Wednesday, January 8, 2025
Homeಬೆಂಗಳೂರುವೀಲಿಂಗ್ ಮಾಡುತ್ತಿದ್ದ ಮೂವರು ಸವಾರರ ವಿರುದ್ಧ ಎಫ್ಐಆರ್

ವೀಲಿಂಗ್ ಮಾಡುತ್ತಿದ್ದ ಮೂವರು ಸವಾರರ ವಿರುದ್ಧ ಎಫ್ಐಆರ್

FIR against three riders who were wheeling

ಬೆಂಗಳೂರು,ಜ.4- ವೀಲಿಂಗ್ ಮಾಡುವವರನ್ನು ಹಾಗೂ ಅದರ ವಿಡಿಯೋ ದೃಶ್ಯಾವಳಿಗಳನ್ನು ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಅಪ್ಲೋಲೋಡ್ ಮಾಡಿದ್ದನ್ನು ಆಧರಿಸಿ ಮೂವರು ದ್ವಿಚಕ್ರ ವಾಹನ ಸವಾರರನ್ನು ಪತ್ತೆ ಹಚ್ಚಿ ವಿಜಯನಗರ ಸಂಚಾರಿ ಠಾಣೆ ಪೊಲೀಸರು ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಂಡಿದ್ದಾರೆ.

ಕೆ.ಹೆಚ್.ಬಿ.ಜಂಕ್ಷನ್ ಬಳಿ ನಿನ್ನೆ ವೀಲಿಂಗ್ ಮಾಡುತ್ತಿದ್ದ ದ್ವಿಚಕ್ರ ವಾಹನ ಸವಾರರನ್ನು ಪೊಲೀಸರು ಪತ್ತೆ ಹಚ್ಚಿ ವಾಹನ ಜಪ್ತಿ ಮಾಡಿ ಎಫ್ಐಆರ್ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಳ್ಳಲಾಗಿದೆ.

ಇದೇ ವ್ಯಾಪ್ತಿಯಲ್ಲಿ ನಿನ್ನೆ ಕಾರ್ಯಾಚರಣೆ ಕೈಗೊಂಡಿದ್ದ ವೇಳೆ ವಿಜಯನಗರ ರೈಲ್ವೇ ಪ್ಯಾರಲಲ್ ರಸ್ತೆಯಲ್ಲಿ ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ ರಮೇಶ್ ಬಾಬು ಸರ್ಕಲ್ ಕಡೆಗೆ ಸವಾರನೊಬ್ಬ ಅಪಾಯಕಾರಿಯಾಗಿ, ಸಾರ್ವಜನಿಕ ಪ್ರಾಣಕ್ಕೆ ಹಾಗೂ ಸಾರ್ವಜನಿಕ ಆಸ್ತಿಗೆ ತೊಂದರೆ ಉಂಟಾಗುವಂತೆ ದ್ವಿ ಚಕ್ರ ವಾಹನದಲ್ಲಿ ವೀಲಿಂಗ್ ಮಾಡುತ್ತಿದ್ದುದನ್ನು ಗಮನಿಸಿದ್ದಾರೆ.

ತಕ್ಷಣ ಸಿಬ್ಬಂದಿ ವಾಹನ ಸಮೇತ ಸವಾರನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿ ಎಫ್ಐಆರ್ ದಾಖಲಿಸಿಕೊಂಡು ಕಾನೂನು ರೀತಿ ಕ್ರಮ ಕೈಗೊಂಡಿದ್ದಾರೆ.ಇದೇ ವ್ಯಾಪ್ತಿಯ ಇನ್ನೊಂದು ಪ್ರಕರಣದಲ್ಲಿ ವಿಜಯನಗರ ಎಂಸಿಲೇಔಟ್ ಒಂದನೇ ಎ ಮುಖ್ಯರಸ್ತೆಯಲ್ಲಿ ಸಿಬ್ಬಂದಿ ಗಸ್ತಿನಲ್ಲಿ ಇದ್ದಾಗ ಅಗ್ರಹಾರ ದಾಸರಹಳ್ಳಿ ಕಡೆಯಿಂದ ವಿರೇಶ್ ಚಿತ್ರಮಂದಿರದ ಕಡೆಗೆ ವಾಹನವನ್ನು ಚಲಾಹಿಸಿಕೊಂಡು ವೀಲಿಂಗ್ ಮಾಡುತ್ತಿದ್ದ ಸವಾರರನ್ನು ವಾಹನ ಸಮೇತ ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮುಂದಿನ ದಿನಗಳಲ್ಲಿರುವ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಅನಿತಾ ಬಿ ಹದ್ದಣ್ಣನವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News