ನವದೆಹಲಿ,ನ.3- ಜೀವನ್ ಮಿಷನ್ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಇಂದು ರಾಜಸ್ಥಾನದಲ್ಲಿ ಚುನಾವಣೆಗೆ ಒಳಪಟ್ಟಿರುವ ಉನ್ನತ ಐಎಎಸ್ ಅಧಿಕಾರಿಯೊಬ್ಬರ ಮನೆ ಮೇಲೆ ದಾಳಿ ಮಾಡಿದೆ.ಪಿಎಚ್‍ಇ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಬೋಧ್ ಅಗರ್ವಾಲ್ ಅವರ ಮನೆ ಸೇರಿದಂತೆ ರಾಜ್ಯದ ರಾಜಧಾನಿ ಜೈಪುರ ಮತ್ತು ದೌಸಾದ 25 ಕ್ಕೂ ಹೆಚ್ಚು ಸ್ಥಳಗಳ ಮೇಲೆ ತನಿಖಾ ಸಂಸ್ಥೆ ದಾಳಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಹಗರಣಕ್ಕೆ ಸಂಬಂಧಿಸಿದ ಇತರ ಆರೋಗ್ಯ ಅಧಿಕಾರಿಗಳನ್ನು ಇಡಿ ಅಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲೂ ಇಡಿ ರಾಜ್ಯದಲ್ಲಿ ಇದೇ ರೀತಿಯ ದಾಳಿ ನಡೆಸಿತ್ತು.
ನಾವು 5 ವರ್ಷ ಆಡಳಿತ ನಡೆಸುತ್ತೇವೆ : ಸಿದ್ದರಾಮಯ್ಯ
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು, ಕೇಂದ್ರ ಸರ್ಕಾರ ಮತ್ತು ಇಡಿ ಎರಡಕ್ಕೂ ತಿರುಗೇಟು ನೀಡಿದ್ದು, ಪ್ರತಿಪಕ್ಷ ನಾಯಕರನ್ನು ಬೆದರಿಸಲು ಮತ್ತು ರಾಜ್ಯ ಸರ್ಕಾರಗಳನ್ನು ಉರುಳಿಸಲು ದೇಶಾದ್ಯಂತ ಏಜೆನ್ಸಿಯ ದಾಳಿಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿ ಈ ದಾಳಿಗಳನ್ನು ಪಾಕಿಸ್ತಾನದಿಂದ ಮಿಡತೆ ಸಮೂಹ ಕ್ಕೆ ಹೋಲಿಸಿದ್ದಾರೆ,
ರಾಜಸ್ಥಾನವು ತನ್ನ 200 ಸದಸ್ಯರ ವಿಧಾನಸಭೆಯನ್ನು ನವೆಂಬರ್ 25 ರಂದು ಆಯ್ಕೆ ಮಾಡುತ್ತದೆ ಮತ್ತು ಡಿಸೆಂಬರ್ 3 ರಂದು ಇತರ ನಾಲ್ಕು ರಾಜ್ಯಗಳ ಮತಗಳೊಂದಿಗೆ ಮತಗಳನ್ನು ಎಣಿಸಲಾಗುವುದು.