ನವದೆಹಲಿ, ಜ.12- ಐಸಿಸಿ ನೂತನ ಅಧ್ಯಕ್ಷರಾಗಿ ಜಯ್ಶಾ ಆಯ್ಕೆಯಾದ ನಂತರ ಖಾಲಿಯಿದ್ದ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ಅಸ್ಸಾಂನ ಮಾಜಿ ಕ್ರಿಕೆಟಿಗ ದೇವಜಿತ್ ಸಾಖಿಯಾ ಅವರು ಅಲಂಕರಿಸಿದ್ದಾರೆ.
ಬಿಸಿಸಿಐ ಕಾರ್ಯದರ್ಶಿ ಯಾಗಿ ಆಯ್ಕೆಯಾದ ನಂತರ ದೇವಜಿತ್ ಅವರು ಇಂದು ತಮ ಮೊದಲ ಸಭೆ ನಡೆಸಿದ್ದು, ಇತ್ತೀಚೆಗೆ ಕಾಂಗರೂ ನಾಡಿನಲ್ಲಿ ನಡೆದಿದ್ದ ಪ್ರತಿಷ್ಠಿತ ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿ ಸೋಲಿನ ಕುರಿತು ಗಾಢವಾಗಿ ಚರ್ಚಿಸಿದ್ದಾರೆ.
ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ , ನಾಯಕ ರೋಹಿತ್ ಶರ್ಮಾ ಹಾಗೂ ಹೆಡ್ ಕೋಚ್ ಗೌತಮ್ ಗಂಭೀರ್ ಕೂಡ ಪಾಲ್ಗೊಂಡಿದ್ದರು.`ಭಾರತ ತಂಡದ ಇತ್ತೀಚಿನ ಪ್ರದರ್ಶನ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು, ತಂಡದಲ್ಲಿ ಬ್ಯಾಟಿಂಗ್ ಲೈನ್ ಆಪ್ ಸಾಕಷ್ಟು ಬಲಿಷ್ಠವಾಗಿದ್ದು, ಆಯ್ಕೆ ಮಂಡಳಿ ಆಟಗಾರರನ್ನು ಅರಿಯುವಲ್ಲಿ ಎಡವಿದ್ದಾರೆಯೇ? ಅಥವಾ ಆಟಗಾರರು ನಿರೀಕ್ಷೆಯಂತೆ ಪ್ರದರ್ಶನ ನೀಡುವಲ್ಲಿ ಎಲ್ಲಿ ಎಡವುತ್ತಿದ್ದಾರೆ’ ಎಂಬ ಕುರಿತು ಚರ್ಚಿಸಲಾಗಿದೆ.
ದೇವಜಿತ್ ಯಾರು?
ಅಸ್ಸಾಂ ತಂಡದ ಪರ 1990 ರಿಂದ 1991ರವರೆಗೆ 4 ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಪಾತ್ರ ನಿಭಾಯಿಸಿರುವ ದೇವಜಿತ್ , 53 ರನ್ ಹಾಗೂ 9 ಕ್ಯಾಚ್ ಪಡೆದಿದ್ದಾರೆ.
ಅಲ್ಲದೆ ಗುವಾಹಟಿ ಹೈಕೋರ್ಟ್ ನಲ್ಲಿ ವಕೀಲರಾಗಿಯೂ ಸೇವೆ ಸಲ್ಲಿಸಿದ್ದು, ಆರ್ಬಿಐ ಸ್ಪೋರ್ಟ್್ಸ ಖೋಟಾದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು. ಅಲ್ಲದೆ 2019ರಲ್ಲಿ ಎಸಿಎ ಕಾರ್ಯದರ್ಶಿ ಆಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.