ತಿರುಮಲ,ಜ.14– ಬಾರ್ಡರ್ ಗವಾಸ್ಕರ್ ಟೋಫಿ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿ ಚೊಚ್ಚಲ ಸರಣಿಯಲ್ಲೇ ಶತಕ ಸಿಡಿಸಿದ್ದ ಭಾರತ ಕ್ರಿಕೆಟ್ ತಂಡದ ಉದಯೋನುಖ ಕ್ರಿಕೆಟಿಗೆ ನಿತೀಶ್ ಕುಮಾರ್ ರೆಡ್ಡಿ ತಿಮಪ್ಪನಿಗೆ ಕಠಿಣ ಹರಕೆ ತೀರಿಸಿದ್ದಾರೆ. ಟೀಮ್ ಇಂಡಿಯಾ ಯುವ ಕ್ರಿಕೆಟಿಗ ನಿತೀಶ್ ಕುಮಾರ್ ರೆಡ್ಡಿ ತಿರುಮಲಕ್ಕೆ ಭೇಟಿ ನೀಡಿ ತಿಮಪ್ಪನ ದರ್ಶನವನ್ನು ಪಡೆದಿದ್ದು, ಮಾತ್ರವಲ್ಲದೇ ತಿಮಪ್ಪನಿಗೆ ಕಠಿಣ ಹರಕೆ ಕೂಡ ತೀರಿಸಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ, ನಿತೀಶ್ ಕುಮಾರ್ ಅವರು ಕಾಲ್ನಡಿಗೆಯಲ್ಲಿ ತಿರುಮಲ ಬೆಟ್ಟಕ್ಕೆ ಹೋಗಿದ್ದು, ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿ ತಮ ಹರಕೆ ತೀರಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಸ್ವತಃ ನಿತೀಶ್ ಕುಮಾರ್ ರೆಡ್ಡಿ ಅವರೇ ವಿಡಿಯೋವನ್ನು ತಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಕಠಿಣ ಹರಕೆ :
ಇನ್ನು ನಿತೀಶ್ ಕುಮಾರ್ ರೆಡ್ಡಿ ತಿರುಮಲಕ್ಕೆ ಕಾಲ್ನಡಿಗೆ ಹೋಗಿದ್ದು ಮಾತ್ರವಲ್ಲ ಪವಿತ್ರ ತಿರುಮಲಕ್ಕೆ ಮೆಟ್ಟಿಲುಗಳ ಮೂಲಕ ಮೊಣಕಾಲಿನಲ್ಲಿ ಸಾಗಿ ತಮ ಹರಕೆ ತೀರಿಸಿದ್ದಾರೆ. ತಿರುಪತಿಯಿಂದ ತಿರುಮಲಕ್ಕೆ ಅಲಿಪಿರಿ ಮಾರ್ಗವಾಗಿ ಸುಮಾರು 12 ಕಿ.ಮೀ ದೂರವಿದ್ದು, ಈ ಮಾರ್ಗವು 3,550 ಮೆಟ್ಟಿಲುಗಳನ್ನು ಹೊಂದಿದೆ. ವಿಶೇಷವಾಗಿ ಮಾರ್ಗ ಕಡಿದಾಗಿದ್ದು, ಸಂಪೂರ್ಣ ಆರೋಗ್ಯವಂತ ಈ ಮಾರ್ಗವಾಗಿ ಸುಮಾರು 1 ರಿಂದ 1.5 ಗಂಟೆಗಳಲ್ಲಿ ತಿರುಮಲ ತಲುಪಬಹುದು.
ನಡಿಗೆಯ ವೇಗ ಮತ್ತು ನೀವು ಎಷ್ಟು ವಿರಾಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಇದು ಪೂರ್ಣಗೊಳ್ಳಲು ಸುಮಾರು 3-6 ಗಂಟೆಗಳು ತೆಗೆದುಕೊಳ್ಳುತ್ತದೆ ಎಂದು ಕೆಲ ಭಕ್ತರು ಹೇಳಿದ್ದಾರೆ. ಇಂತಹ ಕಡಿದಾದ ಮಾರ್ಗವನ್ನು ಕಾಲಿನಲ್ಲಿ ಹತ್ತಿ ಸಾಗುವುದೇ ಸವಾಲು ಎಂದುಕೊಂಡರೆ ನಿತೀಶ್ ಕುಮಾರ್ ರೆಡ್ಡಿ ಮೊಣಕಾಲಿನಲ್ಲಿ ಹತ್ತಿದ್ದಾರೆ. ಆ ಮೂಲಕ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಕಲ್ಪಿಸಿದ್ದಕ್ಕೆ ತಿಮಪ್ಪನಿಗೆ ಹರಕೆ ತೀರಿಸಿದ್ದಾರೆ ಎನ್ನಲಾಗಿದೆ.
ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ್ದ ನಿತೀಶ್ :
ಇನ್ನು ಇತ್ತೀಚೆಗೆ ಮುಕ್ತಾಯವಾದ ಬಾರ್ಡರ್ ಗವಾಸ್ಕರ್ ಟೋಫಿ ಟೆಸ್ಟ್ ಸರಣಿಯಲ್ಲಿ ನಿತೀಶ್ ಕುಮಾರ್ ರೆಡ್ಡಿ ಪ್ರಬಲ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್‌ನಲ್ಲೂ ಅಮೋಘ ಪ್ರದರ್ಶನ ನೀಡಿ ತಂಡದಲ್ಲಿ ತಮ ಸ್ಥಾನ ಭದ್ರಪಡಿಸಿಕೊಂಡಿದ್ದರು. ಮೆಲ್ಬೋರ್ನ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 171 ಎಸೆತಗಳಲ್ಲಿ 114 ರನ್ ಗಳಿಸುವ ಮೂಲಕ ನಿತೀಶ್ ಕುಮಾರ್ ರೆಡ್ಡಿ ಚೊಚ್ಚಲ ಶತಕವನ್ನು ಗಳಿಸಿದರು.
ಈ ಪಂದ್ಯದಲ್ಲಿ ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ನಿತೀಶ್, ಮೊದಲ ಎಸೆತದಿಂದಲೇ ಸ್ಥಿರ ಪ್ರದರ್ಶನ ನೀಡಿ 8ನೇ ಸಾನಕ್ಕೆ ಬಂದು ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ ಏಕೈಕ ಬ್ಯಾಟ್ಸ್ ಮನ್ ಎನಿಸಿಕೊಂಡರು.
ಇದಕ್ಕೂ ಮೊದಲು ಈ ದಾಖಲೆ ಸಿನ್ ದಂತಕಥೆ ಅನಿಲ್ ಕುಂಬ್ಳೆ (87) ಅವರ ಹೆಸರಿನಲ್ಲಿತ್ತು. ಆ ದಾಖಲೆಯನ್ನು ನಿತೀಶ್ ಮುರಿದಿದ್ದಾರೆ. ಬಾರ್ಡರ್ ಗವಾಸ್ಕರ್ ಟೋಫಿಯ ಐದು ಟೆಸ್ಟ್ ಪಂದ್ಯದಲ್ಲಿ ನಿತೀಶ್ ಅವರು 37.25 ಸರಾಸರಿಯಲ್ಲಿ 298 ರನ್ ಗಳಿಸಿದರು. ಬೌಲಿಂಗ್‌ನಲ್ಲಿಯೂ 5 ವಿಕೆಟ್ ಕೂಡ ಪಡೆದಿದ್ದರು.
ತವರಿನಲ್ಲಿ ಭವ್ಯ ಸ್ವಾಗತ :
ನಿತೀಶ್ ಕುಮಾರ್ ರೆಡ್ಡಿ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ ತಮ ತವರು ವಿಶಾಖಪಟ್ಟಣಂ ತಲುಪಿದಾಗ, ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ನಿತೀಶ್‌ಗೆ ಹೂಮಾಲೆ ಮತ್ತು ಹೂಗುಚ್ಚಗಳನ್ನು ಅರ್ಪಿಸಿ ಬರಮಾಡಿಕೊ0ಡರು. ಅನೇಕ ಅಭಿಮಾನಿಗಳು ಆಟೋಗ್ರಾಫ್ ಮತ್ತು ಫೋಟೋಗಳನ್ನು ತೆಗೆದುಕೊಂಡರು.