Wednesday, January 15, 2025
Homeರಾಷ್ಟ್ರೀಯ | Nationalಪಿಎಂಎಂಎಲ್‌ ಸದಸ್ಯರಾಗಿ ಸ್ಮೃತಿ ಇರಾನಿ ಮತ್ತು , ಶೇಖರ್‌ ಕಪೂರ್‌ ಸೇರ್ಪಡೆ

ಪಿಎಂಎಂಎಲ್‌ ಸದಸ್ಯರಾಗಿ ಸ್ಮೃತಿ ಇರಾನಿ ಮತ್ತು , ಶೇಖರ್‌ ಕಪೂರ್‌ ಸೇರ್ಪಡೆ

Smriti Irani in new executive council of PM Museum & Library

ನವದೆಹಲಿ, ಜ. 15 (ಪಿಟಿಐ) ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ ಸೊಸೈಟಿ ಸದಸ್ಯರಾಗಿ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಮತ್ತು ಖ್ಯಾತ ಚಲನಚಿತ್ರ ನಿರ್ಮಾಪಕ ಶೇಖರ್‌ ಕಪೂರ್‌ ಸೇರ್ಪಡೆಯಾಗಿದ್ದಾರೆ.

ಸಂಸ್ಕೃತಿ ಸಚಿವಾಲಯ ಹೊರಡಿಸಿದ ಅಧಿಕತ ಆದೇಶದ ಪ್ರಕಾರ, ಪ್ರಧಾನ ಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ನಪೇಂದ್ರ ಮಿಶ್ರಾ ಅವರು ಸಂಸ್ಥೆಯ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಪುನಾರಾಯ್ಕೆಯಾಗಿದ್ದಾರೆ.

ಪ್ರತಿಷ್ಠಿತ ಸಂಸ್ಥೆಯ ಸದಸ್ಯರಾಗಿ ಸತಿ ಇರಾನಿ, ಶೇಖರ್‌ ಕಪೂರ್‌, ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್‌ ಕುಮಾರ್‌, ನಿವತ್ತ ಸೇನಾ ಅಧಿಕಾರಿ ಸೈಯದ್‌ ಅತಾ ಹಸ್ನೇನ್‌ ಮತ್ತು ಸಂಸ್ಕಾರ ಭಾರತಿಯ ವಾಸುದೇವ್‌ ಕಾಮತ್‌ ಸೇರಿದಂತೆ ಅನೇಕ ಹೊಸಬರಿಗೆ ಈ ಭಾರಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಪಿಎಂಎಂಎಲ್‌ನ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯು ಅದರ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಉಪಾಧ್ಯಕ್ಷರಾಗಿರುತ್ತಾರೆ.ಇದಲ್ಲದೆ, ಪಿಎಂಎಂಎಲ್‌ನ ಕಾರ್ಯಕಾರಿ ಮಂಡಳಿಯನ್ನು ಸಹ ಪುನರ್ರಚಿಸಲಾಗಿದೆ.

ಕೇಂದ್ರ ಸರ್ಕಾರವು ಈ ಮೂಲಕ ಸಮಾಜ ಮತ್ತು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯ ಮತ್ತು ಗ್ರಂಥಾಲಯ, ನವದೆಹಲಿಯ ಕಾರ್ಯಕಾರಿ ಮಂಡಳಿಯನ್ನು ಪುನರ್ರಚಿಸುತ್ತದೆ ಎಂದು ಜನವರಿ 13 ರ ಆದೇಶವು ಹೇಳುತ್ತದೆ.

ಸೊಸೈಟಿಯ ಸದಸ್ಯತ್ವಕ್ಕೆ ಹೊಸದಾಗಿ ಸೇರ್ಪಡೆಗೊಂಡವರಲ್ಲಿ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಸದಸ್ಯ ಸಂಜೀವ್‌ ಸನ್ಯಾಲ್‌‍, ಶಿಕ್ಷಣ ತಜ್ಞ ಚಾಮು ಕಷ್ಣ ಶಾಸ್ತ್ರಿ ಮತ್ತು ಪುರಾತತ್ವಶಾಸ್ತ್ರಜ್ಞ ಕೆ ಕೆ ಮೊಹಮದ್‌ ಕೂಡ ಸೇರಿದ್ದಾರೆ.

RELATED ARTICLES

Latest News