Thursday, January 9, 2025
Homeಅಂತಾರಾಷ್ಟ್ರೀಯ | Internationalಸುಳ್ಳು ಆರೋಪಗಳ ಮೂಲಕ ಭಾರತವನ್ನು ಕೆಣಕುತ್ತಿದ್ದ ಕೆನಡಾದ ಪ್ರಧಾನಿ ಟ್ರುಡೊ ಯುಗಾಂತ್ಯ

ಸುಳ್ಳು ಆರೋಪಗಳ ಮೂಲಕ ಭಾರತವನ್ನು ಕೆಣಕುತ್ತಿದ್ದ ಕೆನಡಾದ ಪ್ರಧಾನಿ ಟ್ರುಡೊ ಯುಗಾಂತ್ಯ

End Of The Trudeau Era: What PM's Exit Means For India-Canada Relations

ಟೊರೊಂಟೊ,ಜ.6-ಕೊನೆಗೂ ಕೆನಡಾದ ಪ್ರಧಾನಿ ಜಸ್ಟಿನ್‌ ಟ್ರುಡೊ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಸುಮಾರು ಒಂದು ದಶಕದ ಅಧಿಕಾರದ ನಂತರ ಅವರ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನ ಮತ್ತು ಅವರ ಹಣಕಾಸು ಸಚಿವರ ಹಠಾತ್‌ ರಾಜಿನಾಮೆಯಿಂದ ಸರ್ಕಾರದೊಳಗೆ ಬೆಳೆಯುತ್ತಿರುವ ಪ್ರಕ್ಷುಬ್ಧತೆಗೆ ತಲೆಬಾಗಿದ್ದಾರೆ.

ಭಾರತ ಸೇರಿ ಹಲವು ದೇಶದ ವಿರುದ್ದ ಕೆಟ್ಟ ಹೇಳಿಕೆಯಿಂದ ವಿಶ್ವಾದ್ಯಂತ ಇವರ ವಿರುದ್ದ ಹೆಚ್ಚುತ್ತಿರುವ ಅಸಮಾಧಾನದ ನಡುವೆ ಟ್ರುಡೊ ರಾಜಿನಾಮೆ ನೀಡಿದ್ದಾರೆ ಇದಲ್ಲದೆ ಅವರ ನಿಲುವಿಗೆ ಅಸಮಾಧಾನ ಹೆಚ್ಚಿ ಸರ್ಕಾರದಲ್ಲಿ ಆಂತರಿಕ ಕದನಗಳು ಹೆಚ್ಚಾಗಿ ಅದು ಮುಂದಿನ ಚುನಾವಣೆಗಳಲ್ಲಿ ಸೋಲಿಗೆ ಕಾರಣವಾಗಬಹುದು ಎಂಬ ಮಾತುಗಳು ಕೇಳಿಬಂದಿದೆ.

ಆಡಳಿತಾರೂಢ ಲಿಬರಲ್‌ ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಅವರು ಪ್ರಧಾನಿಯಾಗಿ ಉಳಿಯಲು ಯೋಜಿಸಿದ್ದರು ಆದರೆ ಅದು ಸಾಧ್ಯವಾಗಿಲ್ಲ .ಜಗಳ ನಡೆಯುವಾಗ ನಾನು ಸುಲಭವಾಗಿ ಹಿಂದೆ ಸರಿಯುವುದಿಲ್ಲ,ನಮ ಪಕ್ಷ ಮತ್ತು ದೇಶಕ್ಕೆ ಬಹಳ ಮುಖ್ಯವಾದ ಹೋರಾಟ.ನಮ ಜನನರ ಹಿತಾಸಕ್ತಿ ಮತ್ತು ಪ್ರಜಾಪ್ರಭುತ್ವದ ನನಗೆ ಪ್ರಿಯವಾದದ್ದು ಎಂದು ಟ್ರೂಡೊ ಹೇಳಿ,ತಮ ಅಧಿಕೃತ ನಿವಾಸದ ಹೊರಗೆ ರಾಜಿನಾಮೆ ಘೋಷಿಸಿ ಕಣ್ಣೀರು ಹಾಕಿದರು.

ಮುಂದಿನ ಜ. 27 ರಂದು ಪುನರಾರಂಭಗೊಳ್ಳಬೇಕಿದ್ದ ಸಂಸತ್ತನ್ನು ಮಾರ್ಚ್‌ 24 ರವರೆಗೆ ಸ್ಥಗಿತಗೊಳಿಸಲಾಗುವುದು.ಈ ಸಮಯವು ಲಿಬರಲ್‌ ಪಕ್ಷದ ಹೊಸ ನಾಯಕನ ಆಯ್ಕೆ ಅವಕಾಶ ಸಿಗಲಿದೆ ಎಂದಿದ್ದಾರೆ.

ಎಲ್ಲಾ ಮೂರು ಪ್ರಮುಖ ವಿರೋಧ ಪಕ್ಷಗಳು ಸಂಸತ್ತು ಪುನರಾರಂಭವಾದಾಗ ಅವಿಶ್ವಾಸ ಮತದಲ್ಲಿ ಲಿಬರಲ್‌ ಪಕ್ಷವನ್ನು ಉರುಳಿಸಲು ಯೋಜಿಸಿದೆ ಆದ್ದರಿಂದ ಲಿಬರಲ್‌ಗಳು ಹೊಸ ನಾಯಕನನ್ನು ಆಯ್ಕೆ ಮಾಡಿದ ನಂತರ ಕೆಲವೇ ತಿಂಗಳಲ್ಲಿ ರಾಷ್ಟೀಯ ಚುನಾವಣೆ ಬಹುತೇಕ ಖಚಿತವಾಗಿದೆ.

2015 ರಲ್ಲಿ ಟ್ರುಡೊ ಅಧಿಕಾರಕ್ಕೆ ಬಂದಾಗ ಆರಂಭದಲ್ಲಿ ಪ್ರಶಂಸಿಸಲಾಯಿತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಹಾರ,ಅಗತ್ಯ ವಸ್ತು ಬೆಲೆ ಗಗನಕ್ಕೇರುತ್ತಿರುವುದು ಮತ್ತು ಹೆಚ್ಚುತ್ತಿರುವ ವಲಸೆ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಟೀಕೆಗೆ ಒಳಗಾಗಿದ್ದರು.

ಎನ್‌ಡಿಪಿ ಪಕ್ಷದ ನಾಯಕ ಜಗ್ಮೀತ್‌ ಸಿಂಗ್‌ ಸೇರಿದಂತೆ ಇತರ ವಿರೋಧ ಪಕ್ಷದ ನಾಯಕರು ಟೀಕೆ ಪ್ರಹಾರ ನಡೆಸಿದ್ದರು.ಇನ್ನು ಕೆನಡಾದಲ್ಲಿನ ರಾಜಕೀಯ ಕ್ರಾಂತಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕ್ಷಣದಲ್ಲಿ ಬರುತ್ತದೆ.ಕೆನಡಾವು ಅಮೆರಿಕಕ್ಕೆ ತೈಲ ಮತ್ತು ನೈಸರ್ಗಿಕ ಅನಿಲದ ಪ್ರಮುಖ ರಫ್ತುದಾರನಾಗಿದ್ದು, ಉಕ್ಕು, ಅಲ್ಯೂಮಿನಿಯಂ ಮತ್ತು ಆಟೋಮೊಬೈಲ್‌ಗಳಿಗಾಗಿ ತನ್ನ ಉತ್ತರದ ನೆರೆಯ ಮೇಲೆ ಅವಲಂಬಿತವಾಗಿದೆ.

RELATED ARTICLES

Latest News