Sunday, January 25, 2026
Homeರಾಜ್ಯಯಾರ ಒತ್ತಡಕ್ಕೂ ಮಣಿಯದೆ ರಾಜೀವ್‌ ಗೌಡನನ್ನ ನಮ್ಮ ಪೊಲೀಸರು ಬಂಧಿಸುತ್ತಾರೆ : ಪರಮೇಶ್ವರ್‌

ಯಾರ ಒತ್ತಡಕ್ಕೂ ಮಣಿಯದೆ ರಾಜೀವ್‌ ಗೌಡನನ್ನ ನಮ್ಮ ಪೊಲೀಸರು ಬಂಧಿಸುತ್ತಾರೆ : ಪರಮೇಶ್ವರ್‌

Our police will arrest Rajiv Gowda without bowing to anyone's pressure: Parameshwar

ಬೆಂಗಳೂರು,25- ಧಮಕಿ ಹಾಕಿ ತಲೆಮರೆಸಿಕೊಂಡಿರುವ ರಾಜೀವ್‌ ಗೌಡ ಎಷ್ಟು ದಿನ ಅಂತ ತಪ್ಪಿಸಿಕೊಂಡು ಹೋಗ್ತಾನೆ ನಮ್ಮ ಪೊಲೀಸರು ಖಂಡಿತವಾಗಿಯೂ ಹಿಡಿದೇ ಹಿಡಿಯುತ್ತಾರೆ ಎಂದು ಗೃಹಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಮುಲಾಜಿಲ್ಲ, ಯಾರ ಒತ್ತಡಕ್ಕೂ ಮಣಿಯೋದಿಲ್ಲ ರಾಜೀವ್‌ಗೌಡನನ್ನ ತಕ್ಷಣ ಬಂಧಿಸುತ್ತೇವೆ ಎಂದು ತಿಳಿಸಿದರು. ಪ್ರಕರಣ ದಾಖಲಾಗುತ್ತಿದ್ದಂತೆ ಕ್ರಮ ಕೃಗೊಳ್ಳಲು ತಿಳಿಸಿದ್ದೆ ಆದರೆ ಆತ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದಾರೆ ಕೂನೂನು ಪ್ರಕಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಯಾರು ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನೂ ಬೆಳಗಾವಿಯಲ್ಲಿ 400 ಕೋಟಿ ರೂ.ಲೂಟಿ ಪ್ರಕರಣದ ಕುರಿತು ಮಾಹಿತಿ ನೀಡಿದ ಸಚಿವರು ಮಹಾರಾಷ್ಟ್ರ ಪೊಲೀಸರು ನಮ ಪೊಲೀಸರಿಗೆ ಪತ್ರ ಬರೆದಿದ್ದಾರೆ. ತನಿಖೆಯಲ್ಲಿ ನಮ ಸರ್ಕಾರದ ಸಹಾಯ ಬೇಕಾಗುತ್ತೆ ಎಂದು ಸಹಾಯ ಕೇಳಿದ್ದಾರೆ ಎಂದರು.

ಅದರ ಬಗ್ಗೆ ಹೆಚ್ಚು ಮಾಹಿತಿ ಕೇಳಿದ್ದೇನೆ. ತನಿಖೆ ಇನ್ನೂ ಪ್ರಾರಂಭಿಕ ಹಂತದಲ್ಲಿದೆ. ಹೆಚ್ಚಿನ ಮಾಹಿತಿ ಸಿಕ್ಕಿದ ಮೇಲೆ ನಮ್ಮ ರಾಜ್ಯದ ಪೊಲೀಸರು ಏನು ಕ್ರಮ ತಗೋಬೇಕು ಅನ್ನೋದನ್ನ ನೋಡ್ತಾರೆ. ಪರಿಶೀಲಿಸಿ ಮಾಹಿತಿ ಕೊಡುವಂತೆ ಹೇಳಿದ್ದೇನೆ ಎಂದು ವಿವರಿಸಿದ್ದಾರೆ.
ಗಣರಾಜ್ಯೋತ್ಸವದಲ್ಲಿ ರಾಜ್ಯಪಾಲರು ಭಾಷಣ ಕುರಿತು ಸಂಜೆಯೊಳಗೆ ಗೊತ್ತಾಗುತ್ತೆ, ನಮ ಭಾಷಣದ ಪ್ರತಿಯನ್ನು ನಾನು ನೋಡಿಲ್ಲ. ಗವರ್ನರ್‌ ಯಾವ ರೀತಿ ತೀರ್ಮಾನ ಮಾಡುತ್ತಾರೆ ಎಂದರು.

RELATED ARTICLES

Latest News