Saturday, January 11, 2025
Homeರಾಜ್ಯನಾನುಂಟು, ಕಾಂಗ್ರೆಸ್‌‍ ಪಕ್ಷ ಉಂಟು : ಪವರ್ ಶೇರಿಂಗ್ ಕುರಿತು ಡಿಸಿಎಂ ಅಚ್ಚರಿ ಹೇಳಿಕೆ

ನಾನುಂಟು, ಕಾಂಗ್ರೆಸ್‌‍ ಪಕ್ಷ ಉಂಟು : ಪವರ್ ಶೇರಿಂಗ್ ಕುರಿತು ಡಿಸಿಎಂ ಅಚ್ಚರಿ ಹೇಳಿಕೆ

ಶೃಂಗೇರಿ,ಜ.11- ಮುಖ್ಯಮಂತ್ರಿ ಅಧಿಕಾರಾವಧಿ ಹಂಚಿಕೆ ಸೂತ್ರದ ಬಗ್ಗೆ ನಡೆಯುತ್ತಿರುವ ವ್ಯಾಪಕವಾಗಿ ಚರ್ಚೆಗಳಿಗೆ ಉಪಮುಖ್ಯಮಂತ್ರಿ ಶಿವಕುಮಾರ್‌ ಪ್ರತಿಕ್ರಿಯಿಸಿದ್ದು, 5 ವರ್ಷ ಈಗಿನ ವ್ಯವಸ್ಥೆ ಮುಂದುವರೆಯಲಿದೆ. ಹೈಕಮಾಂಡ್‌ ಹೇಳಿದಂತೆ ನಾವು ಕೇಳಿಕೊಂಡು ಹೋಗುತ್ತೇವೆ. ಉಳಿದಂತೆ ಎಲ್ಲರ ಮಾತುಗಳೂ ಗೌಣ ಎಂದು ಶಿವಕುಮಾರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶ್ರೀಮಠಕ್ಕೆ ಭೇಟಿ ನೀಡಿದಾಗಲೆಲ್ಲಾ ರಾಜಕೀಯವಾಗಿ ಮಹತ್ವದ ತಿರುವುಗಳಾಗುತ್ತಿವೆ ಎಂಬ ಪ್ರಶ್ನೆ ಎದುರಾಗುತ್ತಿದ್ದಂತೆ ನನಗೆ ಯಾವ ರಾಜಕೀಯ ತಿರುವುಗಳೂ ಬೇಕಿಲ್ಲ. ಯಾರೂ ತಲೆಕೆಡಿಸಿಕೊಳ್ಳಬಾರದು ಎಂದರು.

ಜನ ಆಶೀರ್ವಾದ ಮಾಡಿ ಅವಕಾಶ ನೀಡಿದ್ದಾರೆ. 5 ವರ್ಷ ಸರ್ಕಾರ ನಡೆಸುತ್ತೇವೆ. ಉಳಿದಂತೆ ಯಾರು, ಯಾವುದೇ ಹೇಳಿಕೆಗಳನ್ನು ನೀಡಿದರೂ ಅದು ಮುಖ್ಯವಲ್ಲ. ನನಗೆ ಯಾವ ಶಾಸಕರ ಬೆಂಬಲವೂ ಬೇಕಿಲ್ಲ. ಕಾರ್ಯಕರ್ತರೂ ಕೂಡ ಮುಂದಿನ ಮುಖ್ಯಮಂತ್ರಿ ಎಂದು ಕೂಗಬಾರದು ಎಂದು ಹೇಳಿದರು. ಪಕ್ಷ ಏನನ್ನು ಹೇಳುತ್ತದೆಯೋ ಅದನ್ನು ನಾನು ಮತ್ತು ಮುಖ್ಯಮಂತ್ರಿ ಮಾಡಿಕೊಂಡು ಹೋಗುತ್ತೇವೆ. ನನ್ನ ಪರವಾಗಿ ಯಾರೂ ಒತ್ತಾಯ ಹಾಕುವುದೂ ಬೇಡ, ಯಾರ ಬೆಂಬಲವೂ ಅವಶ್ಯಕತೆಯಿಲ್ಲ. ನಾನುಂಟು, ಕಾಂಗ್ರೆಸ್‌‍ ಪಕ್ಷ ಉಂಟು. ಕರ್ಮಣ್ಯೇ ವಾಧಿಕಾರಸ್ತೇ ಎಂಬಂತೆ ಕೆಲಸ ಮಾಡುತ್ತೇನೆ. ಫಲಾಫಲ ದೇವರಿಗೆ ಬಿಟ್ಟದ್ದು ಎಂದರು.

