ಬಾಲಸೋರ್,ಜ.11-ಬಾಲಸೋರ್‌ನಲ್ಲಿ ರೈಲ್ವೆ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಯಾವುದೇ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯನ್ನು ತಪ್ಪಿಸಲು ಮೊದಲು ವಿಧಿಸಲಾದ ಕರ್ಫ್ಯೂ ಹಿಂಪಡೆಯಲಾಗಿದೆ. ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಕರ್ಫ್ಯೂ ವಿಧಿಸಲಾಗಿತ್ತು. ಪರಿಸ್ಥಿತಿ ಅವಲೋಕಿಸಿ ಇಂದು ಬೆಳಿಗ್ಗೆ ಹೊಸ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಪಶ್ಚಿಮ್ ಮೆದಿನಿಪುರ್ ಜಿಲ್ಲೆಯ ನಾರಾಯಣಗಢ್‌ನಿಂದ ಬಾಲಸೋರ್ ಮೂಲಕ ಭದ್ರಕ್‌ಗೆ ಮೂರನೇ ಮಾರ್ಗದ ನಿರ್ಮಾಣಕ್ಕೆ ಕೆಲವರು ಅಡ್ಡಿಪಡಿಸಿ ರೈಲ್ವೆ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡುದ್ದರಿಂದ ತೆರವು ಕಾರ್ಯಾಚರಣೆ ಅಗತ್ಯವಾಗಿತ್ತು.
ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸಂಪರ್ಕವನ್ನು ಹೆಚ್ಚಿಸಲು ಹೊಸ ರೈಲು ಮಾರ್ಗ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ಅಧಿಕಾರಿ ಹೇಳಿದರು. ಜಿಲ್ಲಾಡಳಿತವು ಹಿಂದಿನ ಆದೇಶದಲ್ಲಿ,ಅರದ್‌ಬಜಾರ್‌ನಿಂದ ತರಕಾರಿ ಮಾರುಕಟ್ಟೆ, ಹರಿಪುರದಿಂದ ದರ್ಜಿ ಪೋಖಾರಿ ಚಾಕ್, ಕಾಸಿಮಿಲಾ ಸೇತುವೆಯಿಂದ ಫುಲಾಡಿ ಚಾಕ್, ನುಬಜಾರ್ ರೈಲ್ವೆ ಗೇಟ್, ಗೊಲಪೋಳ ಮತ್ತು ನುಬಜಾರ್ ತರಕಾರಿ ಮಾರುಕಟ್ಟೆಯ ಎರಡೂ ಬದಿಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಜನವರಿ 11 ರಂದು ಬೆಳಿಗ್ಗೆ 4 ರಿಂದ ರಾತ್ರಿ 10 ರವರೆಗೆ ಮತ್ತು ಜನವರಿ 12 ರಂದು ಬೆಳಿಗ್ಗೆ 4 ರಿಂದ ರಾತ್ರಿ 10 ರವರೆಗೆ ಇದು ಜಾರಿಯಲ್ಲಿತ್ತು. ನಾವು ಗೊತ್ತುಪಡಿಸಿದ ತೆರವು ಪ್ರದೇಶವನ್ನು ಸುತ್ತುವರೆದಿದ್ದೇವೆ ಮತ್ತು ಜನರು ಸ್ವಯಂಪ್ರೇರಣೆಯಿಂದ ತಮ ಸ್ಥಳಗಳನ್ನು ಖಾಲಿ ಮಾಡುತ್ತಿದ್ದಾರೆ. ಯಾವುದೇ ಕಡೆಯಿಂದ ಯಾವುದೇ ಪ್ರತಿರೋಧವಿಲ್ಲ. ಸುಮಾರು 238 ಮನೆಗಳನ್ನು ಕೆಡವಬೇಕಿತ್ತು. ಸುಮಾರು 2,000 ಜನರು ಅಲ್ಲಿ ತಂಗಿದ್ದರು ಎಂದು ಅವರು ಹೇಳಿದರು