Tuesday, January 14, 2025
Homeಬೆಂಗಳೂರುಶೀಘ್ರದಲ್ಲೇ ಪಿಜಿಗಳ ದರವೂ ಏರಿಕೆ ಸಾಧ್ಯತೆ

ಶೀಘ್ರದಲ್ಲೇ ಪಿಜಿಗಳ ದರವೂ ಏರಿಕೆ ಸಾಧ್ಯತೆ

PG rates likely to increase soon

ಬೆಂಗಳೂರು, ಜ. 13– ಬೆಲೆ ಏರಿಕೆಗಳ ಸರಮಾಲೆಗಳ ನಡುವೆಯೇ ನಗರದ ಪೇಯಿಂಗ್ ಗೆಸ್ಟ್ ದರ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಪಿಜಿ ನಡೆಸಲು ಕಷ್ಟವಾಗುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಬಾಡಿಗೆ ದರವನ್ನು ಶೇ.5 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಿರುವುದಾಗಿ ಪಿಜಿ ಅಸೋಸಿಯೇಷನ್ ತಿಳಿಸಿದೆ.

ಖಾಸಗಿ ಕಟ್ಟಡಗಳ ಬಾಡಿಗೆ ಹೆಚ್ಚಳ,ನೀರು, ದಿನಸಿ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಪಿಜಿ ದರ ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ ಪಿಜಿ ಮಾಲೀಕರುಗಳ ಜೊತೆ ಚರ್ಚಿಸಿ ಒಂದೇರಡು ದಿನಗಳಲ್ಲಿ ದರ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದುಬಂದಿದೆ.

ಕೊರೊನಾ ಸಮಯದಲ್ಲೂ ದರ ಏರಿಕೆ ಮಾಡಿರಲಿಲ್ಲ. ಇದೀಗ ಅನಿವಾರ್ಯ ಪರಿಸ್ಥಿತಿ ಎದುರಾಗಿರುವುದರಿಂದ ದರ ಏರಿಕೆ ಮಾಡದೆ ಬೇರೆ ದಾರಿಯಿಲ್ಲ ಎಂದು ಅಸೋಸಿಯೇಷನ್‌್ಸನವರು ತಿಳಿಸಿದ್ದಾರೆ.

RELATED ARTICLES

Latest News