ಚಿಕ್ಕಮಗಳೂರು,ಡಿ.30- ಹೊಸ ವರ್ಷಾಚರಣೆ ಸಂಭ್ರಮಕ್ಕೆ ಇನ್ನೊಂದು ದಿನ ಬಾಕಿ ಉಳಿದಿದ್ದು, ಕಾಫಿ ನಾಡಿನಲ್ಲಿ ಹೋಂಸ್ಟೇಗಳು, ಹೋಟೆಲ್‌ಗಳು, ರೆಸಾರ್ಟ್‌ಗಳು ಬಹುತೇಕ ಭರ್ತಿಯಾಗಿವೆ. ಚಿಕ್ಕಮಗಳೂರು, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ, ಕಳಸ ತಾಲ್ಲೂಕು ಸೇರಿದಂತೆ ವಿವಿಧೆಡೆ 1200ಕ್ಕೂ ಹೆಚ್ಚು ಹೋಂಸ್ಟೇಗಳಿದ್ದು, 20ಕ್ಕೂ ಹೆಚ್ಚು ರೆಸಾರ್ಟ್‌ಗಳಿವೆ.
ವರ್ಷಾಚರಣೆ ಹಿನ್ನೆಲೆಯಲ್ಲಿ ಎಲ್ಲಾ ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಮುಂಗಡ ಬುಕ್ಕಿಂಗ್ ಆಗಿವೆ. ಕಳೆದ ಹದಿನೈದು ದಿನಗಳಿಂದಲೇ ಪ್ರವಾಸಿಗರು ಬುಕ್ಕಿಂಗ್ ಮಾಡಿಕೊಂಡಿದ್ದು, ವರ್ಷಾಚರಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇನ್ನೂ ಕೆಲವರು ಹೋಂ ಸ್ಟೇ ಮಾಲೀಕರಿಗೆ ಫೋನ್ ಕರೆ ಮಾಡಿ ರೂಂಗಳನ್ನು ಕೇಳುತ್ತಿದ್ದಾರೆ. ಎಲ್ಲವೂ ಕೂಡ ಭರ್ತಿಯಾಗಿವೆ ಎಂದು ಕೇಳಿದ ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ.
ಹೆಚ್ಚಿನ ಹಣ ಕೊಡುತ್ತೇವೆಂದರೂ ಹೋಂ ಸ್ಟೇಗಳು ಸಿಗುತ್ತಿಲ್ಲ. ಚಿಕ್ಕಮಗಳೂರು ನಗರದಲ್ಲಿರುವ ಹೋಟೆಲ್‌ಗಳು, ಲಾಡ್‌್ಜಗಳೂ ಕೂಡ ಭರ್ತಿಯಾಗಿವೆ. ಹೋಂಸ್ಟೇ ಮಾಲೀಕರು ಕೂಡ ಪ್ರವಾಸಿಗರನ್ನು ಆಕರ್ಷಿಸಲು ನವ ವಧುವಿನಂತೆ ಹೋಂಸ್ಟೇಗಳನ್ನು ಸಿಂಗರಿಸಿದ್ದು, ಬಣ್ಣಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಪ್ರವಾಸಿಗರ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಂಡಿದ್ದಾರೆ.
ಜೋಗ ಜಲಪಾತ ನಿರ್ಬಂಧ ತೆರವು :
ಕೆಲವು ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪ್ರವಾಸಿಗರನ್ನು ನಿರ್ಬಂಧಿಸಲಾಗಿತ್ತು. ಆದರೆ ವರ್ಷಾಚರಣೆ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವುದರಿಂದ ನಿರ್ಬಂಧವನ್ನು ತೆರವು ಮಾಡಲಾಗಿದೆ.
ಮೈಸೂರು, ಕೊಡಗು, ನಂದಿಬೆಟ್ಟ, ಮಂಗಳೂರು, ಹಾಸನ, ದಾಂಡೇಲಿ, ಶಿವಮೊಗ್ಗ ಸೇರಿದಂತೆ ಬಹುತೇಕ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹೋಟೆಲ್‌ಗಳು ಹಾಗೂ ಲಾಡ್‌್ಜಗಳಲ್ಲಿ ರೂಂಗಳು ಬುಕ್ಕಿಂಗ್ ಆಗಿದ್ದು, ಹೊಸ ವರ್ಷಾಚರಣೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯೂ ಸಹ ಜೋರಾಗಿದೆ.