಳೂರು,ಡಿ.29- ಮಧ್ಯರಾತ್ರಿ ಬೈಕ್‌ ಕದಿಯಲು ಬಂದಿದ್ದ ವಾಹನ ಚೋರನೊಬ್ಬನನ್ನು ಸಾರ್ವಜನಿಕರೇ ಬೆನ್ನಟ್ಟಿ ಹಿಡಿದು ಜೆ.ಪಿ.ನಗರ ಠಾಣೆ ಪೊಲೀಸರಿಗೆ ಕೊಟ್ಟಿರುವ ಘಟನೆ ನಡೆದಿದೆ.

ರಾತ್ರಿ ಸುಮಾರು 12.30ರ ಸಮಯದಲ್ಲಿ ಜೆ.ಪಿ.ನಗರದ ಒಂದನೇ ಹಂತದ 34ನೇ ಮುಖ್ಯರಸ್ತೆಯ ಅಪಾರ್ಮೇಂಟ್‌ ಮುಂಭಾಗ ನಿಲ್ಲಿಸಿದ ಬೈಕ್‌ನ ಹ್ಯಾಂಡ್‌ ಲಾಕ್‌ ಮುರಿದು ಕಳ್ಳ ತಳ್ಳಿಕೊಂಡು ಹೋಗುತ್ತಿದ್ದ.

ಆರೋಪಿ ಹ್ಯಾಂಡ್‌ ಲಾಕ್‌ ಮುರಿಯುತ್ತಿದ್ದ ಶಬ್ದ ಕೇಳಿ ಮಾಲೀಕ ಮನೆಯಿಂದ ಹೊರಬಂದು ನೋಡಿದಾಗ ಬೈಕ್‌ನ್ನು ಚೋರ ವೇಗವಾಗಿ ತಳ್ಳಿಕೊಂಡು ಓಡುತ್ತಿದ್ದ.ತಕ್ಷಣ ಅವರು ಅಕ್ಕ ಪಕ್ಕದ ನಿವಾಸಿಗಳಿಗೆ ವಿಷಯ ತಿಳಿಸಿ ಅವರನ್ನು ಕರೆದುಕೊಂಡು ಸಿನಿಮಿಯಾ ರೀತಿ ಒಂದು ಕೀ.ಮೀ. ದೂರ ಬೆನ್ನಟ್ಟಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ವಾಹನ ಚೋರರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಮುಂದಿನ ವಿಚಾರಣೆ ಕೈಗೊಂಡಿದ್ದಾರೆ.

RELATED ARTICLES

Latest News