ತಾವು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ರಾಜಕೀಯವಾಗಿ ವ್ಯಾಖ್ಯಾನಿಸುತ್ತಿರುವುದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಧರ್ಮ, ದೇವರುಗಳ ಮೇಲೆ ನಂಬಿಕೆಯಿದೆ. ದಿನವೂ ಪೂಜೆ ಮಾಡುತ್ತೇನೆ. ನನ್ನ ಒಳಿತಿಗಾಗಿ, ರಾಜ್ಯ ಹಾಗೂ ಜನರ ಒಳಿತಿಗಾಗಿ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಮಾಡುತ್ತೇನೆ ಎಂದರು. ನಾನು ದೇವಸ್ಥಾನಕ್ಕೆ ಹೋಗುವುದನ್ನು ಟೆಂಪಲ್‌ ರನ್‌ ಎನ್ನುವುದಾದರೆ ದೇವಸ್ಥಾನಗಳನ್ನು ಮುಚ್ಚಿಬಿಡಿ. ಧಾರ್ಮಿಕ ದತ್ತಿ ಇಲಾಖೆ ಏಕೆ ಇದೆ?, ಅಲ್ಪಸಂಖ್ಯಾತರ ವಕ್‌್ಫ ಬೋರ್ಡ್‌ಗಳು, ಚರ್ಚ್‌ಗಳು ಏಕೆ ಇವೆ?, ಅವರವರ ವಿಚಾರಗಳು, ನಂಬಿಕೆಗಳು ಅವರಿಗೇ ಸೇರಿವೆ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಹಲವಾದರೂ ನಿಷ್ಠೆ ಒಂದೇ ಎಂದು ಹೇಳಿದರು.

ಶ್ರೀ ಭಾರತಿತೀರ್ಥ ಸ್ವಾಮಿಜಿಯವರು ಶೃಂಗೇರಿ ಮಠದ ಜವಾಬ್ದಾರಿ ವಹಿಸಿಕೊಂಡು 50 ವರ್ಷ ಕಳೆದಿವೆ. ಅನೇಕ ಅನುಭವಗಳು ನಮ ಮುಂದಿವೆ. ಧರ್ಮೋ ರಕ್ಷತಿ ರಕ್ಷಿತಃ ಎಂಬಂತೆ ಮಠ ರಾಜಕಾರಣಕ್ಕೆ ಹಸ್ತಕ್ಷೇಪ ಮಾಡದೆ. ಯಾವ ವಿಚಾರಕ್ಕೂ ಜೋತು ಬೀಳದೆ ಆಚಾರ, ವಿಚಾರ, ಧರ್ಮ, ಸಂಸ್ಕೃತಿ ಪಾಲನೆಗೆ ಆದ್ಯತೆ ನೀಡಿದ್ದಾರೆ. ಹೀಗಾಗಿ ಮಠದ ಮೇಲೆ ಎಲ್ಲರಿಗೂ ವಿಶೇಷ ಅಭಿಮಾನವಿದೆ ಎಂದರು.
ಈ ಹಿಂದೆ ರಾಜೀವ್‌ಗಾಂಧಿಯವರು ಸಂಸ್ಕೃತದ ವಿದ್ಯಾಪೀಠ ಸ್ಥಾಪಿಸಲು ಕ್ರಮ ಕೈಗೊಂಡಿದ್ದರು. ಶ್ರೀ ಮಠದಲ್ಲಿ ನಡೆದ ಪೂಜೆ, ಹವನಗಳು ನಮ ಸರಣೆಯಲ್ಲಿವೆ. ಬೆಂಗಳೂರಿನಲ್ಲೂ ಮನೆಮನೆಗೆ ಭೇಟಿ ನೀಡಿ ಸ್ತೋತ್ರ ಬೋಧನೆ ಮೂಲಕ ಧರ್ಮಪ್ರಚಾರ ಮಾಡಿದ್ದಾರೆ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ ಹೆಲಿಕಾಫ್ಟರ್‌ನಲ್ಲಿ ಶೃಂಗೇರಿಗೆ ಆಗಮಿಸಿದಾಗ ಮುಂದಿನ ಮುಖ್ಯಮಂತ್ರಿಗೆ ಜೈ ಎಂದು ಘೋಷಣೆ ಕೂಗಿದರು. ಈ ಕುರಿತು ಪ್ರಶ್ನೆ ಕೇಳಿದಾಗ ಡಿ.ಕೆ.ಶಿವಕುಮಾರ್‌ ವಿಷಾದದಿಂದಲೇ ಪ್ರತಿಕ್ರಿಯಿಸಿದರು.

RELATED ARTICLES

Latest News