Sunday, January 5, 2025
Homeರಾಜ್ಯಕರ್ನಾಟಕದಲ್ಲಿ ಶಾಲೆ ಬಿಟ್ಟ 9,326 ಮಕ್ಕಳು, ನಗರಗ ಪ್ರದೇಶಗಳಲ್ಲೇ ಹೆಚ್ಚು..!

ಕರ್ನಾಟಕದಲ್ಲಿ ಶಾಲೆ ಬಿಟ್ಟ 9,326 ಮಕ್ಕಳು, ನಗರಗ ಪ್ರದೇಶಗಳಲ್ಲೇ ಹೆಚ್ಚು..!

9,326 children dropped out of school in Karnataka, most in urban areas..!

ಬೆಂಗಳೂರು,ಡಿ.31– ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 9,326 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಶಿಕ್ಷಣ ಇಲಾಖೆ ಅವರನ್ನು ಮತ್ತೆ ಶಾಲೆಗೆ ತಂದು ಕೂರಿಸುವ ಪ್ರಯತ್ನ ಮಾಡಿದ್ದರೂ ಫಲ ಸಿಗುತ್ತಿಲ್ಲ. ವಿಶೇಷವೆಂದರೆ ರಾಜ್ಯದ ನಗರ ಭಾಗದಲ್ಲೇ ಶಾಲೆ ಬಿಡುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಾಣಿಸಿಕೊಂಡಿದೆ.

ಬೆಂಗಳೂರು ನಗರ ದಕ್ಷಿಣದಲ್ಲಿ 2,028 ಮತ್ತು ಬೆಂಗಳೂರು ನಗರ ಉತ್ತರದಲ್ಲಿ 1,824 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ 1,181 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ. ಶಾಲೆಯಿಂದ ಹೊರಗುಳಿದ ಒಟ್ಟು ಮಕ್ಕಳ ಪೈಕಿ 5,728 ಮಕ್ಕಳನ್ನು ಸಮೀಪದ ಶಾಲೆಗಳಿಗೆ ದಾಖಲಿಸುವ ಪ್ರಕ್ರಿಯೆಗಳು ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಇಲಾಖೆ ಮಕ್ಕಳನ್ನು ಮತ್ತೆ ಶಾಲೆಗೆ ತಂದು ಕೂರಿಸುವಲ್ಲಿ ವೈಫಲ್ಯ ಕಾಣುತ್ತಿರುವುದು ಕಳವಳಕಾರಿ ವಿಚಾರ.

ರಾಜ್ಯ ಶಿಕ್ಷಣ ಇಲಾಖೆ ಇಂತಹ ಮಕ್ಕಳ ಸಮೀಕ್ಷೆ ನಡೆಸಿದ್ದು, ನಾನಾ ಕಾರಣಗಳಿಂದ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವರದಿ ನೀಡಿದೆ. ಮುಖ್ಯವಾಗಿ ಬಹಳಷ್ಟು ಕಡೆಯಿಂದ ನಗರ ಭಾಗಕ್ಕೆ ಹೆತ್ತವರು ಕೆಲಸಕ್ಕಾಗಿ ಬರುತ್ತಾರೆ.

ಆದರೆ ಕೆಲಸ ಕಳೆದುಕೊಳ್ಳುವ ಅಥವಾ ಇತರ ಕಾರಣಗಳಿಂದ ಅವರು ಅನಿವಾರ್ಯವಾಗಿ ವಲಸೆ ಹೋದಾಗ ಮಕ್ಕಳು ಕೂಡ ಅವರ ಜತೆ ಹೋಗುತ್ತಾರೆ. ಮಕ್ಕಳಲ್ಲಿ ಅನಾರೋಗ್ಯ ಸಮಸ್ಯೆಯಿಂದಲೂ ಶಾಲೆ ಬಿಡುವ ಸಂಖ್ಯೆ ಹೆಚ್ಚಿದೆ ಮುಂತಾದ ಕಾರಣಗಳನ್ನು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

RELATED ARTICLES

Latest News