ಹಾಸನ,ಜ.14-ನಗರದಲ್ಲಿ ಐಐಟಿ, ವಿಮಾನ ನಿಲ್ದಾಣಕ್ಕೆ ಮೀಸಲಿಟ್ಟಿದ್ದ ಜಾಗವನ್ನು ಕೆಲವರು ಕಬಳಿಸುತ್ತಿದ್ದಾರೆ. ಅದನ್ನು ತಡೆಯಲು ಏನೇನು ಮಾಡಬೇಕು ಮಾಡುತ್ತೇನೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಲವು ಪಟ್ಟಭದ್ರಾ ಹಿತಾಸಕ್ತಿಗಳು ಹಾಸನ ಜಿಲ್ಲೆಯ ಲೂಟಿ ಹೊಡೆಯುತ್ತಿದ್ದಾರೆ ಇದ್ದಲ್ಲದೆ ಕಾಂಗ್ರೆಸ್ ಸರ್ಕಾರದಿಂದ ಐಐಟಿ ಬೇರೆ ಜಿಲ್ಲೆಗೆ ಹೋಗಿದೆ ,ದೇವೇಗೌಡರು ಬದುಕಿರುವುದರೊಳಗೆ ಐಐಟಿ ತರಲು ಪ್ರಯತ್ನ ಮಾಡುತ್ತೇನೆ ಎಂದರು .
ಜಿಲ್ಲೆಗೆ ಐಐಟಿ ತರಲು ಕೆಲವರು ಅಡ್ಡಿಪಡಿಸುತ್ತಿದ್ದಾರೆ. ಎಲ್ಲೆಲ್ಲಿ ಯಾವ್‌ಯಾವ ಮ್ಯಾಜಿಕ್ ಮಾಡಬೇಕು ಮಾಡುತ್ತೇನೆ. ಮ್ಯಾಜಿಕ್ ಹೇಗೆ ಎಲ್ಲಿ ಮಾಡಬೇಕು ಎಂದು ನನಗೆ ಗೊತ್ತಿದೆ. ಮೂಲ ಯೋಜನೆಯಂತೆ ಏರ್ಪೋರ್ಟ್ ನಿರ್ಮಾಣಕ್ಕೆ ಪ್ರಯತ್ನ ಮಾಡುವುದಾಗಿ ರೇವಣ್ಣ ಹೇಳಿದರು.
ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ತಡೆಯಾಗಲು ಬಿಡುವುದಿಲ್ಲ. ಕೊನೆಯವರೆಗೂ ಹೋರಾಟ ಮಾಡುತ್ತೇನೆ.ದೇವೇಗೌಡರನ್ನು ಇಟ್ಟುಕೊಂಡು ಒಂದು ಲಕ್ಷ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ತಿಳಿಸಿದರು.
ಇನ್ನು ಜಿಲ್ಲಾಧಿಕಾರಿ ಕಚೇರಿ , ಕಂದಾಯ, ಪೊಲೀಸ್ ಇಲಾಖೆ ಒಂದು ಪಕ್ಷದ ಕಚೇರಿ ಆಗಬಾರದು. ಪೊಲೀಸ್ ಇಲಾಖೆಯಲ್ಲಿ ಎಂದೆಂದೂ ಕಾಣದ ದಂಧೆ ನಡೆಯುತ್ತಿದೆ. ಈ ರೀತಿ ದಂಧೆ ನಾನು ನೋಡಿಯೇ ಇಲ್ಲ? ಮದ್ಯದ ಅಂಗಡಿಗಳು ಜಾಸ್ತಿಯಾಗುತ್ತಿದ್ದು, ಮಟ್ಕ, ಜೂಜಾಟ ಕೊಲೆಗಳು ನಡೆಯುತ್ತಿದೆ ಎಂದು ಆರೋಪಿಸಿದರು.
2019-20 ರಿಂದ 2 ಪಾರ್ಟಿಯ ಕೆಲ ಮುಖಂಡರು ಜೆಡಿಎಸ್ ಮುಗಿಸಲು ಯತ್ನಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಕೆಲವರು ಟಿಕಾಣೆ ಹೊಡಿ ಪ್ರಯತ್ನಿಸುತ್ತಿದ್ದಾರೆ. ಇಂತಹ ಹೊಡೆತದಲ್ಲಿ ನಾಲ್ಕು ಮಂದಿ ಶಾಸಕರನ್ನು ಜನ ಗೆಲ್ಲಿಸಿದ್ದಾರೆ. ಬೇಕಾದಾಗ ಕಾಲು ಕಟ್ಟುತ್ತಾರೆ ಬೇಡವಾದಾಗ ಒದೆಯುತ್ತಾರೆ.
ಜಿಲ್ಲೆಯ ಋಣ ತೀರಿಸುವೆ:1962ನೇ ಇಸವಿಯಿಂದ ದೇವೇಗೌಡರಿಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆ ಹಾಸನ ,ಎರಡನೇಯದ್ದು ಬೆಂಗಳೂರು ಗ್ರಾಮಾಂತರ ಕನಕಪುರ ಕ್ಷೇತ್ರ ದೇವೇಗೌಡರಿಗೆ ರಾಜಕೀಯವಾಗಿ ಶಕ್ತಿ ಕೊಟ್ಟಿರುವ ಕ್ಷೇತ್ರವಾಗಿದೆ. ದೇವೇಗೌಡರು ಪ್ರಧಾನಮಂತ್ರಿ ಮುಖ್ಯಮಂತ್ರಿ ಸಚಿವರಾಗಲು ಜನರು ಸಹಕಾರ ಮಾಡಿದ್ದಾರೆ. ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲಿಸಿದ್ದು ನಾನು ಬದುಕಿರುವವರೆಗೆ ಜಿಲ್ಲೆಯ ಜನರನ್ನು ಮರೆಯುವುದಿಲ್ಲ ಎಂದರು.ಇದೇ ವೇಳೆ ಡಿಸಿಎಂ ಶಿವಕುಮಾರ್ ವಿದುದ್ದವೂ ಕಿಡಿ ಕಾರಿದರು