ಬೆಂಗಳೂರು,ಜ.24-ಅಬಕಾರಿ ಇಲಾಖೆಯಲ್ಲಿ ಲೈಸೆನ್ಸ್ ನೀಡಲು ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ತಿರುವು ಪಡೆದಿದ್ದು, ಸಚಿವರಿಗೂ ಪ್ರತಿ ತಿಂಗಳು ಮಾಮೂಲು ಕೊಡಬೇಕೆಂಬ ವಿಷಯ ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದೆ.
ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿರುವ ಎಫ್‌ಐಆರ್ ನಲ್ಲಿ ಮಿನಿಸ್ಟರ್ ಅವರಿಗೆ ಲಂಚದ ಪಾಲು ಹೋಗುತ್ತದೆ ಎಂದು ಉಲ್ಲೇಖವಾಗಿರುವುದರಿಂದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರಿಗೆ ಕಾನೂನಿನ ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ.
ಲೋಕಾಯುಕ್ತ ಅಧಿಕಾರಿಗಳು ದಾಖಲಿಸಿರುವ ಎಫ್‌ಐಆರ್ ನಲ್ಲಿ ಎಲ್ಲಿಯೂ ನೇರವಾಗಿ ಸಚಿವ ತಿಮಾಪುರ ಹೆಸರು ಉಲ್ಲೇಖ ಮಾಡಿಲ್ಲ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಹಾಗೂ ಸೇವೆಯಿಂದ ಅಮಾನತುಕೊಂಡಿರುವ ಅಬಕಾರಿ ಇಲಾಖೆಯ ಹೆಚ್ಚುವರಿ ಉಪಾಯುಕ್ತ ಜಗದೀಶ್ ನಾಯಕ್ ಮತ್ತು ಸೂಪರಿಂಟೆಂಡೆಂಟ್ ತಮಣ್ಣ ಅವರ ವಿರುದ್ಧ ದೂರು ನೀಡಿರುವ ಲಕ್ಷೀನಾರಾಯಣ.ಸಿ ಅವರ ಹೇಳಿಕೆಗಳನ್ನು ದಾಖಲಿಸಿ ಎಫ್‌ಐಆರ್ ದಾಖಲಾಗಿದೆ.
ಅಬಕಾರಿ ಇಲಾಖೆಯಲ್ಲಿ ಲೈಸೆನ್‌್ಸ ಪಡೆಯಲು ಒಂದೂವರೆ ಕೋಟಿ ಹಣ ನೀಡಬೇಕು ಅದರಲ್ಲೂ ಮೈಕ್ರೋ ಬ್ರೇವೆರ್ ಲೈಸೆನ್‌್ಸ ಪಡೆಯಲು ಸಚಿವರು, ಹೆಚ್ಚುವರಿ ಆಯುಕ್ತರು, ಇಬ್ಬರು ಡಿಸಿ ಸೇರಿದಂತೆ ಮತ್ತಿತರರಿಗೆ ಲಂಚ ನೀಡಬೇಕು. ಸಿ ಎಲ್ -7 ಲೈಸನ್‌್ಸ ಪಡೆಯಲು 50 ಲಕ್ಷ ಹಣದ ಪೈಕಿ ಮೊದಲು 25 ಲಕ್ಷ ಹಣವನ್ನು ಮುಂಗಡವಾಗಿ ನೀಡಬೇಕು. ಇಲ್ಲದಿದ್ದರೆ ಯಾವುದೇ ಕಾರಣಕ್ಕೂ ಲೈಸೆನ್‌್ಸ ಮಂಜೂರು ಮಾಡಲಾಗದು ಎಂದು ಆರೋಪಿಗಳು ಬೇಡಿಕೆ ಇಟ್ಟಿದ್ದರು ಎಂಬುದನ್ನು ಉಲ್ಲೇಖಿಸಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಸಿ.ಎಲ್ -7 ಲೈಸೆನ್‌್ಸ ಪಡೆಯಲು 80 ಲಕ್ಷ ರೂ. ಲಂಚ ನೀಡಬೇಕು. 