Sunday, January 5, 2025
Homeರಾಜಕೀಯ | Politics8 ವಿಷಯಗಳನ್ನು ಪ್ರಸ್ತಾಪಿಸಿ ಜಿ.ಪರಮೇಶ್ವರ್‌ಗೆ ಬಿಜೆಪಿ ತರಾಟೆ

8 ವಿಷಯಗಳನ್ನು ಪ್ರಸ್ತಾಪಿಸಿ ಜಿ.ಪರಮೇಶ್ವರ್‌ಗೆ ಬಿಜೆಪಿ ತರಾಟೆ

ಬೆಂಗಳೂರು,ಡಿ.31- ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರನ್ನು ಬಿಜೆಪಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನೀವು ಗೃಹ ಸಚಿವರೋ ಅಥವಾ ಬೆನ್ನಿಗೆ ನಿಲ್ಲುವ ಗ್ರಹ ಸಚಿವರೋ ಎಂದು ಬಿಜೆಪಿ ಪ್ರಶ್ನೆ ಮಾಡಿದ್ದು ಸಾಮಾಜಿಕ ಜಾಲತಾಣ Xನಲ್ಲಿ ಪೋಸ್ಟ್‌ ಮಾಡಿ ಆಕೋಶ ಹೊರ ಹಾಕಿದೆ.

ಈ ಬಗ್ಗೆ ಖಾರವಾಗಿಯೇ ಪ್ರಶ್ನೆ ಮಾಡಿದೆ. ಸಚಿವ ಪ್ರಿಯಾಂಕಾ ಖರ್ಗೆ ಅವರು ರಾಜೀನಾಮೆ ಕೊಡುವ ಅವಶ್ಯಕತೆ ಇಲ್ಲ ಎಂದು ಜಿ. ಪರಮೇಶ್ವರ್‌ ಅವರು ಹೇಳಿದ್ದರು. ಈ ವಿಚಾರ ತರಾಟೆಗೆ ತೆಗೆದುಕೊಂಡಿರುವ ಬಿಜೆಪಿ ಜಿ. ಪರಮೇಶ್ವರ್‌ ಅವರ ಮೇಲೆ ಕೆಂಡಕಾರಿದೆ. ಹಲೋ ಆಕಸಿಕ ಗೃಹ ಸಚಿವ ಜಿ. ಪರಮೇಶ್ವರ್‌ ಅವರೇ, ನೀವು ಯಾವತ್ತಾದರೂ ಅನ್ಯಾಯಕ್ಕೆ ಒಳಗಾದವರ ಬೆನ್ನಿಗೆ ನಿಂತಿದ್ದೀರಾ ಹೇಳಿ ಎಂದು ಪ್ರಶ್ನೆ ಮಾಡಿದೆ.

ಈ 8 ವಿಷಯಗಳಲ್ಲೂ ಜಿ. ಪರಮೇಶ್ವರ್‌ ಅವರು ಸಂತ್ರಸ್ತರು ಇಲ್ಲವೇ ನೊಂದವರ ಪರವಾಗಿ ನಿಲ್ಲಲಿಲ್ಲ ಎಂದು ದೂರಿದೆ. ಆ 8 ಪ್ರಕರಣಗಳನ್ನು ಉಲ್ಲೇಖ ಮಾಡಿರುವ ಬಿಜೆಪಿ ಈ ವಿಷಯಗಳಲ್ಲಿ ಜಿ. ಪರಮೇಶ್ವರ್‌ ಅವರ ನಿಲುವು ಏನಾಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿತ್ತು ಎಂದೂ ಹೇಳಿದೆ.

ಆತಹತ್ಯೆ ಮಾಡಿಕೊಂಡ ಸಚಿನ್‌ ಪಾಂಚಾಳ್‌ ಕುಟುಂಬದ ಬೆನ್ನಿಗೆ ನಿಂತುಕೊಳ್ಳುವುದು ಬಿಟ್ಟು, ಸಾವಿಗೆ ಕಾರಣರಾದ ಪ್ರಿಯಾಂಕಾ ಖರ್ಗೆ ಅವರ ಬೆನ್ನಿಗೆ ನಿಂತಿದ್ದೀರಿ ಎಂದರೆ ನಿಮ ಮನಸಾಕ್ಷಿ ಅದ್ಹೇಗೆ ಒಪ್ಪಿಕೊಂಡಿದೆ ಎಂದು ಆರೋಪಿಸಿದೆ. ನೀವು ಯಾವಾಗಲೂ ದುಷ್ಟರ ಬೆನ್ನಿಗೆ ನಿಂತುಕೊಳ್ಳುತ್ತೀರಿ ಎನ್ನುವುದು ಮೊದಲಿನಿಂದಲೂ ಸಾಬೀತಾಗಿದೆ ಎಂದಿದೆ.

ಬಿಜೆಪಿ ಪಟ್ಟಿ ಮಾಡಿರುವ ಎಂಟು ಪ್ರಕರಣಗಳು :

  • ಪಾಕ್‌ ಪರ ಘೋಷಣೆ ಕೂಗಿದವರ ಬೆನ್ನಿಗೆ ನಿಂತಿದ್ದೀರಿ
  • ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಮಾಡಿದವರ ಬೆನ್ನಿಗೆ ನಿಂತಿದ್ದೀರಿ
  • ಕುಕ್ಕರ್‌ ಬಾಂಬ್‌ ಸ್ಫೋಟಿಸಿದ ಉಗ್ರರ ಪರವಾಗಿ ನಿಂತಿದ್ದೀರಿ
  • ಶಿವಮೊಗ್ಗದಲ್ಲಿ ಕಲ್ಲು ತೂರಿದ ಮತಾಂಧರ ಬೆನ್ನಿಗೆ ನಿಂತಿದ್ದೀರಿ
  • ಬೆಳಗಾವಿ ಸುವರ್ಣಸೌಧದಲ್ಲಿ ಗೂಂಡಾಗಿರಿ ಮಾಡಿದವರ ಬೆನ್ನಿಗೆ ನಿಂತಿದ್ದೀರಿ
  • ಇದೀಗ ಆತಹತ್ಯೆಗೆ ಕಾರಣರಾದ ಪ್ರಿಯಾಂಕ್‌ ಖರ್ಗೆ ಬೆನ್ನಿಗೆ ನಿಂತಿದ್ದೀರಿ ಎಂದು ಹೇಳಿದೆ.
  • ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ಗಲಭೆ ಮಾಡಿದ ಮತಾಂಧರ ಬೆನ್ನಿಗೆ ನಿಂತಿರಿ.
  • ಹುಬ್ಬಳ್ಳಿ ಗಲಭೆಕೋರರ ಬೆನ್ನಿಗೆ ನಿಂತಿದ್ದೀರಿ.
RELATED ARTICLES

Latest News