ಮುಂಬೈ,ಜ.16- ಬರೊಬ್ಬರಿ 32 ಕೋಟಿ ರೂ.ಗಳನ್ನು ನೀಡಿ ನಿರ್ಮಿಸಿರುವ ಹೊಸ ಬಂಗಲೆಯ ಗೃಹಪ್ರವೇಶದ ಸಿದ್ದತೆಗಳನ್ನು ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೋಹ್ಲಿ ಆರಂಭಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಆಲಿಭಾಗ್‌ನಲ್ಲಿ ಖರೀದಿಸಿದ್ದ ಜಾಗದಲ್ಲಿ ಕೊಹ್ಲಿ ದಂಪತಿ ಭವ್ಯ ಬಂಗಲೆಯನ್ನು ನಿರ್ಮಿಸಿದ್ದು, ಈ ಮನೆಯ ಗಹ ಪ್ರವೇಶದ ಸಿದ್ಧತೆಗಳು ಶುರುವಾಗಿದೆ. ಇದೇ ಕಾರಣದಿಂದಾಗಿ ಕಳೆದ ಕೆಲ ದಿನಗಳಿಂದ ಕೊಹ್ಲಿ ಮುಂಬೈನಲ್ಲಿದ್ದಾರೆ ಎಂದು ವರದಿಯಾಗಿದೆ.
2022ರಲ್ಲಿ 19 ಕೋಟಿ ರೂ. ನೀಡಿ ಆಲಿಭಾಗ್‌ನಲ್ಲಿ ವಿರುಷ್ಕಾ ದಂಪತಿ ಎಂಟು ಎಕರೆ ಜಾಗ ಖರೀದಿಸಿದ್ದು, ಇದೀಗ 32 ಕೋಟಿ ರೂ. ವೆಚ್ಚದಲ್ಲಿ ಬೃಹತ್ ಬಂಗಲೆ ನಿರ್ಮಿಸಿದ್ದಾರೆ. ಅವರ ಮನೆಯ ಗೃಹಪ್ರವೇಶ ಇದೇ ವಾರ ನಡೆಯಲಿದೆ ಎಂದು ತಿಳಿದುಬಂದಿದೆ.
ಆರ್ಕಿಟೆಕ್ಚರಲ್ ಡೈಜೆಸ್ಟ್ ಪ್ರಕಾರ, ಹೆಸರಾಂತ ಸ್ಟೀಫನ್ ಆಂಟೋನಿ ಒಲೆಸ್‌ಡಾಲ್ ಟ್ರೂಯೆನ್ ಆರ್ಕಿಟೆಕ್ಟ್ಸ್ ಸಂಸ್ಥೆ ವಿನ್ಯಾಸಗೊಳಿಸಿದ ಶೈಲಿಯಲ್ಲಿ ವಿರಾಟ್ ಕೊಹ್ಲಿಯ ಹೊಸ ಮನೆಯನ್ನು ಕಟ್ಟಲಾಗಿದೆ.
ಈ ಬಂಗಲೆಯೊಂದಿಗೆ ತಾಪಮಾನ-ನಿಯಂತ್ರಿತ ಸಿಮಿಂಗ್ ಪೂಲ್, ಜಕುಝಿ, ಬೆಸ್ಪೋಕ್ ಅಡುಗೆಮನೆ, ವಿಶಾಲವಾದ ಉದ್ಯಾನವನವನ್ನು ಒಳಗೊಂಡಿದೆ. ಇನ್ನು ಒಳಾಂಗಣವು ಇಟಾಲಿಯನ್ ಅಮತಶಿಲೆ, ಟರ್ಕಿಶ್ ಸುಣ್ಣದ ಕಲ್ಲು ಮತ್ತು ಪ್ರಾಚೀನ ಕಲ್ಲುಗಳನ್ನು ಬಳಸಿ ವಿನ್ಯಾಸಗೊಳಿಸಿರುವುದು ವಿಶೇಷ.
ಇದರ ಬೆನ್ನಲ್ಲೇ ಈ ಹಿಂದೆ ಅಲಿಬಾಗ್‌ನಲ್ಲಿ ತಮ ಹಾಲಿಡೇ ಹೋಮ್ ಹೇಗಿರಲಿದೆ ಎಂಬುದನ್ನು ಹಂಚಿಕೊಂಡಿದ್ದ ವಿರಾಟ್ ಕೊಹ್ಲಿಯ ವಿಡಿಯೋ ವೈರಲ್ ಆಗಿದೆ.
ಈ ಮನೆಯಲ್ಲದೇ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಗುರುಗ್ರಾಮ್‌ನಲ್ಲಿ ಸುಮಾರು 80 ಕೋಟಿ ರೂಪಾಯಿ ಮೌಲ್ಯದ ಭವ್ಯ ಭವನವನ್ನು ಹೊಂದಿದೆ. ಇದೀಗ ಅಲಿಬಾಗ್‌ನಲ್ಲಿ ಫಾರ್ಮ್ ಹೌಸ್ ಮಾದರಿಯಲ್ಲಿ ಕೊಹ್ಲಿ ದಂಪತಿ ಹೊಸ ಮನೆ ನಿರ್ಮಿಸಿದ್ದಾರೆ.