75 ಲಕ್ಷ ಹಣವನ್ನು ಲೈಸೆನ್‌್ಸ ಕೊಟ್ಟ ನಂತರ ಕೊಡಬೇಕು. ಇದರ ಮೊದಲ ಭಾಗವಾಗಿ 50 ಲಕ್ಷ ರೂ. ಪಾವತಿಸುವಂತೆ ಜಗದೀಶ್ ನಾಯಕ್ ಮತ್ತು ತಮಣ್ಣ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಲೈಸೆನ್ಸ್ ನೀಡುವುದಿಲ್ಲ ಇದನ್ನು ನೀವೇ ಹ್ಯಾಂಡಲ್ ಮಾಡಿ ಎಂದಿರುದನ್ನು ಬಹಿರಂಗಪಡಿಸಲಾಗಿದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆ ಹೆಚ್ಚುವರಿ ಉಪಯುಕ್ತ ಜಗದೀಶ್ ನಾಯಕ್ ಮತ್ತು ಸೂಪರಿಂಟೆಂಡೆಂಟ್ ತಮಣ್ಣ ಅವರನ್ನು ಸೇವೆಯಿಂದ ಅಮಾನತು ಪಡಿಸಲಾಗಿದ್ದು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಈ ಪ್ರಕರಣವು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ನಡುವೆ ಭಾರೀ ಕೋಲಹಲವನ್ನೇ ಸೃಷ್ಟಿಸಿದೆ. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇದೇ ವಿಷಯವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ತಿಮಾಪುರ ಅವರ ರಾಜೀನಾಮೆಗೆ ಪಟ್ಟು ಹಿಡಿದಿವೆ. ಆದರೆ, ಈ ಪ್ರಕರಣದಲ್ಲಿ ನಾನು ತಪ್ಪೇ ಮಾಡಿಲ್ಲ ನನ್ನನ್ನು ವ್ಯವಸ್ಥಿತವಾಗಿ ಸಿಲುಕಿಸಲಾಗಿದೆ. ನಾನೇಕೆ ರಾಜೀನಾಮೆ ಕೊಡಲಿ ಎಂದು ತಿಮಾಪುರ ವಾದ ಮಾಡಿದ್ದಾರೆ.
ಸಚಿವರು ರಾಜೀನಾಮೆ ಕೊಡುವವರೆಗೂ ನಾವು ಹಿಂದೆ ಸರಿಯುವುದಿಲ್ಲ ಎಂದು ಪ್ರತಿಪಕ್ಷಗಳಾದ ಬಿಜೆಪಿ-ಜೆಡಿಎಸ್ ಸದನದ ಬಾವಿಗಿಳಿದು ಹೋರಾಟ ನಡೆಸಲು ಮುಂದಾಗಿವೆ.
ಮಂಗಳವಾರದಿಂದ ಮುಂದುವರೆದ ಅಧಿವೇಶನದಲ್ಲಿ ಲೋಕಾಯುಕ್ತ ಎಫ್‌ಐಆರ್‌ನಲ್ಲಿ ಸಚಿವರ ಹೆಸರು ಪರೋಕ್ಷವಾಗಿ ಉಲ್ಲೇಖವಾಗಿರುವುದರಿಂದ ಅವರ ತಲೆದಂಡಕ್ಕೆ ಪಟ್ಟು ಹಿಡಿಯುವ ಸಾಧ್ಯತೆ ಇದೆ.
ಪ್ರಕರಣದ ಹಿನ್ನೆಲೆ
ಲೋಕಾಯುಕ್ತ ತನಿಖೆಯಲ್ಲಿ ಹೊರಬಂದ ಮಾಹಿತಿಯಂತೆ, ಸಿಎಲ್-7 ಲೈಸೆನ್‌್ಸಗೆ (ಲಿಕ್ಕರ್) 75 ಲಕ್ಷ, ಮೈಕ್ರೋ ಬ್ರೇವರಿ ಲೈಸೆನ್‌್ಸಗೆ (ಪಾನೀಯಗಳು) 1.5 ಕೋಟಿ. ಹೀಗೆ ಒಟ್ಟು 2.30 ಕೋಟಿ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಕೊನೆಗೆ 2.25 ಕೋಟಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.
ಮೂವರ ಮೇಲೂ ವಿಚಾರಣೆ ಮುಂದುವರಿದಿದೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಅಬಕಾರಿ ಭವನದಲ್ಲೇ ಮೂವರು ಅಧಿಕಾರಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಅಬಕಾರಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಧಿಕಾರಿಗಳ ಪಾತ್ರ ಬಹಿರಂಗವಾಗುವ ಸಾಧ್ಯತೆ ಇದೆ.
