ನವದೆಹಲಿ, ಜ.8- ಭಾರತದ ವೇಗಿ ಜಸ್ ಪ್ರೀತ್ ಬೂಮ್ರಾ ಅವರು ಎಲ್ಲಾ ಮಾದರಿ ಕ್ರಿಕೆಟ್ ನ ಸರ್ವಶ್ರೇಷ್ಠ ವೇಗಿ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯನ್ನು ಟೀಮ್ ಇಂಡಿಯಾ 1-3 ಅಂತರದಿಂದ ಕಳೆದುಕೊಂಡರೂ, ತಮ ಉತ್ತಮ ಬೌಲಿಂಗ್ ಪ್ರದರ್ಶನಕ್ಕೆ ಬೂಮ್ರಾ ಅವರು ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿದ್ದರು.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿನ ತಮ ಪ್ರದರ್ಶನಕ್ಕಾಗಿ ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್್ಸ ಹಾಗೂ ದಕ್ಷಿಣ ಆಫ್ರಿಕಾದ ಡಾನೆ ಪೀಟರ್ಸನ್ರೊಂದಿಗೆ ಬೂಮ್ರಾ ಅವರು ಡಿಸೆಂಬರ್ ತಿಂಗಳ ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶನ ಗೊಂಡಿದ್ದಾರೆ.
`ಆಸ್ಟ್ರೇಲಿಯಾ ವಿರುದ್ಧದ ಸರಣಿ ಮುಗಿದ ನಂತರ ನಾನು ಈಗಾಗಲೇ ಟೀಮ್ಇಂಡಿಯಾ ವೇಗಿ ಜಸ್ ಪ್ರೀತ್ ಬೂಮ್ರಾ ಅವರ ಪ್ರದರ್ಶನದ ಬಗ್ಗೆ ಸಾಕಷ್ಟು ಚಿಂತಿಸಿದ್ದು, ಆತ ಎಲ್ಲ ಮಾದರಿ ಕ್ರಿಕೆಟ್ ನ ಸರ್ವಶ್ರೇಷ್ಠ ವೇಗಿ ಎಂದು ಪರಿಗಣಿಸಿದ್ದೇನೆ’ ಎಂದ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
`ನಾನು ಕ್ರಿಕೆಟ್ ಜೀವನದಲ್ಲಿ ಶ್ರೇಷ್ಠ ವೇಗಿಗಳಾದ ವೆಸ್ಟ್ ಇಂಡೀಸ್ ನ ಕಾರ್ಟ್ನಿ ಅಂಬ್ರೋಸ್, ಗ್ಲೆನ್ ಮೆಗ್ರಾತ್ ಅವರ ಬೌಲಿಂಗ್ ನೋಡಿದ್ದೇನೆ, ಆದರೆ ಅವರು ಚುಟುಕು ಕ್ರಿಕೆಟ್ ಆಡಿಲ್ಲ. ಆದ್ದರಿಂದ ನಾನು ಈ ಶ್ರೇಷ್ಠರ ಕುರಿತು ಮಾತನಾಡಲ್ಲ. ಆದರೆ ಎಲ್ಲ ಸ್ವರೂಪದ ಕ್ರಿಕೆಟ್ ಆಡುವ ಶ್ರೇಷ್ಠ ಬೌಲರ್ ಎಂದರೆ ಜಸ್ಪ್ರೀತ್ ಬೂಮ್ರಾ. ಆತ ವಿಶ್ವದ ಯಾವುದೇ ಕ್ರೀಡಾಂಗಣದಲ್ಲೂ ತಮ ಬೌಲಿಂಗ್ ಚಮತ್ಕಾರ ಪ್ರದರ್ಶಿಸಬಲ್ಲರು’ ಎಂದು ಕ್ಲಾರ್ಕ್ ತಿಳಿಸಿದ್ದಾರೆ.