Tuesday, January 7, 2025
Homeಬೆಂಗಳೂರುಟ್ಯೂಷನ್ ಹೇಳುತ್ತಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿನಿ ಅಪಹರಣ

ಟ್ಯೂಷನ್ ಹೇಳುತ್ತಿದ್ದ ಶಿಕ್ಷಕನಿಂದಲೇ ವಿದ್ಯಾರ್ಥಿನಿ ಅಪಹರಣ

Student Kidnapped by teacher

ಬೆಂಗಳೂರು,ಜ.3- ಟ್ಯೂಷನ್ಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ಪ್ರೀತಿ, ಪ್ರೇಮದ ನೆಪದಲ್ಲಿ ಪುಸಲಾಯಿಸಿ ಶಿಕ್ಷಕನೇ ಅಪಹರಿಸಿರುವ ಘಟನೆ ಜೆ.ಪಿ.ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಕನಕಪುರ ಮೂಲದ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ 16 ವರ್ಷದ ವಿದ್ಯಾರ್ಥಿನಿ ಶಿಕ್ಷಕ ಅಭಿಷೇಕ ಎಂಬಾತನ ಬಳಿ ಟ್ಯೂಷನ್ಗೆ ಬರುತ್ತಿದ್ದಳು.

ಕಳೆದ ನ.23 ರಂದು ಟ್ಯೂಷನ್ನಿಂದ ರಾತ್ರಿಯಾದರೂ ಮನೆಗೆ ಬಾರದಿದ್ದಾಗ ವಿದ್ಯಾರ್ಥಿನಿ ಪೋಷಕರು ಟ್ಯೂಷನ್ ಸೆಂಟರ್ ಬಳಿ ಹೋಗಿ ವಿಚಾರಿಸಿದಾಗ ಟೀಚರ್ ಕರೆದುಕೊಂಡು ಹೋಗಿದ್ದಾರೆಂದು ಹೇಳಿದ್ದಾರೆ.ಟ್ಯೂಷನ್ ಟೀಚರ್ ಅವರ ಮೊಬೈಲ್ ಸಂರ್ಪಕಿಸಿದಾಗ ರೂಮ್ನಲ್ಲಿ ಬಿಟ್ಟು ಹೋಗಿರುವುದು ಗೊತ್ತಾಗಿದೆ.

ವಿದ್ಯಾರ್ಥಿನಿ ಪೋಷಕರು ಜೆಪಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಪಹರಣ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಂದಿನಿಂದ ವಿದ್ಯಾರ್ಥಿನಿ ಹಾಗೂ ಶಿಕ್ಷಕನನ್ನು ಹುಡುಕುತ್ತಿದ್ದಾರೆ.

ಕಿಲಾಡಿ ಶಿಕ್ಷಕ ಫೋನ್ ಬಳಸುತ್ತಿಲ್ಲ, ಫೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿದಂತೆ ಯಾವುದೇ ಆನ್ಲೈನ್ ಪೇಮೆಂಟ್ ಮಾಡದ ಕಾರಣ ಪತ್ತೆಗೆ ತೊಡಕಾಗಿದೆ.
ನಗರವಲ್ಲದೇ ರಾಮನಗರ, ಕನಕಪುರ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಪೊಲೀಸರು ಈ ಇಬ್ಬರಿಗೂ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Latest News