ಬೆಂಗಳೂರು, ಜ.23- ಸ್ಯಾಂಡಲ್‌ವುಡ್‌ನ ಪೋಷಕ ನಟ ಉಗ್ರಂ ಮಂಜು ಅವರು ಇಂದು ಸಾಯಿ ಸಂಧ್ಯಾ ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.ಧರ್ಮಸ್ಥಳದಲ್ಲಿ ಸರಳವಾಗಿ ನಡೆದ ವಿವಾಹದಲ್ಲಿ ಮಂಜು ಹಾಗೂ ಸಂಧ್ಯಾ ಅವರ ವಿವಾಹ ಮಹೋತ್ಸವದಲ್ಲಿ ಎರಡು ಕುಟುಂಬದವರು, ಗೆಳೆಯರು ಹಾಗೂ ಆಪ್ತೇಷ್ಟರು ಮಾತ್ರ ಪಾಲ್ಗೊಂಡಿದ್ದರು.
ಉಗ್ರಂ, ಕಿರಿಕ್ ಪಾರ್ಟಿ, ಹೀರೋ, ಕಿಡಿ ಮುಂತಾದ ಸಿನಿಮಾಗಳಲ್ಲಿ ಉಗ್ರಂ ಮಂಜು ನಟಿಸಿದ್ದರೆ, ಸಂಧ್ಯಾ ಅವರು ಸ್ಪರ್ಶ್ ಆಸ್ಪತ್ರೆಯಲ್ಲಿ ಅಡ್ಮಿನ್ ಡಿಪಾರ್ಟ್ ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ.
