Saturday, January 24, 2026
Homeಜಿಲ್ಲಾ ಸುದ್ದಿಗಳುಚಾರ್ಮಾಡಿ ಘಾಟ್‌ನಲ್ಲಿ ಗ್ಯಾಸ್‌‍ ಸಿಲಿಂಡರ್‌ ತುಂಬಿದ್ದ ಲಾರಿ ಪಲ್ಟಿ

ಚಾರ್ಮಾಡಿ ಘಾಟ್‌ನಲ್ಲಿ ಗ್ಯಾಸ್‌‍ ಸಿಲಿಂಡರ್‌ ತುಂಬಿದ್ದ ಲಾರಿ ಪಲ್ಟಿ

Lorry loaded with gas cylinders overturns at Charmudi Ghat

ಚಿಕ್ಕಮಗಳೂರು,ಜ.24- ಚಾಲಕನ ನಿಯಂತ್ರಣ ತಪ್ಪಿದ ಸಿಲಿಂಡರ್‌ ತುಂಬಿದ ಲಾರಿ ಉರುಳಿ ಬಿದ್ದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ನಡೆದಿದೆ.

ಕಡೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಗ್ಯಾಸ್‌‍ ಸಿಲಿಂಡರ್‌ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಣ್ಣಪ್ಪಸ್ವಾಮಿ ದೇವಾಲಯದ ತಿರುವಿನಲ್ಲಿ ಉರುಳಿಬಿದ್ದಿದೆ.

ಅಪಘಾತದಲ್ಲಿ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಬಣಕಲ್‌ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್‌ ಮುಖಾಂತರ ಲಾರಿಯನ್ನು ಮೇಲಕ್ಕೆತ್ತಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

RELATED ARTICLES

Latest News