Saturday, January 18, 2025
Homeಅಂತಾರಾಷ್ಟ್ರೀಯ | Internationalಅಕ್ರಮವಾಗಿ ಸ್ಪೇನ್‌ಗೆ ತೆರಳುತ್ತಿದ್ದ ದೋಣಿ ಮಗುಚಿ 50 ಮಂದಿ ಸಾವು

ಅಕ್ರಮವಾಗಿ ಸ್ಪೇನ್‌ಗೆ ತೆರಳುತ್ತಿದ್ದ ದೋಣಿ ಮಗುಚಿ 50 ಮಂದಿ ಸಾವು

At Least 50 Migrants Killed As Boat Sinks Near Morocco, Most Victims Pakistanis

ಮೊರಾಕೊ, ಜ. 17- ಬರೊಬ್ಬರಿ ಎಂಬತ್ತು ವಲಸಿಗರನ್ನು ಹೊತ್ತು ಅಕ್ರಮವಾಗಿ ಸ್ಪೇನ್‌ಗೆ ತೆರಳಲು ಪ್ರಯತ್ನಿಸುತ್ತಿದ್ದ ದೋಣಿ ಮೊರಾಕೊದ ಸಮುದ್ರದಲ್ಲಿ ಮಗುಚಿದ ಪರಿಣಾಮ 40 ಪಾಕಿಸ್ತಾನಿಗಳು ಸೇರಿ ಒಟ್ಟು 50 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮೊರೊಕನ್‌ ಅಧಿಕಾರಿಗಳು ದೋಣಿ ಮೂಲಕ 30 ಜನರನ್ನು ರಕ್ಷಿಸಿದರು. ಈ ದೋಣಿ ಜನವರಿ 2 ರಂದು ಮಾರಿಷಸ್‌‍ನಿಂದ ಹೊರಟಿತ್ತು.

50ಕ್ಕೂ ಹೆಚ್ಚು ವಲಸಿಗರು ಅಪಘಾತದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ ಎಂದು ವಲಸೆ ಹಕ್ಕುಗಳ ಗುಂಪು ವಾಕಿಂಗ್‌ ಬಾರ್ಡರ್ಸ್‌ ಹೇಳಿದೆ. ಮತರ ಗುರುತುಗಳನ್ನು ದಢೀಕರಿಸಲು ಮತ್ತು ಬದುಕುಳಿದವರಿಗೆ ನೆರವು ನೀಡಲು ಪ್ರಯತ್ನಗಳು ನಡೆಯುತ್ತಿವೆ. ಈ ಭೀಕರ ಘಟನೆಯ ನಂತರ ಪರಿಸ್ಥಿತಿಯನ್ನು ನಿಭಾಯಿಸಲು ಮೊರಾಕೊ ಮತ್ತು ಪಾಕಿಸ್ತಾನ ಎರಡೂ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ.

ಘಟನೆ ಕುರಿತು ಪಾಕಿಸ್ತಾನದ ವಿದೇಶಾಂಗ ಕಚೇರಿ ಹೇಳಿಕೆ ನೀಡಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ನೆರವಾಗಲು ಮೊರಾಕೊದಲ್ಲಿರುವ ತನ್ನ ರಾಯಭಾರ ಕಚೇರಿ ಸ್ಥಳೀಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದು ಪಾಕಿಸ್ತಾನ ಹೇಳಿದೆ. ಹೆಚ್ಚುವರಿಯಾಗಿ, ಪಾಕಿಸ್ತಾನಿ ಪ್ರಜೆಗಳಿಗೆ ಸಹಾಯ ಮಾಡಲು ಮತ್ತು ಅಗತ್ಯ ನೆರವು ನೀಡಲು ಮೊರಾಕೊದಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯ ತಂಡವನ್ನು ದಖ್ಲಾಗೆ ಕಳುಹಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿನ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಹ ಸಕ್ರಿಯಗೊಳಿಸಲಾಗಿದೆ. ಪ್ರಧಾನ ಮಂತ್ರಿ ಮತ್ತು ವಿದೇಶಾಂಗ ಸಚಿವರು ಸಂತ್ರಸ್ತ ಪಾಕಿಸ್ತಾನಿಗಳಿಗೆ ಸಾಧ್ಯವಿರುವ ಎಲ್ಲ ನೆರವು ನೀಡುವಂತೆ ಸಂಬಂಧಿತ ಸರ್ಕಾರಿ ಸಂಸ್ಥೆಗಳಿಗೆ ನಿರ್ದೇಶನ ನೀಡಿದ್ದಾರೆ. ಮೌರಿಟಾನಿಯಾದಿಂದ ಹೊರಟಿದ್ದ ಹಲವಾರು ಪಾಕಿಸ್ತಾನಿ ಪ್ರಜೆಗಳು ಸೇರಿದಂತೆ 80 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ದೋಣಿಯೊಂದು ಮೊರೊಕ್ಕನ್‌ ಬಂದರಿನ ದಖ್ಲಾದಲ್ಲಿ ಮಗುಚಿದೆ.

RELATED ARTICLES

Latest News