ಜೈಪುರ, ಜ.15- ರಾಜಸ್ಥಾನದ ಮೆಹಂದಿಪುರದ ಬಾಲಾಜಿ ಪಟ್ಟಣದ ಧರ್ಮಶಾಲಾ ಅತಿಥಿಗಹದಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಮೃತಪಟ್ಟವರೆಲ್ಲಾ ಉತ್ತರಾಖಂಡದ ಡೆಹ್ರಾಡೂನ್‌ನ ರಾಯ್‌ಪುರ ಪ್ರದೇಶದವರು ಎಂದು ಗುರುತಿಸಲಾಗಿದೆ.
ಜ. 12 ರಂದು ಸಮಾಧಿ ವಾಲಿ ಗಲಿಯ ರಾಧಾ-ಕಷ್ಣ ಆಶ್ರಮ ಧರ್ಮಶಾಲಾದಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು ಮತ್ತು ನಿನ್ನೆ ಮಧ್ಯಾಹ್ನ ಚೆಕ್ ಔಟ್ ಮಾಡಲು ನಿರ್ಧರಿಸಿದ್ದರು.
ಸಂಜೆ ಗಹರಕ್ಷಕ ಸಿಬ್ಬಂದಿ ಕೊಠಡಿಗೆ ತಲುಪಿದಾಗ ಯಾವುದೇ ಚಟುವಟಿಕೆ ಗಮನಕ್ಕೆ ಬಂದಿಲ್ಲ ಮತ್ತು ಯಾರೂ ಸ್ಪಂದಿಸಲಿಲ್ಲ. ಸಿಬ್ಬಂದಿ ವ್ಯಾನೇಜರ್‌ಗೆ ಮಾಹಿತಿ ನೀಡಿದ್ದು, ಅವರು ಪರಿಶೀಲಿಸಲು ಹೋದಾಗ ಕೊಠಡಿಯೊಳಗೆ ನಾಲ್ಕು ಮತದೇಹಗಳು ಬಿದ್ದಿರುವುದು ಕಂಡಿತ್ತು. ಮಾಹಿತಿ ಪಡೆದ ಬಾಲಾಜಿ ಪೊಲೀಸರು ಹಾಗೂ ತೋಡಭೀಮ್ ಠಾಣೆ ಪ್ರಭಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.
ಘಟನೆಯನ್ನು ದಢಪಡಿಸಿದ ಕರೋಲಿ ಎಸ್ಪಿ ಬ್ರಿಜೇಶ್ ಜ್ಯೋತಿ ಉಪಾಧ್ಯಾಯ, ಮೆಹಂದಿಪುರ ಬಾಲಾಜಿಯ ಸಮಾಧಿ ವಾಲಿ ಗಲಿಯಲ್ಲಿರುವ ಧರ್ಮಶಾಲಾದಲ್ಲಿ ಕುಟುಂಬದ ನಾಲ್ಕು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ. ತೋಡಭೀಮ್ ಪೊಲೀಸರು ಘಟನಾ ಸ್ಥಳಕ್ಕೆ ತಲುಪಿದಾಗ ಬಾಗಿಲು ತೆರೆದಿತ್ತು ಎಂದು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳದಲ್ಲಿನ ಪ್ರಾಥಮಿಕ ಅವಲೋಕನಗಳ ಆಧಾರದ ಮೇಲೆ ಇಬ್ಬರ ಶವ ನೆಲದ ಮೇಲೆ ಮಲಗಿರುವ ರೀತಿ ಇತ್ತು, ಇನ್ನಿಬ್ಬರ ಶವ ಹಾಸಿಗೆಯ ಮೇಲೆ ಪತ್ತೆಯಾಗಿವೆ. ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ವರದಿಯ ನಂತರ ಸಾವಿಗೆ ನಿಖರ ಕಾರಣವನ್ನು ನಿರ್ಧರಿಸಲಾಗುವುದು. ಆದರೆ ಸಾವಿನ ಹಿಂದಿರುವ ಸ್ಪಷ್ಟ ಕಾರಣದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ.