Monday, January 13, 2025
Homeರಾಷ್ಟ್ರೀಯ | Nationalಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು

ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು

Two-Year-Old Dies After Pistachio Shell Gets Stuck in Throat

ಕಾಸರಗೋಡು,ಜ.13-ಆಟವಾಡುವಾಗ ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗುವೊಂದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮದಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಕುಂಬಳೆ ಭಾಸ್ಕರ ನಗರದ ಅನಸ್‌‍(2) ಎಂದು ಗುರುತಿಸಲಾಗಿದೆ.

ಮಗುವಿಗೆ ಪಿಸ್ತಾವನ್ನು ನೀಡಿಲಾಗಿತ್ತು ಅದು ಬಿಡಿ ತಿನ್ನುತ್ತಿದ್ದಾಗ ಸಿಪ್ಪೆ ಗಂಟಲಲ್ಲಿ ಸಿಲುಕಿದೆ ಮಗುವಿಗೆ ತೊಂದರೆಯಾಗಿದೆ ಎಂದು ಅರಿತ ಮನೆಯವರು ಸಿಪ್ಪೆಯ ಒಂದು ತುಂಡನ್ನು ಹೊರ ತೆಗೆದಿದ್ದರು.

ಬಳಿಕ ಅಸ್ವಸ್ಥಗೊಂಡಿದ್ದ ಮಗುವನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರು ತಪಾಸಣೆ ನಡೆಸಿದಾಗ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದು ತಿಳಿಸಿದ್ದರಿಂದ ಮನೆಗೆ ಕರೆದುಕೊಂಡು ಬರಲಾಗಿತ್ತು.

ಆದರೆ ಸ್ವಲ್ಪ ಸಮಯದ ನಂತರ ಬೆಳಿಗ್ಗೆ ಬಾಲಕನಿಗೆ ಉಸಿರಾಟದ ತೊಂದರೆ ಉಂಟಾಗಿದೆ. ಕೂಡಲೇ ಮತ್ತೆ ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ.ಪಿಸ್ತಾದ ಒಂದು ಸಿಪ್ಪೆ ಶ್ವಾಸಕೋಶದಲ್ಲಿ ಉಳಿದಿದ್ದರಿಂದಾಗಿ ಮಗು ಉಸಿರಾಟದ ಸಮಸ್ಯೆಗೆ ತುತ್ತಾಗಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ವಿದೇಶದಲ್ಲಿರುವ ಮಗುವಿನ ತಂದೆ ಅನ್ವರ್‌ ಅವರು ಕಳೆದ ವಾರವಷ್ಟೇ ರಜೆಯಲ್ಲಿ ಊರಿಗೆ ಬಂದಿದ್ದು, ರಜೆ ಮುಗಿದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಮತ್ತೆ ವಿದೇಶಕ್ಕೆ ತೆರಳಿದ್ದರು.

RELATED ARTICLES

Latest News