Saturday, January 18, 2025
Homeಬೆಂಗಳೂರುಇಂದೇ ಮೆಟ್ರೋ ಪ್ರಯಾಣ ದರ ಏರಿಕೆ ಸಾಧ್ಯತೆ ..?

ಇಂದೇ ಮೆಟ್ರೋ ಪ್ರಯಾಣ ದರ ಏರಿಕೆ ಸಾಧ್ಯತೆ ..?

Metro fare hike likely today..?

ಬೆಂಗಳೂರು,ಜ.17- ಸಾರಿಗೆ ಪ್ರಯಾಣ ದರ ಏರಿಕೆ ಬೆನ್ನಲ್ಲೆ ಜನರಿಗೆ ಮೆಟ್ರೋ ದರ ಏರಿಕೆ ಶಾಕ್‌ ಕೂಡ ಇಂದೇ ನಿಗದಿಯಾಗುವ ಸಾಧ್ಯತೆ ಇದೆ.ಮೆಟ್ರೋ ದರ ಪರಿಷ್ಕರಣೆ ಪ್ರಕ್ರಿಯೆ ಕೊನೆಯ ಹಂತಕ್ಕೆ ತಲುಪಿದೆ. ಈ ಸಂಬಂಧ ಬಿಎಂಆರ್‌ಸಿಎಲ್‌‍ ಅಧಿಕಾರಿಗಳ ಸಭೆ ನಡೆಯಲಿದೆ. ಸಭೆಯಲ್ಲಿ ದರ ಏರಿಕೆ ದರ ಅಂತಮ ಆಗುವ ಸಾಧ್ಯತೆ ಇದೆ.

ಸಭೆಯಲ್ಲಿ ಸುಮಾರು 5 ರೂ ನಿಂದ 10 ರೂ ದರ ಏರಿಕೆ, ಜೊತೆಗೆ ಪರಿಷ್ಕೃತ ದರ ನಿಗದಿ ದಿನಾಂಕ ಕೂಡ ಫೈನಲ್‌ ಆಗುವ ಸಾಧ್ಯತೆ ಇದೆ.ಕಳೆದ ಏಳು ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಈಗ ದರ ಏರಿಕೆ ಅನಿವಾರ್ಯ ಎಂದು ಸಬೂಬು ನೀಡಲಾಗುತ್ತಿದೆ.

ಬಿಎಂಆರ್‌ಸಿಎಲ್‌‍ ದರ ಏರಿಕೆ ಫೈನಲ್‌ ಮಾಡುವ ನಿಟ್ಟಿನಲ್ಲಿ ಬೋರ್ಡ್‌ ಮಿಟಿಂಗ್‌ ಮಾಡಲಿದೆ. ಬೆಳಗ್ಗೆ 10 ಗಂಟೆಗೆ ಫೇರ್‌ ಹೈಕ್‌ ಫಿಕ್ಸೆಷನ್‌ ಕಮಿಟಿ ಜೊತೆ ಬಿಎಂಆರ್‌ಸಿಎಲ್‌‍ ಅಧಿಕಾರಿಗಳು ಕೂಡ ಭಾಗಿಯಾಗಿ ಫೈನಲ್‌ ಮಾಡುವ ಸಾಧ್ಯತೆ ಇದೆ. ಸದ್ಯ ಈಗಾಗಲೇ ದರ ಏರಿಕೆ ಸಂಬಂಧ ಕಮಿಟಿ 40% ರಿಂದ 45% ಏರಿಕೆಗೆ ಚಿಂತನೆ ನಡೆಸಿದೆ.

ಫೇರ್‌ ಹೈಕ್‌ ಫಿಕ್ಸೆಷನ್‌ ಕಮಿಟಿ ಸಿಂಗಾಪುರ, ಹಾಂಕಾಂಗ್‌‍, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ. 2017 ರಲ್ಲಿ ಶೇಕಾಡ 10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು ಮುಂದಿನ ಐದು ವರ್ಷದಲ್ಲಿ 220 ಕಿಮೀ ನಷ್ಟು ವಿಸ್ತರಣೆಯಾಗಲಿದೆ.

ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್‌‍, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15%-20% ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

RELATED ARTICLES

Latest News